»   » ಕುಮಾರ್‌ ಗೋವಿಂದಾ ಆಲಾರೆ ಆಲಾ

ಕುಮಾರ್‌ ಗೋವಿಂದಾ ಆಲಾರೆ ಆಲಾ

Posted By:
Subscribe to Filmibeat Kannada

ಇದೇನು ಸಣ್ಣ ಬ್ರೇಕ್‌ ಅಲ್ಲ! ಸುಮಾರು ವರ್ಷಗಳ ಬಳಿಕ ನಟ-ನಿರ್ಮಾಪಕ ಕುಮಾರ್‌ಗೋವಿಂದ್‌, ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಚಿತ್ರ ನಿರ್ದೇಶನಕ್ಕೂ ಇಳಿದಿದ್ದಾರೆ.

‘ಶ್‌’ ಮತ್ತು ‘ಅನುರಾಗ ಸಂಗಮ’ ಖ್ಯಾತಿಯ ಕುಮಾರ್‌ ಗೋವಿಂದ್‌, ಈಗ ನಿರ್ಮಾಣ ಮಾಡುತ್ತಿರುವ ಚಿತ್ರದ ಹೆಸರು; ‘ಸತ್ಯ’. ಕಳೆದ ಹತ್ತುವರ್ಷಗಳಿಂದ ಬಣ್ಣದ ಬದುಕಿನಿಂದ ದೂರ ಉಳಿದಿದ್ದ ಅವರಿಗೆ ಯಾವ ಸತ್ಯಗಳು ಅರ್ಥವಾಗಿವೆಯೋ ಗೊತ್ತಿಲ್ಲ.

ಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ, ನಟನೆ ಸೇರಿದಂತೆ ‘ಸತ್ಯ’ ಚಿತ್ರದ ವಿವಿಧ ಹೊಣೆಗಳನ್ನು ಅವರು ಹೊತ್ತಿದ್ದಾರೆ. ಈ ಚಿತ್ರದ ಮೂಲಕ ಸಾಕಷ್ಟು ಹೊಸಬರಿಗೆ ಅವಕಾಶ ನೀಡುವ ರಿಸ್ಕನ್ನು ಸಹಾ ಅವರು ಬೆನ್ನಿಗೆ ಹಾಕಿಕೊಂಡಿದ್ದಾರೆ.

ಚಿತ್ತದ ಮೊದಲ ಹಂತದ ಚಿತ್ರೀಕರಣ ಕುಲುಮನಾಲಿ, ಆಗ್ರಾ, ರಾಜಾಸ್ತಾನ್‌, ಮುಂಬೈನಲ್ಲಿ ನಡೆದಿದೆ. ಹುಬ್ಬಳ್ಳಿ ಹುಡುಗಿ ಮಾಧುರಿ ನಾಯಕಿಯಾಗಿ ಈ ಚಿತ್ರದ ಮೂಲಕ ಬಣ್ಣದ ಬದುಕಿಗೆ ಪ್ರವೇಶ ಪಡೆದಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada