»   » ಚೆಲುವಿನ ಚಿತ್ತಾರಗೆಲ್ಲದಿದ್ದರೇ,ನಾರಾಯಣ್ ಗತಿ?

ಚೆಲುವಿನ ಚಿತ್ತಾರಗೆಲ್ಲದಿದ್ದರೇ,ನಾರಾಯಣ್ ಗತಿ?

Subscribe to Filmibeat Kannada


ಎಸ್.ನಾರಾಯಣ್ ಪಾಲಿಗೆ ಚೆಲುವಿನ ಚಿತ್ತಾರ ಎಂಬುದು ಒಂದು ಸತ್ವ ಪರೀಕ್ಷೆ. ಈ ಹಿಂದೆ ನಿರ್ಮಾಣ ಮಾಡಿದ ವೀರು,ತಾಯಿಯ ಮಡಿಲುನೆಲಕಚ್ಚಿದ ಕಹಿಅನುಭವ ಅವರ ಬೆನ್ನಿಗಿದೆ!

ಕಾಮಿಡಿ ಟೈಮ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರಶುಕ್ರವಾರ ತೆರೆಕಂಡಿದೆ. ಗಣೇಶ್ ಜೋಡಿಯಾಗಿ ನಟಿಸಿರುವ ಅಮೂಲ್ಯ ಎನ್ನುವ ಹೊಸ ಹುಡುಗಿಗೆ ಇದು ಮೊದಲ ಚಿತ್ರ.

ಚಿತ್ರಕತೆ, ಸಂಭಾಷಣೆ, ಗೀತ ರಚನೆ, ನಿರ್ದೇಶನ ಮತ್ತು ನಿರ್ಮಾಣದ ಹೊಣೆ ಹೊತ್ತಿರುವ ಎಸ್.ನಾರಾಯಣ್, ಜಯದ ವಿಶ್ವಾಸ ಹೊಂದಿದ್ದಾರೆ. ಕೋಮಲ್, ಸುರೇಶ್ಚಂದ್ರ, ವಿಜಯಸಾರಥಿ, ಆಶಾರಾಣಿ ತಾರಾಬಳಗದಲ್ಲಿದ್ದಾರೆ.

ಎಸ್.ನಾರಾಯಣ್ ಪಾಲಿಗೆ ಚೆಲುವಿನ ಚಿತ್ತಾರ ಎಂಬುದು ಒಂದು ಸತ್ವ ಪರೀಕ್ಷೆ. ಈ ಹಿಂದೆ ನಿರ್ಮಾಣ ಮಾಡಿದ ವೀರು(ಈ ಚಿತ್ರದಲ್ಲಿ ಅವರ ಮಗನೇ ಹೀರೋ!)ಮತ್ತು ತಾಯಿಯ ಮಡಿಲುನೆಲಕಚ್ಚಿದ ಕಹಿಅನುಭವ ಅವರದು.

ಅ ಹಿಂದೆ ಕನ್ನಡದಲ್ಲಿ ರೀಮೇಕ್ ಸಿನಿಮಾಗಳ ರೀಲ್ ಸುತ್ತಿ, ಮಾಡಿಕೊಂಡಿದ್ದ ಕಾಸು,ತಾಯಿಯ ಮಡಿಲುಸೇರಿದ್ದನ್ನು ಕಂಡು ನಾರಾಯಣ್ ದಿಗಿಲುಗೊಂಡಿದ್ದರು. ಆದರೂ ಹಠ ಬಿಡದೇ, ಓಡುವ ಕುದುರೆ ಗಣೇಶ್ ರನ್ನು ಕರೆತಂದು ಚೆಲುವಿನ
ಚಿತ್ತಾರಬಿಡಿಸಿದ್ದಾರೆ. ಇದು ತಮಿಳಿನ ಕಾದಾಲನ್ಚಿತ್ರದ ಕನ್ನಡ ಚಿತ್ತಾರ.

ಮತ್ತೊಂದು ಕಡೆ ದುನಿಯಾ ವಿಜಯ್ ಅವರನ್ನು ಹಾಕಿಕೊಂಡು ಚಂಡಎನ್ನುವ ಚಿತ್ರ ತೆಗೆಯಲು ಸಿದ್ಧತೆ ನಡೆಸಿದ್ದಾರೆ.ಚಿತ್ರದ ಹೆಸರೇ ಭಯಂಕರ. ಇದು ಯಾವ ಚಿತ್ರದ ರೀಮೇಕೋ ಇನ್ನೂ ನಮಗೆ ತಿಳಿದು ಬಂದಿಲ್ಲ.

ಬೆಂಗಳೂರಿನ ಕಪಾಲಿ, ಸಂಪಿಗೆ, ನವರಂಗ್, ಉಲ್ಲಾಸ್, ಕಾಮಾಕ್ಯ, ವೈಭವ್, ರೇಣುಕಾ ಪ್ರಸನ್ನ ಸೇರಿದಂತೆ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada