»   » ಜಗ್ಗೇಶ್‌ ನೋವಿಗೆ ವಿಷ್ಣುವರ್ಧನ್‌ ಸಾಮೀಪ್ಯದ ಮುಲಾಮು!

ಜಗ್ಗೇಶ್‌ ನೋವಿಗೆ ವಿಷ್ಣುವರ್ಧನ್‌ ಸಾಮೀಪ್ಯದ ಮುಲಾಮು!

Subscribe to Filmibeat Kannada


ಜಗ್ಗೇಶ್‌ಗೆ ನಾಯಕಿಯರು ಸಿಗುತ್ತಿಲ್ಲ. ಈ ನೋವು ಅವರನ್ನು ಬಹಳ ದಿನಗಳಿಂದ ಕಾಡುತ್ತಿದೆ. ಯಾಕೋ ಜಗ್ಗೇಶ್‌ ಹೆಸರು ಕೇಳಿದ ತಕ್ಷಣ ನಟಿಮಣಿಯರು ಮುಖ ಆ ಕಡೆ ತಿರುಗಿಸುತ್ತಾರೆ. ಇದು ನಟಿಮಣಿಯರ ಕತೆ. ಆದರೆ ನಮ್ಮ ನಟರಿಗೆ ಜಗ್ಗೇಶ್‌ ಬಗ್ಗೆ ಅಪಾರ ಅಭಿಮಾನ.

ಮೇಲಿನ ಮಾತಿಗೆ ನಿದರ್ಶನವೋ ಎಂಬಂತೆ, ಸದ್ಯದಲ್ಲಿಯೇ ಡಾ. ವಿಷ್ಣುವರ್ಧನ್‌-ಜಗ್ಗೇಶ್‌ ಜೋಡಿಯ ಚಿತ್ರ ಸೆಟ್ಟೇರಲಿದೆ. ಈ ಚಿತ್ರದ ನಿರ್ಮಾಪಕರು ಗೋವಿಂದ್‌. ಇವರು ಈ ಹಿಂದೆ ‘ವಿಷ್ಣುಸೇನೆ’ ನಿರ್ಮಿಸಿದ್ದರು. ವಿಷ್ಣು ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಜಗ್ಗೇಶ್‌ ಖುಷಿಯಲ್ಲಿದ್ದಾರೆ. ಆಕಾಶಕ್ಕೆ ಮೂರೇ ಗೇಣು ಎನ್ನುವಷ್ಟು ಸಂಭ್ರಮ ಅವರದು.

ವಿಷ್ಣು ಸಾರ್‌ ಬಗ್ಗೆ ನನಗೆ ಮೊದಲಿನಿಂದಲೂ ಅಭಿಮಾನ. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎನ್ನುತ್ತಾರೆ ಜಗ್ಗೇಶ್‌. ನಾಗಣ್ಣ ನಿರ್ದೇಶನದ ಈ ಚಿತ್ರದ ಫ್ರೇಮ್‌ಫ್ರೇಮ್‌ನಲ್ಲೂ ಹಾಸ್ಯ ತುಂಬಿ ತುಳುಕುತ್ತದೆಯಂತೆ.

‘ಎದ್ದೇಳು ಮಂಜುನಾಥ’ , ‘ಕೋಡಗಾನ ಕೋಳಿ ನುಂಗಿತ್ತಾ’ ಮತ್ತು ‘ಮನ್ಮಥ ’ ಜಗ್ಗೇಶ್‌ರ ಮುಂದಿರುವ ಹೊಸ ಚಿತ್ರಗಳು. ‘ಮನ್ಮಥ’ದಲ್ಲಿನ ಜಗ್ಗೇಶ್‌ ಪಾತ್ರ ವಿಕಾರಿಗಳನ್ನೂ ಮೀರಿಸುವಂತಿದೆ! ಆ ಚಿತ್ರದ ಪೋಸ್ಟರ್‌ಗಳನ್ನು ನಟಿಮಣಿಯರು ನೋಡದಂತೆ ಮುಚ್ಚಿಡುವ ಕೆಲಸವನ್ನ ಜಗ್ಗೇಶ್‌ ಮಾಡಬೇಕು... ಯಾಕೆಂದರೆ...?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada