»   » ಈ ಟೀವಿಗಾಗಿ ಹಂಸಲೇಖಾ ನಿರ್ಮಿಸಿರುವ ‘ಪ್ರೀತಿಗಾಗಿ’

ಈ ಟೀವಿಗಾಗಿ ಹಂಸಲೇಖಾ ನಿರ್ಮಿಸಿರುವ ‘ಪ್ರೀತಿಗಾಗಿ’

Posted By: Staff
Subscribe to Filmibeat Kannada

'ಪ್ರೀತಿಗಾಗಿ" ಮುಂದೆ ಹೋಗಿದ್ದಕ್ಕೆ ಅಥವಾ ರದ್ದಾಗಿದ್ದಕ್ಕೆ ಅಧಿಕೃತ ಕಾರಣಗಳಿನ್ನೂ ಬಂದಿಲ್ಲ. ಕೃಷ್ಣಮಾಚಾರಿ ಶ್ರೀಕಾಂತರ ಹಿಂಸಾತ್ಮಕ ಧಾರಾವಾಹಿ 'ಗೌತಮಿ"ಗೆ ಅಮೋಘ ಮೂರನೇ ಬಾರಿ ವಿಸ್ತರಣೆ ಸಿಕ್ಕಿರುವುದೇ ಕಾರಣ ಅನ್ನಲಾಗುತ್ತಿದೆ. 'ಗೌತಮಿ"ಯ ಬಗ್ಗೆ ವೀಕ್ಷಕರಿಂದ ಹಿಡಿದು 'ಈಟೀವಿ"ಯ ಕಚೇರಿ ತನಕ ಎಲ್ಲರೂ ಕೋರಸ್‌ನಲ್ಲಿ ಡಬ್ಬಾ ಎಂಬ ಒಪೀನಿಯನ್‌ ಕೊಟ್ಟಿದ್ದರೂ, ಶ್ರೀಕಾಂತ್‌ಗೆ ಬಾಪಿನಾಯ್ಡು ಆಶೀರ್ವಾದವಿದೆ. ಬಾಪಿನಾಯ್ಡು ಅಂದರೆ ರಾಮೋಜಿರಾವ್‌ ಅವರ ಬಲಗೈ. ಹಾಗಾಗಿ 'ಗೌತಮಿ" ದೀಪದಾಸ್‌ ಗುಪ್ತನ ಥರ ಜಾಗ ಬಿಟ್ಟುಕೊಡ್ತಾ ಇಲ್ಲ.

ಇನ್ನೊಂದಡೆ ಸಿಹಿಕಹಿ ಚಂದ್ರು ಅವರ ಭರ್ಜರಿ ಇನ್ನಿಂಗ್ಸ್‌ ಮುಂದುವರೆದಿದೆ. ಪಾಪ ಪಾಂಡು ಬೆನ್ನಿಗೆ ಇನ್ನೊಂದು ಹಾಸ್ಯ ಧಾರಾವಾಹಿ 'ಯದ್ವಾತದ್ವಾ" ಶುರುವಾಗಿದೆ. ಸೀರಿಯಲ್‌ ಹೆಸರಿಗೆ ತಕ್ಕಂತೆಯೇ ಇದೆ ಅನ್ನುವ ವಿಮರ್ಶೆ ಬಂದಿದೆ. ಆದರೆ ಇದೂ ಕೂಡಾ ನೂರಾರು ಕಂತು ಪ್ರಸಾರವಾಗುವ ಅಪಾಯವಿದೆ. ಅದಕ್ಕೆ ಕಾರಣ ಇದರ ಹಿಂದಿರುವ ಸೂತ್ರಧಾರಿ ಸಿಹಿಕಹಿ. ಯದ್ವಾತದ್ವಾಕ್ಕೂ ನನಗೂ ಸಂಂಧವೇ ಇಲ್ಲ ಎಂದು ಸಿಹಿಕಹಿ ಊರೆಲ್ಲಾ ಡಂಗುರ ಹೊಡೆದಿರುವುದರಿಂದ ಇದು ಅವರದ್ದೇ ಅನ್ನೋದು ಖಾತ್ರಿಯಾಗಿದೆ.

ನಟ ಭಯಂಕರ ರವಿಕಿರಣ್‌ ಅವರಿಗೂ ಈಟೀವಿ ಕೃಪೆ ಮುಂದುವರೆದಿದೆ. 'ಬಾಂಧವ್ಯ" ಮುಗೀತಾ ಇದೆ ಅಂತ ವೀಕ್ಷಕರು ಸಂತೋಷ ಪಡುವ ಹೊತ್ತಿಗೆ ರವಿ 'ಸ್ಪಂದನ" ಎಂಬ ಮತ್ತೊಂದು ಮೆಗಾದ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಂತೂ ಉದಯ ಟೀವಿಗೆ ಈಟೀವಿ ಪೈಪೋಟಿ ನೀಡುತ್ತಿದೆ ಅನ್ನೋದು ನಿಜವಾಗಿದೆ.

English summary
ETV says no for Hamsalekhas serial

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada