»   » ‘ಮುತ್ತು’ ನೀಡಲು ಐಶ್ವರ್ಯ ಸಮ್ಮತಿ

‘ಮುತ್ತು’ ನೀಡಲು ಐಶ್ವರ್ಯ ಸಮ್ಮತಿ

Posted By:
Subscribe to Filmibeat Kannada

ಮುಂಬಯಿ : ಲಂಡನ್‌ನತ್ತ ಮುಖ ಮಾಡಿ ನಿಂತಿರುವ ಕರಾವಳಿಯ ಬಾಂಡ್‌ ಬೆಡಗಿ ಐಶ್ವರ್ಯ ರೈ ‘ಚುಂಬನಕ್ಕೆ ಸೈ’ ಎನ್ನುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾಳೆ. ಈ ಮುನ್ನ ‘ಚುಂಬನ’ದ ದೃಶ್ಯಗಳನ್ನು ನಿರಾಕರಿಸುತ್ತಿದ್ದ ಹಾಗೂ ಕ್ಲೋಸಪ್‌ನಲ್ಲಿ ಮುತ್ತು ನೀಡುವ ದೃಶ್ಯಗಳನ್ನು ಚಿತ್ರೀಕರಿಸಲು ಖಡಾಖಂಡಿತವಾಗಿ ಒಲ್ಲೆ ಎಂದಿದ್ದ ಐಶ್ವರ್ಯ ಈಗ ಉದಾರಿ.

ತನ್ನ ಅತಿ ಹತ್ತಿರದ ಆಪ್ತ ಸ್ನೇಹಿತ ವಿವೆಕ್‌ ಒಬೆರಾಯ್‌ ನಾಯಕ ನಟನಾಗಿರುವ, ಕಾರ್ತಿಕ್‌ ನಿರ್ದೇಶನದ ಕ್ಯಾ ಹೋ ಗಯಾ ನ ? ಚಿತ್ರದಲ್ಲಿ ಐಶ್ವರ್ಯ ಬಿಸಿಬಿಸಿ ಮುತ್ತಿನ ದೃಶ್ಯವೊಂದರಲ್ಲಿ ಭಾಗವಹಿಸಿದ್ದಾಳಂತೆ. ‘ತುಟಿಗೆ ತುಟಿ’ ಬೆಸೆಯುವ ದೃಶ್ಯ ಚಿತ್ರದ ಹೈಲೈಟ್‌ಗಳಲ್ಲಿ ಒಂದೆನ್ನಲಾಗಿದೆ.

ಚಿತ್ರದ ಕಥೆಗೆ ಚುಂಬನ ದೃಶ್ಯ ಅಗತ್ಯವಾಗಿದ್ದರೆ ನಾನ್‌ ರೆಡಿ ಎನ್ನುವುದು ಸದ್ಯಕ್ಕೆ ಐಶ್ವರ್ಯ ರೈ ಸಿದ್ಧಾಂತ. ಅಂದಹಾಗೆ, ಚುಂಬನ ದೃಶ್ಯಗಳಿಗೆ ಐಶ್ವರ್ಯಾ ಸಮ್ಮತಿ ನೀಡಿರುವುದು ಯಾಕೆ ? ಅದು ಹಾಲಿವುಡ್‌ ಪ್ರವೇಶದ ಪರಿಣಾಮವಾ ?

ಬಾಲಿವುಡ್‌ ಆದರೂ ಸರಿ, ಹಾಲಿವುಡ್‌ ಆದರೂ ಅಷ್ಟೇ, ಚುಂಬನ ದೃಶ್ಯಗಳಿಗೆ ನಾನೊಲ್ಲೆ ಎಂದು ಐಶ್ವರ್ಯ ಈ ಮುನ್ನ ಹೇಳಿಕೆ ನೀಡಿದ್ದರು.

(ಏಜನ್ಸೀಸ್‌)

Post your views

ಪೂರಕ ಓದಿಗೆ-
ಐಶ್ವರ್ಯಾ ರೈ ಲಂಡನ್‌ಗೆ ವಲಸೆ ?


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada