»   » ಜೂಹಿ ಚಾವ್ಲಾ ಗಂಡು ಮಗು ಹೆತ್ತಿದ್ದಾರೆ

ಜೂಹಿ ಚಾವ್ಲಾ ಗಂಡು ಮಗು ಹೆತ್ತಿದ್ದಾರೆ

Subscribe to Filmibeat Kannada

ಜುಲೈ 21ನೇ ತಾರೀಕು ಸೋಮವಾರ ನಿಂಬೆಹಣ್ಣಿನಂಥ ಹುಡುಗಿ ಜ್ಯೂಹಿ ಚಾವ್ಲಾ ಎರಡನೇ ಬಾರಿ ಅಮ್ಮನಾಗಿದ್ದಾರೆ. ಈ ಬಾರಿ ಅವರು ಬಯಸಿದಂತೆ ಗಂಡು ಮಗು ಹುಟ್ಟಿದೆ. ತಾಯಿ- ಮಗು ಆರೋಗ್ಯವಾಗಿದ್ದಾರೆ.

ಲಂಡನ್ನಿನ ಆಸ್ಪತ್ರೆಯಲ್ಲಿ ಜ್ಯೂಹಿಗೆ ಸುಖ ಪ್ರಸವವಾಯಿತು ಎಂದು ಆಕೆಯ ಕುಟುಂಬ ವರ್ಗದವರು ತಿಳಿಸಿದ್ದಾರೆ. ಮಗುವಿನ ತಂದೆ, ಉದ್ಯಮಿ ಜಯ್‌ ಮೆಹ್ತಾಗೂ ಗಂಡು ಮಗುವಿನ ತಂದೆಯಾಗಿರುವುದಕ್ಕೆ ಖುಷಿಯಾಗಿದೆ. ಜ್ಯೂಹಿ ಮೊದಲ ಮಗು ಎರಡೂವರೆ ವರ್ಷದ ಜಾನ್ವಿ ಈಗ ಹಿಂದಿ ಚೆನ್ನಾಗಿ ಮಾತಾಡುತ್ತಾಳೆ.

ಮದುವೆಯಾದ ನಂತರ ಜ್ಯೂಹಿ ಅಭಿನಯಿಸಿದ ಸಂಗೀತಮಯ ಚಿತ್ರ ‘ಝಂಕಾರ್‌ ಬೀಟ್ಸ್‌ ’ ಪರವಾಗಿಲ್ಲ ಎಂಬಂತೆ ಓಡುತ್ತಿದೆ. ಸಿನಿಮಾಗಿಂತ ಸಂಸಾರದ ನೆಮ್ಮದಿ ಮುಖ್ಯ ಎಂದು ಪದೇಪದೇ ಹೇಳುತ್ತಿದ್ದ ಜ್ಯೂಹಿ ಈಗ ನಗುನಗುತ್ತಾ ಇದ್ದಾರೆ. ಈಗಲೂ ಚಿತ್ರಗಳಲ್ಲಿ ನಟಿಸಲು ಅವರಿಗೆ ಯಾವುದೇ ಅಭ್ಯಂತರವಿಲ್ಲ. ನಿರ್ಮಾಪಕರೂ ಹಾಗಂದುಕೊಳ್ಳಬೇಕಲ್ಲ !

(ಏಜೆನ್ಸೀಸ್‌)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada