ಮರ್ಚೆಂಟ್ ಆಫ್ ವೆನಿಸ್ : ಶೈಲಾಕ್ ಪಾತ್ರದಲ್ಲಿ ಪ್ಯಾಸಿನೋ !
ಈ ಶತಮಾನ ಕಂಡ ಓರ್ವ ಮಹಾನ್ ನಟ ಅಮೆರಿಕಾದ ಪ್ಯಾಸಿನೋ. ಆಸ್ಕರ್ ಪ್ರಶಸ್ತಿ ವಿಜೇತ ಆಲ್ ಪ್ಯಾಸಿನೋ ಮತ್ತೆ ಬರುತ್ತಿದ್ದಾರೆ. ಈ ಬಾರಿ ಶೈಲಾಕನ ಪಾತ್ರದಲ್ಲಿ !
ವಿಲಿಯಮ್ ಶೇಕ್ಸ್‌ಪಿಯರ್‌ನ ಮೇರು ಕೃತಿಗಳಲ್ಲೊಂದಾದ ‘ ಮರ್ಚೆಂಟ್ ಆಫ್ ವೆನಿಸ್ ’ ನಾಟಕಕ್ಕೆ ಸಿನಿಮಾ ವೇಷ ತೊಡಿಸುತ್ತಿರುವವರು ನಿರ್ಮಾಪಕ ಕ್ಯಾರಿ ಬ್ರೊಕಾ. ಮೂವತ್ತು ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಬಡ್ಡೀಮಗ, ಜಿಪುಣಾಗ್ರೇಸರ ಶೈಲಾಕ್‌ನ ಜತೆ ಪಾಪದ ಪ್ರಾಣಿ ಆಂಟೋನಿ ಪಾತ್ರದಲ್ಲಿ ನಟಿಸುವವರು ಇಯಾನ್ ಮೆಕ್ಲೀನ್. ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ ಬಸ್ಸಾನಿಯೋ ಮತ್ತು ಪೋರ್ಟಿಯಾ ಎಂಬ ಎರಡು ಪಾತ್ರಗಳಿವೆ. ಈ ದಂಪತಿಗಳನ್ನು ಜಾಲಿ-ಜೋಡಿಯಾಗಿ ಚಿತ್ರಿಸಿದ್ದಾನೆ ಶೇಕ್ಸ್‌ಪಿಯರ್. ಸಿನಿಮಾದಲ್ಲಿ ಈ ಪಾತ್ರಗಳಿಗೆ ಜೀವ ತುಂಬಲಿದ್ದಾರೆ ಜೋಸೆಫ್ ಫೀನ್ಸ್ ಮತ್ತು ಕೇಟ್ ಬ್ಲಾಂಕೆಟ್. ಚಿತ್ರೀಕರಣ ಬರುವ ಸೆಪ್ಟೆಂಬರ್‌ನಿಂದ.
ನಾವೆಲ್ಲ ಕಾಲೇಜಿನಲ್ಲಿದ್ದಾಗ ಪಠ್ಯವಾಗಿಯೋ ಅಥವಾ ಇಂಗ್ಲಿಷ್ ನಾಟಕದ ಆಸಕ್ತಿಯಿಂದಲೋ ಓದಿದ ‘ ಮರ್ಚೆಂಟ್ ಆಫ್ ವೆನಿಸ್ ’ ಸಿನಿಮಾ ಆಗುತ್ತಿರುವುದು ಸಂತೋಷದ ಸಮಾಚಾರ. ಈ ಸಮಾಚಾರ PeopleNews ನಲ್ಲಿ ಪ್ರಕಟವಾಗಿದೆ. ಆ ಸುದ್ದಿಯಲ್ಲಿ ನಿರ್ಮಾಪಕ ಕ್ಯಾರಿ ಹೇಳುತ್ತಾನೆ :
ಈ ಚಿತ್ರವನ್ನು 16ನೇ ಶತಮಾನದ ಸಾಮಾಜಿಕ ಸನ್ನಿವೇಶದಲ್ಲಿ ಚಿತ್ರಿಸಲಾಗುತ್ತದೆ. ಅಂದರೆ Period Film ಅಂದರೆ, ಕ್ಯಾರಿಯ ಸಂದರ್ಭದಲ್ಲಿ ‘ ಕಾಲಗರ್ಭದ ಬೆಳ್ಳಿಹಬ್ಬ ! ’
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications