»   » ಅಪ್ಪಟ ಸ್ವಮೇಕ್‌ ಚಿತ್ರ ‘ಆಟೋ ಶಂಕರ್‌’

ಅಪ್ಪಟ ಸ್ವಮೇಕ್‌ ಚಿತ್ರ ‘ಆಟೋ ಶಂಕರ್‌’

Subscribe to Filmibeat Kannada

ಕೋಟಿ ನಿರ್ಮಾಪಕ ರಾಮು ನಿರ್ಮಾಣದ ‘ಆಟೋ ಶಂಕರ್‌’ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿರಾವ್‌ ಫಿಲಂ ಸಿಟಿಯಲ್ಲಿ ಇತ್ತೀಚೆಗೆ ನಡೆಯಿತು.

ಉಪೇಂದ್ರ, ಶಿಲ್ಪ ಶೆಟ್ಟಿ, ರಾಧಿಕಾ, ಸುಧಾರಾಣಿ ಹಾಡುಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ‘ಕಚ್ಚಿ ಕಚ್ಚಿ ತಿನ್ನಲಾ...’ ಮತ್ತು ‘ಕಣ್ಣಾಮುಚ್ಚಾಲೆ ಓಲ್ಡಾಯಿತು...’ ಎಂಬ ಹಾಡುಗಳನ್ನು ಫಿಲಂ ಸಿಟಿಯಲ್ಲಿ ಒಂಬತ್ತು ವೈವಿಧ್ಯಮಯ ಸೆಟ್‌ಗಳಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಲಾಯಿತು.

ಪ್ರದೀಪ್‌ ನೃತ್ಯ ನಿರ್ದೇಶನದಲ್ಲಿ ಉಪೇಂದ್ರ, ಶಿಲ್ಪ ಶೆಟ್ಟಿ, ರಾಧಿಕಾ ರೋಚಕವಾಗಿ ನರ್ತಿಸಿದರು. ನಿರ್ದೇಶಕ ಡಿ.ರಾಜೇಂದ್ರ ಬಾಬು ಮಾರ್ಗದರ್ಶನದಲ್ಲಿ ಛಾಯಾಗ್ರಾಹಕ ಎಚ್‌.ಸಿ.ವೇಣು ಹಾಡುಗಳನ್ನು ಚಿತ್ರೀಕರಿಸಿಕೊಂಡರು.

ಅಜಯ್‌ಕುಮಾರ್‌ ಅವರ ಕಥೆಯನ್ನು ಹೊಂದಿರುವ ಬಗ್ಗೆ ಗಾಂಧಿನಗರದಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ‘ದುರ್ಗಿ’ಯ ಯಶಸ್ಸಿನಿಂದ ನಿರ್ಮಾಪಕ ರಾಮು, ‘ಗೌರಮ್ಮ ’ ಜೋರಮ್ಮ ಎಂಬಂತೆ ಬಾಕ್ಸ್‌ ಆಫೀಸ್‌ ಚಿಂದಿ ಮಾಡಿರುವುದರಿಂದ ಉಪೇಂದ್ರ ಖುಷಿಯಲ್ಲಿದ್ದಾರೆ.

ಲೇಡಿ ವಿಲನ್‌ ಪಾತ್ರದಲ್ಲಿ ಶಿಲ್ಪಶೆಟ್ಟಿ , ಉಪೇಂದ್ರ ಅವರ ಅಕ್ಕನ ಪಾತ್ರದಲ್ಲಿ ಸುಧಾರಾಣಿ ನಟಿಸುತ್ತಿದ್ದಾರೆ. ಸುಮಿತ್ರಾ, ಭವ್ಯ, ತಾರಾ, ಪದ್ಮ ವಾಸಂತಿ, ಶ್ರೀನಿವಾಸ ಮೂರ್ತಿ, ರಂಗಾಯಣ ರಘು, ರಮೇಶ್‌ ಭಟ್‌, ಶ್ರೀನಿವಾಸ ಪ್ರಭು ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada