ಶನಿವಾರ ರಾಜ್‌ಕುಮಾರ್ ಪುಣ್ಯತಿಥಿ : ನಗರದಿ ಕಟ್ಟೆಚ್ಚರ
ಬೆಂಗಳೂರು : ಕೆಂಗೇರಿ ಬಳಿಯ ಪುನೀತ್ ಫಾರಂನಲ್ಲಿ ಡಾ.ರಾಜ್‌ಕುಮಾರ್ ಅವರ ಪುಣ್ಯತಿಥಿಯನ್ನು ಶನಿವಾರ(ಏ.22) ಮಧ್ಯಾಹ್ನ ಏರ್ಪಡಿಸಲಾಗಿದೆ.
ರಾಜ್ ಕುಟುಂಬವರ್ಗ, ಮಿತ್ರವರ್ಗ, ಬಂಧುವರ್ಗ , ಆಯ್ದ ಗಣ್ಯರು ಮತ್ತು ಪತ್ರಕರ್ತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ರಾಜ್‌ಕುಮಾರ್ ನಿಧನರಾಗಿ ಇಂದಿಗೆ 11 ದಿವಸ, ಈ ಹಿನ್ನೆಲೆಯಲ್ಲಿ ಪುಣ್ಯತಿಥಿಯನ್ನು ನಡೆಸಲಾಗುತ್ತಿದೆ.
ನಗರದ ಕಂಠೀರವ ಸ್ಪುಡಿಯೋದಲ್ಲಿ ರಾಜ್ ಕುಟುಂಬವರ್ಗ, ರಾಜ್ ಸಮಾಧಿಗೆ ಪೂಜೆ ಸಲ್ಲಿಸಲಿದೆ. ಪುಣ್ಯತಿಥಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ರಾಜ್ ಸಮಾಧಿ ಬಳಿ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications