ರಾಜ್ಯ ಸಿನಿಮಾ ಪ್ರಶಸ್ತಿಗಾಗಿ ಪೈಪೋಟಿ

ಒಟ್ಟು 38 ಚಿತ್ರಗಳು ವಿವಿಧ ಪ್ರಶಸ್ತಿಗಳಿಗಾಗಿ ಕಣದಲ್ಲಿದ್ದು , ಕಲಾತ್ಮಕ ಹಾಗೂ ಅಪ್ಪಟ ಕಮರ್ಷಿಯಲ್ ಚಿತ್ರಗಳು ಪ್ರಶಸ್ತಿಗಾಗಿ ಸ್ಪರ್ಧೆ ನಡೆಸಲಿವೆ. 2003ರ ಏಪ್ರಿಲ್ 1ರಿಂದ 2004ರ ಮಾರ್ಚ್ 31ರ ಅವಧಿಯಲ್ಲಿ ಸೆನ್ಸಾರ್ ಆದ ಚಿತ್ರಗಳು ಕಣದಲ್ಲಿವೆ.
ತೆರೆಕಂಡು ಸೋತ ಚಿಗುರಿದ ಕನಸುವಿನಂಥ ಅಪ್ಪಟ ಪ್ರಯೋಗಾತ್ಮಕ ಚಿತ್ರದೊಂದಿಗೆ ಹದಿನಾರಾಣೆ ಕಮರ್ಷಿಯಲ್ ಚಿತ್ರಗಳಾದ ಮಲ್ಲ , ವೀರ ಕನ್ನಡಿಗನಂಥ ಚಿತ್ರಗಳು ಸ್ಪರ್ಧೆಯಲ್ಲಿವೆ. ಬರಗೂರು ರಾಮಚಂದ್ರಪ್ಪನವರ ಶಾಂತಿ ಚಿತ್ರ, ದೇವನೂರು ಮಹದೇವರ ಕಥೆ ಆಧರಿಸಿದ ಅಮಾಸ (ನಿರ್ದೇಶನ- ಶಿವರುದ್ರಯ್ಯ), ಎಡಕಲ್ಲು ಗುಡ್ಡದ ಚಂದ್ರಶೇಖರ್‌ರ ಪೂರ್ವಾಪರ, ಯೋಗರಾಜ್ ಭಟ್‌ರ ಮಣಿ, ರಾಮದಾಸ ನಾಯ್ಡುರ ಪ್ರವಾಹ ಇತರ ಗಮನ ಸೆಳೆಯುವ ಚಿತ್ರಗಳು.
ಸ್ಪರ್ಧಾ ಕಣದಲ್ಲಿರುವ ಚಿತ್ರಗಳು :
- ಚಿಗುರಿದ ಕನಸು
- ಶಾಂತಿ
- ಅಮಾಸ
- ಪ್ರವಾಹ
- ಮಣಿ
- ಪೂರ್ವಾಪರ
- ಮಲ್ಲ
- ಪ್ರೀತಿ ಪ್ರೇಮ ಪ್ರಣಯ
- ಅಭಿ
- ಮರೀಚಿಕೆ
- ಅಜ್ಜು
- ಮೊಂಡ
- ನಂಜುಂಡಿ
- ಅಂಕ
- ಓಂ ಗಣೇಶ್
- ಅರ್ಧಾಂಗಿ
- ಪಾರ್ಥ
- ಬಾಲಶಿವ
- ಪತಿ, ಪತ್ನಿ ಮತ್ತು ಅವಳು
- ಬಿಸಿ ಬಿಸಿ
- ಪಾಂಡವ
- ದಾಸ
- ಪ್ರಾಣ
- ಧನ್ಯ
- ಧರ್ಮ
- ಎಕ್ಸ್‌ಕ್ಯೂಸ್ ಮಿ
- ರೀ ಸ್ವಲ್ಪ ಬರ್ತೀರಾ
- ಗೇಮ್
- ಹೃದಯವಂತ
- ಶುಕ್ಲಾಂಭರದರಂ
- ಖಾಕಿ
- ಶ್ರೀ ಕೃಷ್ಣ ಲೀಲೆ
- ಖುಷಿ
- ಸ್ವರ್ಣ
- ಲಂಕೇಶ್ ಪತ್ರಿಕೆ
- ತಾಯಿ ಇಲ್ಲದ ತಬ್ಬಲಿ
- ಟೀನೇಜರ್ಸ್
- ವೀರ ಕನ್ನಡಿಗ
ಅದೃಷ್ಟ ಯಾರಿಗೆ ಒಲಿಯುವುದೊ ನೋಡಬೇಕು.
English summary
Thirty eight Kannada films in Karnataka State film award race 2003-2004


Click it and Unblock the Notifications