»   » ಸಿನಿಮಾ ನಿರ್ದೇಶಕನ ಸೀಟ್‌ಗೆ ಹೇಮಂತ್‌ ಹೆಗಡೆ

ಸಿನಿಮಾ ನಿರ್ದೇಶಕನ ಸೀಟ್‌ಗೆ ಹೇಮಂತ್‌ ಹೆಗಡೆ

Posted By: Staff
Subscribe to Filmibeat Kannada

ಇದು ರಾಮೋಜಿ ರಾಯರ ಲೇಟೆಸ್ಟ್‌ ಕನ್ನಡ ಚಿತ್ರದ ಹೆಸರು. ಈಟಿವಿಯ ಯುವ ಫಂಡಾ ಸರಣಿಯಲ್ಲಿ ಶುಕ್ರವಾರ ಪ್ರಸಾರವಾಗುವ 'ವೇದಿಕೆ" ಕಾರ್ಯಕ್ರಮದಲ್ಲಿ ರೀನಾ ಎಂಬ ವೀಜೇ ಪದೇ ಪದೇ ಹೇಳುವ 'ಊ... ಲಲಾಲಾ" ರಾಮೋಜಿರಾಯರಿಗೆ ಮೆಚ್ಚಾಗಿದ್ದೇ ತಡ, ಅದೇ ಹೆಸರಲ್ಲೊಂದು ಚಿತ್ರದ ಐಡಿಯಾ ಫ್ಲ್ಯಾಷ್‌ ಆಗಿದೆ.

ಪಕ್ಕಾ ಥೈಲಿವಾಲ, ಬ್ಯುಸಿನೆಸ್‌ ಕುಳವಾದ ರಾಮೋಜಿರಾಯರು ಸ್ಯಾಂಡಲ್‌ವುಡ್‌ನಲ್ಲಿ ಗಲ್ಲಾ ತುಂಬಿಸಿಕೊಂಡಿರೋದಂತೂ ಸುಳ್ಳಲ್ಲ. ಅವರ ಹುಮ್ಮಸ್ಸು ಮುಂದುವರೆದಿದೆ. 'ಚಿತ್ರ"ಮತ್ತು 'ನಿನಗಾಗಿ" ತಿಜೋರಿ ತುಂಬಿಸಿರುವುದೇ ಅವರಿಗೆ ಸ್ಫೂರ್ತಿಯಂತೆ.

ರಾಮೋಜಿ ಬ್ಯುಸಿನೆಸ್‌ವಾಲಾ ಆದರೂ, ಹೊಸಬರ ಪಾಲಿಗೆ ವರದಾನ ಅನ್ನುವುದು ಹೆಮ್ಮೆಯ ವಿಷಯ. ಅದರಲ್ಲೂ ಕನ್ನಡದ ಪ್ರತಿಭಾವಂತರಿಗೂ ಮಿಂಚಲೊಂದು ವೇದಿಕೆ ಕಲ್ಪಿಸುತ್ತಿರುವುದಕ್ಕೆ ಅವರಿಗೆ ಹ್ಯಾಟ್ಸಾಫ್‌. ಊ ಲಲಾಲಾ... ಚಿತ್ರದ ವಿಶೇಷವೆಂದರೆ- ಅದರ ನಿರ್ದೇಶನದ ಹೊಣೆಯನ್ನು ರಾಯರು ಕನ್ನಡಿಗ ಹೇಮಂತ್‌ ಹೆಗಡೆಗೆ ವಹಿಸಿರುವುದು.

'ಮಾಯಾಮೃಗ"ದಂಥಾ ಧಾರಾವಾಹಿಯಲ್ಲಿ ಮಿಂಚಿದ ಈತ ಮತದಾನ ಚಿತ್ರದಲ್ಲಿ ಡಾ। ಶಿವಪ್ಪ ಪಾತ್ರದ ಮೂಲಕ ತಾನೊಬ್ಬ ಸೋಬರ್‌ ನಟ ಅನ್ನೋದನ್ನ ಸಾಬೀತು ಮಾಡಿದರು. ಕಿರುತೆರೆಯ ಗರಡಿಯಲ್ಲಿ ನಟನೆಯಲ್ಲಿ ಪಳಗಿದ ಹೇಮಂತ್‌ ಧಾರಾವಾಹಿ ನಿರ್ದೇಶನಕ್ಕೂ ಕೈ ಹಾಕಿದರು. ಹಾಸ್ಯ ಧಾರಾವಾಹಿ 'ಡಂ ಡಂ ಡಿಗ ಡಿಗ" ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವುದೇ ಹೇಮಂತ್‌ ನಿರ್ದೇಶನ ಶಕ್ತಿಗೆ ಸಾಕ್ಷಿ. ರಾಮೋಜಿ ಅವರಿಗೆ ಈಗ ಹುಡುಗ ಮೆಚ್ಚಾಗಿದ್ದಾನೆ. 'ಊ ಲಲಾಲಾ.." ಇದು ಹೇಮಂತ್‌ ನಿರ್ದೇಶನದ ಚೊಚ್ಚಿಲ ಚಿತ್ರವೂ ಆಗಲಿದೆ.

ಆದರೆ, ಹೊಸ ಚಿತ್ರದ ನಾಯಕ ಮಲೆಯಾಳಿ ಹುಡುಗ. ನಾಯಕಿ ತೆಲುಗಿನ 'ನುವ್ವೇ ಕಾವಾಲಿ" ಫೇಮ್‌ನ ಚುರುಕು ಹುಡುಗಿ ರಿಚಾ ಶರ್ಮ. ನಾಯಕ- ನಾಯಕಿ ಪೈಕಿ ಯಾರಾದರೂ ಕನ್ನಡಿಗರಾಗಿದ್ದರೆ ಚೆನ್ನಾಗಿತ್ತಲ್ವಾ, ರಾಮೋಜಿರಾಯರೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada