»   » ನವನಾಯಕಿಯರಾದ ರಕ್ಷಿತಾ, ರಮ್ಯ ಕನಸುಗಾರನನ್ನು ಅಂಕಲ್‌ ಅಂತ ಸಂಬೋಧಿಸಿ, ಕಾಲ್‌ಷೀಟ್‌ ಕೊಡಲು ಒಲ್ಲೆ ಅಂದದ್ದೇ ಗಾಂಧಿನಗರದವರ ಪಾಲಿಗೆ ಕುರುಕು ತಿಂಡಿಯಾಗಿದೆ.

ನವನಾಯಕಿಯರಾದ ರಕ್ಷಿತಾ, ರಮ್ಯ ಕನಸುಗಾರನನ್ನು ಅಂಕಲ್‌ ಅಂತ ಸಂಬೋಧಿಸಿ, ಕಾಲ್‌ಷೀಟ್‌ ಕೊಡಲು ಒಲ್ಲೆ ಅಂದದ್ದೇ ಗಾಂಧಿನಗರದವರ ಪಾಲಿಗೆ ಕುರುಕು ತಿಂಡಿಯಾಗಿದೆ.

Subscribe to Filmibeat Kannada

*ಶರಣ್ಯ

ರವಿ ಅಂಕಲ್‌!
ಹಾಗಂತ ನವ ತಾರೆಗಳಾದ ರಮ್ಯ ಮತ್ತು ರಕ್ಷಿತಾ ಹೇಳಿದ್ದೇ ತಡ, ರವಿ ತಮ್ಮ ವಯಸ್ಸನ್ನು ತಡಕಾಡಿ ನೋಡಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ಚಾಲ್ತಿಯಲ್ಲಿರುವ ರಮ್ಯ ಹಾಗೂ ರಕ್ಷಿತಾ- ಇಬ್ಬರನ್ನೂ ತಮ್ಮ ಒಂದೇ ಚಿತ್ರದಲ್ಲಿ ನಟಿಸುವಂತೆ ರವಿ ಆಫರ್‌ ಮುಂದಿಟ್ಟರು. ಒಂದು ಕಾಲದ ‘ಪ್ರೇಮ ಲೋಕ’ ದ ಕನಸುಗಾರನ ಆಫರಿದು ಅಂತ ಈ ಇಬ್ಬರೂ ಉದಯೋನ್ಮುಖ ತಾರೆಯರ ಪೈಕಿ ಯಾರಿಗೂ ಅನಿಸಲಿಲ್ಲ. ಹಿಂದೂಮುಂದೂ ನೋಡದೆ ಕಾಲ್‌ಶೀಟ್‌ ಕೊಡೋಲ್ಲ ಅಂದುಬಿಟ್ಟರು.

ಅಷ್ಟು ಹೇಳಿ ಸುಮ್ಮನಾಗಿದ್ದರೆ ಚೆನ್ನಾಗಿತ್ತು. ಸುದೀಪ್‌, ಪುನೀತ್‌, ವಿಜಯ ರಾಘವೇಂದ್ರ, ದರ್ಶನ್‌ ಮೊದಲಾದ ಹೊಸ ನಟರ ಜತೆ ನಟಿಸುವ ಅವಕಾಶಗಳು ಮುಂದಿರುವಾಗ ರವಿ ಅಂಕಲ್‌ ಜತೆ ನಟಿಸಿದರೆ ಇಮೇಜ್‌ ಹಾಳಾಗತ್ತೆ ಅಂತ ರಮ್ಯ ಜಾಸ್ತಿ ಇಂಗ್ಲಿಷ್‌ ಹಾಗೂ ಸ್ವಲ್ಪ ಕನ್ನಡದಲ್ಲಿ ಆತ್ಮೀಯರ ಬಳಿ ಪಿಸುಗುಟ್ಟಿದ್ದಾಳೆ. ಇನ್ನು ರಕ್ಷಿತಾ ಒಬ್ಬಳೇ ಅಲ್ಲದೆ, ಆಕೆಯ ಕುಟುಂಬದವರೆಲ್ಲ - ರವಿಚಂದ್ರನ್‌ ಹೊಟ್ಟೆ ಊದಿಕೊಂಡಿದೆ. ಮುಖ ಕುಂಬಳಕಾಯಿಯಂತಾಗಿದೆ. ಕೈಕಾಲು ಸೋರೆಕಾಯಿಯಂತಾಗಿದೆ ಹಾಗೆ ಹೀಗೆ ಅಂತೆಲ್ಲ ಕಾಮೆಂಟ್‌ ಮಾಡಿರುವುದಾಗಿ ಸುದ್ದಿ .

ಮೀನಾ, ರಾಶಿ ಇತ್ಯಾದಿ ಆಂಟಿ ತಾರೆಯರು ನೆನಪಿಗೆ ಬಂದರಾದರೂ, ಅವರೆಲ್ಲರಿಗಿಂತ ಪ್ರಿಯಾಂಕ ಪುಟ್ಟದಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನೇ ತಮ್ಮ ಚಿತ್ರಗಳ ಪರ್ಮನೆಂಟ್‌ ನಾಯಕಿ ಮಾಡಲು ರವಿ ತೀರ್ಮಾನಿಸಿದ್ದಾರೆ ಅನ್ನುವುದು ಗಾಂಧಿನಗರದ ಚೇಷ್ಟೆಮತಿಗಳ ಮಾತು. ರವಿ ಮನಸ್ಸಲ್ಲಿ ‘ಅಂಕಲ್‌’ ಎಂಬ ಸಂಬೋಧನೆ ಅನುರಣಿಸುತ್ತಿರುವುದಂತೂ ದಿಟವಂತೆ.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada