»   » ತಾಜ್‌ ವೆಸ್ಟೆಂಡ್‌ನಲ್ಲಿ ರಮ್ಯ ವ್ಯಾಯಾಮ !

ತಾಜ್‌ ವೆಸ್ಟೆಂಡ್‌ನಲ್ಲಿ ರಮ್ಯ ವ್ಯಾಯಾಮ !

Subscribe to Filmibeat Kannada

ಅಭಿ ಚಿತ್ರದ ಶೂಟಿಂಗಿನ ಅಷ್ಟೂ ದಿನ ಮರ್ಸಿಡೀಸ್‌ ಬೆಂಜ್‌ ಕಾರಲ್ಲೇ ಬಂದು ಹೋಗುತ್ತಿದ್ದ ಕಾನ್ವೆಂಟ್‌ ಚೆಲುವೆ ರಮ್ಯ ಮನೆ ತಾಜ್‌ ವೆಸ್ಟೆಂಡ್‌ ಅಂದರೆ ನೀವು ನಂಬುತ್ತೀರಾ?
ಹೇಳಿ ಕೇಳಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಬಂಧುವಾದ ಈಕೆ ದೊಡ್ಡ ಉದ್ದಿಮೆದಾರನ ಪುತ್ರಿ. 365 ದಿನವೂ ತಾಜ್‌ ವೆಸ್ಟೆಂಡ್‌ನಲ್ಲೇ ಇರುತ್ತಾಳಂತೆ. ಕನ್ನಡವನ್ನೂ ಇಂಗ್ಲಿಷ್‌ನಂತೆ ಮಾತಾಡುವ ರಮ್ಯ ಮೊದಲ ಮಾತು ಇಂಗ್ಲೀಷೇ. ಎಷ್ಟೇ ಆದರೂ ಈಕೆ ಅಡ್ಡಾಡೋದು ತಾಜ್‌ ವೆಸ್ಟೆಂಡ್‌ ಪರಿಸರದಲ್ಲಿ ತಾನೆ .

ವ್ಯಾಯಾಮ, ಕಲಿಕೆ, ಹಾಡು- ಕುಣಿತ ಸಕಲವೂ ತಾಜ್‌ ವೆಸ್ಟೆಂಡ್‌ನಲ್ಲೇ ನಡೆಸುವ ರಮ್ಯ ಭರಪೂರ ಶಿಸ್ತಿನ ಹುಡುಗಿ ಅನ್ನೋದು ಪ್ಲಸ್‌ ಪಾಯಿಂಟು. ಸ್ವಲ್ವೇ ಸ್ವಲ್ಪ ದಪ್ಪವಾಗಿರುವ ವಿಷಯವನ್ನು ಸೀರಿಯಸ್ಸಾಗಿ ತೆಗೆದುಕೊಂಡಿರುವ ರಮ್ಯ ಇನ್ನೂ ಸಪೂರವಾಗಲು ಅಗತ್ಯವಿರುವ ಡಯಟ್ಟು, ವ್ಯಾಯಾಮವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾಳೆ. ಬಾಲಿವುಡ್‌ನ ಆಫರ್‌ ಬಂದರೆ ಏನ್ಮಾಡ್ತೀರಿ ಅಂತ ಕೇಳಿದರೆ, ‘ಐ ವಿಲ್‌ ಟ್ರೆೃ ಮೈ ಬೆಸ್ಟ್‌ ’ ಅಂತ ಬಿನ್ನಾಣದಿಂದ ಹೇಳುವ ರಮ್ಯ ನಿಜನಾಮ ಸ್ಪಂದನ.

ಎಕ್ಸ್‌ಕ್ಯೂಸ್‌ ಮಿ ಎಂಬ ಇನ್ನೊಂದು ಕನ್ನಡ ಚಿತ್ರದಲ್ಲಿ ನಟಿಸಿರುವ ರಮ್ಯ ಮನೆಯ ಫೋನು ಜೋರಾಗಿ ರಿಂಗಿಸುತ್ತಿರುವುದಂತೂ ದಿಟ. ಆದರೆ ನಿರ್ಮಾಪಕರೇ, ರಮ್ಯ ಸಿಗೋದು ತಾಜ್‌ ವೆಸ್ಟೆಂಡ್‌ನಲ್ಲಿ. ಅಲ್ಲಿಗೇ ಹೋಗಿ ಕಾಲ್‌ಷೀಟ್‌ಗೆ ಟ್ರೆೃ ಮಾಡಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada