»   » ಶಿಲ್ಪಾಶೆಟ್ಟಿ, ರಿಮಾಸೇನ್‌ ಮತ್ತು ಖುಷ್ಟೂರ ತಪ್ಪಾದರೂ ಏನು?

ಶಿಲ್ಪಾಶೆಟ್ಟಿ, ರಿಮಾಸೇನ್‌ ಮತ್ತು ಖುಷ್ಟೂರ ತಪ್ಪಾದರೂ ಏನು?

Posted By:
Subscribe to Filmibeat Kannada

ಈ ಚೆಂದುಳ್ಳಿ ಚೆಲುವೆಯರು ಮಾಡಿದ ಅಪರಾಧ ಏನ್‌ ಗೊತ್ತಾ? ಬಹಳ ಮಜವಾಗಿದೆ!

ಪತ್ರಿಕೆಯಾಂದಕ್ಕೆ ಅಶ್ಲೀಲ ಭಂಗಿಯಲ್ಲಿ ಪೋಸ್‌ ನೀಡಿದ್ದ ಶಿಲ್ಪಾ ಶೆಟ್ಟಿ ಮತ್ತು ರಿಮಾ ಸೇನ್‌ ಪೇಚಿಗೆ ಸಿಲುಕಿದ್ದಾರೆ! ತಮಿಳಿನ ಸಂಜೆ ಪತ್ರಿಕೆಯಾಂದರಲ್ಲಿ ಎಂದೋ ಪ್ರಕಟವಾಗಿದ್ದ ಸೆಕ್ಸಿ ಬ್ಲೋಅಪ್‌ಗಳು, ಇಷ್ಟೊಂದು ಗಂಭೀರವಾಗಿ ಕಾಲಿಗೆ ಸುತ್ತಿಕೊಳ್ಳುತ್ತವೆ ಎಂಬುದನ್ನು ಈ ವೈಯ್ಯಾರಿಯರು ಯೋಚಿಸಿರಲಿಕ್ಕಿಲ್ಲ.

ಶಿಲ್ಪಾ ಮತ್ತು ರಿಮಾಸೇನ್‌ರ ಶೃಂಗಾರಪೂರ್ಣ ಪುಳಕಮಯ ಚಿತ್ರಗಳನ್ನು ಪ್ರಕಟಿಸಿದ ಪತ್ರಿಕೆ ಸಂಪಾದಕ ಮುರುಗನ್‌ ವಿರುದ್ಧವೂ ನ್ಯಾಯಾಲಯ ವಾರಂಟ್‌ ಹೊರಡಿಸಿದೆ.

ಇಷ್ಟಕ್ಕೂ ಆಗಿದ್ದೇನು? : ಎಲ್ಲಾ ಪತ್ರಿಕೆ ಸಂಪಾದಕರಂತೆಯೇ ಮುರುಗನ್‌ ಸಹಾ, ತಮ್ಮ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಶಿಲ್ಪಾ ಮತ್ತು ರಿಮಾರ ಚಿತ್ರಗಳನ್ನು ಈ ಹಿಂದೆ ಪ್ರಕಟಿಸಿದ್ದರು. ಇಂತಹ ಚಿತ್ರಗಳಿಂದ ಮಹಿಳೆಯರ ಮಾನ ಹರಾಜಾಗಿದೆ ಎಂದು ದಕ್ಷಿಣಮೂರ್ತಿ ಎಂಬ ವಕೀಲರು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದರು. ವಿಚಾರಣೆ ವೇಳೆ ಗೈರು ಹಾಜರಾದ್ದರಿಂದ, ಬೇಸತ್ತ ಮದುರೈನ ಸ್ಥಳೀಯ ನ್ಯಾಯಾಲಯ, ನಟೀಮಣಿಯರ ಬಂಧನಕ್ಕೆ ಸೂಚನೆ ನೀಡಿದೆ.

ಖುಷ್ಟೂ ಕತೆ : ‘ ಸುಮ್ಮನಿರದೇ ಮೈಮೇಲೆ ಇಲಿಬಿಟ್ಟುಕೊಂಡರು’ ಎನ್ನುವಂತಾಗಿದೆ ಮಾಜಿ ಮೋಹಕ ಸುಂದರಿ ಖುಷ್ಟೂ ಕತೆ.

ವಿವಾಹ ಪೂರ್ವ ಲೈಂಗಿಕತೆ ತಪ್ಪೇನಲ್ಲ ಎಂಬ ಹೇಳಿಕೆ, ಅವರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದೆ. ಈ ಪ್ರಕರಣದ ವಿಚಾರಣೆಗೆ ಗೈರುಹಾಜರಾಗಿದ್ದಾರೆಂದು ನ್ಯಾಯಾಲಯವೊಂದು, ಜಾಮೀನು ರಹಿತ ಬಂಧನ ವಾರಂಟ್‌ನ್ನು ಇತ್ತೀಚೆಗೆ ಹೊರಡಿಸಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada