»   » ಮಾರ್ಚ್‌ 24, 26,28 ಹಾಗೂ 29 ರಂದು ಪರಿಣತರಿಂದ ಆದಾಯ ತೆರಿಗೆ ಕುರಿತು ವಿವರ- ಸಲಹೆ

ಮಾರ್ಚ್‌ 24, 26,28 ಹಾಗೂ 29 ರಂದು ಪರಿಣತರಿಂದ ಆದಾಯ ತೆರಿಗೆ ಕುರಿತು ವಿವರ- ಸಲಹೆ

Subscribe to Filmibeat Kannada

ಆದಾಯ ತೆರಿಗೆಯ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕೆ ?
ಹಾಗಿದ್ದಲ್ಲಿ ಡಿಡಿ-1 ಹಾಗೂ ಡಿಡಿ-9ರಲ್ಲಿ ಪ್ರಸಾರವಾಗುತ್ತಿರುವ ‘ಪರಿಚಯ ಪರಸ್ಪರ’ ಕಾರ್ಯಕ್ರಮವನ್ನು ತಪ್ಪದೇ ನೋಡಿದೆ. ಈ ಕಾರ್ಯಕ್ರಮ ಆದಾಯ ತೆರಿಗೆಗೆ ಸಂಬಂಧಿಸಿದಂತೆ ವಿವರಗಳನ್ನು ನೀಡಲಿದೆ.

ಧಾರಾವಾಹಿ ರೂಪದಲ್ಲಿ ಪ್ರಸಾರವಾಗುತ್ತಿರುವ ಪರಿಚಯ ಪರಸ್ಪರ ಕಾರ್ಯಕ್ರಮದ ಮೊದಲ ಕಂತು ಮಾರ್ಚ್‌ 21ರಂದು ಈಗಾಗಲೇ ಪ್ರಸಾರವಾಗಿದೆ. ಇನ್ನುಳಿದ ಕಂತುಗಳು ಮಾರ್ಚ್‌ 24, 26, 28 ಹಾಗೂ 29ರ ರಾತ್ರಿ ಪ್ರಸಾರವಾಗಲಿವೆ.

ಮಾರ್ಚ್‌ 24ರಂದು ನಡೆಯುವ ಕಾರ್ಯಕ್ರಮ ಇನ್ಫೋಸಿಸ್‌ನ ಕಾರ್ಯನಿರ್ವಾಹಕ ಅಧಿಕಾರಿ ನಂದನ್‌ ನೀಲೆಕಣಿ ಅವರ ನೇತೃತ್ವದಲ್ಲಿ ನಡೆಯಲಿದೆ. ಇಬ್ಬರು ಐಟಿ ತಜ್ಞರು ವೀಕ್ಷಕರ ಪ್ರಶ್ನೆಗೆ ಉತ್ತರಿಸುವರು. ಕಾರ್ಯಕ್ರಮವು ಮಾರ್ಚ್‌ 24ರಂದು ರಾತ್ರಿ 8 ಗಂಟೆಗೆ ಬಿತ್ತರವಾಗಲಿದೆ.

ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಬೆಂಗಳೂರು ವಿಭಾಗದ ಸಂಪಾದಕ ಎಚ್‌. ಎಸ್‌. ಬಲರಾಮ್‌ ಅವರು ಪರಿಚಯಿಸುವ ತೆರಿಗೆ ಮಾಹಿತಿ ಕಾರ್ಯಕ್ರಮ ಮಾರ್ಚ್‌ 26ರಂದು ಸಂಜೆ 6 ಗಂಟೆಗೆ ಹಾಗೂ ಮಾರ್ಚ್‌ 29ರಂದು ರಾತ್ರಿ ಎಂಟು ಗಂಟೆಗೆ ಪ್ರಸಾರವಾಗಲಿದೆ.

ಇನ್‌ಕಂ ಟ್ಯಾಕ್ಸ್‌ ಬಗ್ಗೆ ಸಾಮಾನ್ಯ ಮಾಹಿತಿ ಹಾಗೂ ಸಮಗ್ರ ವಿವರ ನೀಡುವ ಕಾರ್ಯಕ್ರಮವು ಮಾರ್ಚ್‌ 28ರಂದು ಸಂಜೆ ಆರು ಗಂಟೆಗೆ ನಡೆಯಲಿದೆ. ವೀಕ್ಷಕರು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳನ್ನು ಈ ಕಾರ್ಯಕ್ರಮಗಳ ಮೂಲಕ ಪಡೆದುಕೊಳ್ಳಬಹುದು ಎಂದು ಡಿಡಿ ಚಾನೆಲ್‌ನ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada