»   » ಕನ್ನಡ ಚಿತ್ರರಂಗದ ಚೋಮ ಎಂ.ವಿ.ವಾಸುದೇವ ರಾವ್‌ ನಿಧನ

ಕನ್ನಡ ಚಿತ್ರರಂಗದ ಚೋಮ ಎಂ.ವಿ.ವಾಸುದೇವ ರಾವ್‌ ನಿಧನ

Posted By: Staff
Subscribe to Filmibeat Kannada

ಬೆಂಗಳೂರು : ರಾಷ್ಟ್ರಪ್ರಶಸ್ತಿ ವಿಜೇತ ಚೋಮನದುಡಿ ಚಿತ್ರದ ಚೋಮನ ಪಾತ್ರದಿಂದ ಪ್ರಸಿದ್ಧರಾದ ಹಿರಿಯ ನಟ ಎಂ.ವಿ.ವಾಸುದೇವ ರಾವ್‌ ಶುಕ್ರವಾರ ಬೆಳಗ್ಗೆ ಕೆಂಪೇಗೌಡ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ವಾಸುದೇವ ರಾವ್‌ ಅವರು ದೀರ್ಘ ಕಾಲದಿಂದ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನು ಮೃತರು ಅಗಲಿದ್ದಾರೆ. ವಾಸುದೇವ ರಾವ್‌ ಅವರ ಮೃತ ದೇಹವನ್ನು ಜಯನಗರದ ಅವರ ನಿವಾಸದಲ್ಲಿ ಇರಿಸಲಾಗಿದೆ. ಸಿಂಗಪುರ್‌ನಲ್ಲಿರುವ ಅವರ ಪುತ್ರನಿಗೆ ನಿರೀಕ್ಷಿಸಲಾಗುತ್ತಿದ್ದು , ಆತನ ಆಗಮನದ ನಂತರ ಅಂತ್ಯಕ್ರಿಯೆ ನಡೆಯಲಿದೆ.

ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚೋಮನದುಡಿ ಚಿತ್ರದಿಂದ ಪ್ರಸಿದ್ಧಿಗೆ ಬಂದ ವಾಸುದೇವರಾವ್‌, ಆನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದರೂ ಚೋಮನ ಹೆಸರಿನಿಂದಲೇ ಅವರನ್ನು ಉದ್ಯಮ ಗುರ್ತಿಸಿತ್ತು . ಚೋಮನದುಡಿ 1975 ರಲ್ಲಿ ರಾಷ್ಟ್ರಪತಿಗಳ ಸುವರ್ಣ ಪದಕ ಪ್ರಶಸ್ತಿಗೆ ಪಾತ್ರವಾಗಿತ್ತು . ಜೀತ ಮತ್ತು ಜಾತಿಯ ಶೋಷಣೆ, ದುಡಿಯನ್ನು ನುಡಿಸುವ ಕಲಾವಿದ ಹಾಗೂ ಭೂಮಿಗಾಗಿ ತಹತಹಿಸುವ ರೈತನ ಪಾತ್ರದಲ್ಲಿ ವಾಸುದೇವ ರಾವ್‌ ಪರಕಾಯ ಪ್ರವೇಶ ಮಾಡಿದ್ದರು. ಚೋಮನ ಪಾತ್ರಕ್ಕೆ ವಾಸುದೇವ ರಾವ್‌ ಅವರು ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದರು.

English summary
Chomanadudi fame M.V.Vasudeva Rao passes away
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada