For Quick Alerts
  ALLOW NOTIFICATIONS  
  For Daily Alerts

  ಪುನೀತ್‌ ಮಹತ್ವಾಕಾಂಕ್ಷೆಯ ‘ಅರಸು’ ಗುರುವಾರ ಬಿಡುಗಡೆ

  By Staff
  |

  ಪುನೀತ್‌ ಪಾಲಿಗೆ ಅದೃಷ್ಟ ತರಲಿದೆ ಎನ್ನಲಾಗುವ ಮತ್ತೊಂದು ‘ಅ’ಕಾರದ ಚಿತ್ರ ‘ಅರಸು’, ಈ ಗುರುವಾರ(ಜ.25) ರಾಜ್ಯದೆಲ್ಲೆಡೆ ಬಿಡುಗಡೆಯಾಗಲಿದೆ.

  ಪಾರ್ವತಮ್ಮ ರಾಜ್‌ಕುಮಾರ್‌ ನಿರ್ಮಾಣದ ‘ಅರಸು’ ಚಿತ್ರದಲ್ಲಿ ಅರಸಿಯರಾಗಿ ರಮ್ಯಾ, ಮೀರಾ ಜಾಸ್ಮಿನ್‌ ಅಭಿನಯಿಸಿದ್ದಾರೆ. ತೆಲುಗು-ತಮಿಳಿನ ಸೊಬಗಿನ ರಾಣಿ ಶ್ರೇಯಾ, ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದೆಲ್ಲ ಗಾಂಧಿನಗರ ಪಿಸುಗುಟ್ಟುತ್ತಿದೆ. ಆದರೆ ಈ ಬಗ್ಗೆ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ‘ಅರಸು’ ತಂಡ ಬಾಯಿಬಿಟ್ಟಿಲ್ಲ.

  ಚಿತ್ರ ನಮಗಂತೂ ತೃಪ್ತಿ ನೀಡಿದೆ. ಅಭಿಮಾನಿಗಳು ಅಂತಿಮ ತೀರ್ಪು ನೀಡಬೇಕು ಅನ್ನುತ್ತಾರೆ ಪುನೀತ್‌ ಮತ್ತು ರಾಘವೇಂದ್ರ ರಾಜ್‌ಕುಮಾರ್‌. ಈ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ ಹೇಳೋ ಪ್ರಕಾರ -‘ಅಭಿ’, ‘ಆಕಾಶ್‌’ನಂತೆಯೇ ಪುನೀತ್‌ರೊಂದಿಗಿನ ನನ್ನ ಮೂರನೇ ಚಿತ್ರವಾದ ‘ಅರಸು’ ಸಹಾ ಗೆದ್ದೇ ಗೆಲುತ್ತೆ ನೋಡ್ತಿರಿ...

  ಝೇಂಕಾರ್‌ ಆಡಿಯೋ ಕಂಪನಿ ಚಿತ್ರದ ಆಡಿಯೋ ಮತ್ತು ಸಿಡಿಗಳನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಒಳ್ಳೆ ಫಲಿತಾಂಶ ಸಿಕ್ಕಿದೆಯಂತೆ. ಮಹೇಶ್‌ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಕೋಮಲ್‌, ಶ್ರೀನಿವಾಸಮೂರ್ತಿ ಮತ್ತಿತರರು ತಾರಾಗಣದಲ್ಲಿದ್ದಾರೆ.

  ಎನ್‌ಆರ್‌ಐ ಪಾತ್ರದಲ್ಲಿ ಪುನೀತ್‌ ಅಭಿನಯಿಸಿದ್ದಾರೆ. ಜರ್ಮನಿ, ಇಟಲಿಯಲ್ಲಿ ಚಿತ್ರೀಕರಣ ನಡೆದಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X