»   » ‘ವಿಷ್ಣು ಸೇನೆ’ ದಂಡನಾಯಕ ಹೇಳಿದ್ದು...

‘ವಿಷ್ಣು ಸೇನೆ’ ದಂಡನಾಯಕ ಹೇಳಿದ್ದು...

Subscribe to Filmibeat Kannada
  • ರವಿತೇಜ
ತೆರೆಯ ಮೇಲೆ ಗುರ್‌ ಎನ್ನುವ ಸಾಹಸಸಿಂಹ ವಿಷ್ಣುವರ್ಧನ್‌ ಪತ್ರಕರ್ತರು ಮತ್ತು ಮೈಕ್‌ ಮುಂದೆ ಸಾಧು ಮೊಲದಂತೆ ಶಾಂತಿಮಂತ್ರ ಜಪಿಸುತ್ತಾರೆ. ಪ್ರತಿಯಾಂದು ಮಾತನ್ನು ಅಳೆದು ತೂಗಿಯೇ ಹೊರಚೆಲ್ಲುತ್ತಾರೆ.

ತಮ್ಮ ಹೊಸ ಚಿತ್ರ ‘ವಿಷ್ಣುಸೇನೆ’ ಚಿತ್ರೀಕರಣಕ್ಕಾಗಿ ಚೆನ್ನೈನಲ್ಲಿರುವ ವಿಷ್ಣು ಮಾಧ್ಯಮದವರೊಂದಿಗೆ ಮಾತಿಗೆ ಕುಳಿತರು. ಮಾತಿನಲ್ಲಿ ಪಕ್ವತೆ, ಆಧ್ಯಾತ್ಮದ ವಾಸನೆ ಎರಡೂ ಕಂಡು ಬಂದವು.

ಸಿನಿಮಾ ಇತಿಹಾಸದಲ್ಲಿ ಮೊದಲ ಇಪ್ಪತ್ತು ವರ್ಷ ಕಲೆಗೆ ಬೆಲೆ ಇತ್ತು. ತಾಂತ್ರಿಕವಾಗಿ ಏನೂ ಇಲ್ಲದ ಕಾಲದಲ್ಲಿ ಎಂಥೆಂಥಾ ಚಿತ್ರಗಳು ಬಂದುಹೋದವು ಎಂದು ವಿಷ್ಣು, ಚಿತ್ರರಂಗದ ಗತವೈಭವ ಮತ್ತು ಸದ್ಯದ ಸ್ಥಿತಿಗತಿಗಳನ್ನು ತುಲನೆ ಮಾಡಿದರು.

ರಿಮೇಕ್‌ ಬಗ್ಗೆ ಎದ್ದಿರುವ ಅಪಸ್ವರಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಅವರು, ಪತ್ರಿಕೆಗಳು ಇನ್ನೊಂದು ವರ್ಷ ಕನ್ನಡ ಚಿತ್ರಗಳ ಮೂಲವನ್ನು ಹುಡುಕದಂತೆ ವಿನಂತಿಸಿದರು. ರಿಮೇಕ್‌ ಎಂಬ ಪದವನ್ನು ಪತ್ರಿಕೆಗಳು ಬಳಸದಿದ್ದರೆ ಚೆನ್ನ. ದೇಶದ ಯಾವ ಭಾಗದಲ್ಲೂ ರಿಮೇಕ್‌ ಬಗ್ಗೆ ಚಕಾರವಿಲ್ಲ. ಇಲ್ಲಿ ಮಾತ್ರ ಯಾಕೆ? ಎಂದು ಪ್ರಶ್ನಿಸಿದರು.

ನಂಬಿಕೆ ಮುಖ್ಯ ಎಂದು ನಂಬಿಕೆಗಳ ಬಗ್ಗೆ ವಿಷ್ಣು ಮಾತು ಹೊರಳಿಸಿದರು. ಸ್ಪೆಪಿ ಗ್ರಾಫ್‌ ಇರಬಹುದು, ಕಪಿಲ್‌ದೇವ್‌ ಇರಬಹುದು ಮೈದಾನಕ್ಕೆ ಇಳಿದಾಗ ಆಕಾಶ ನೋಡುತ್ತಾರೆ ಕಾರಣ, ಅಲ್ಲಿ ಯಾವುದೋ ಶಕ್ತಿ ಇರಬಹುದು ಎಂಬ ನಂಬಿಕೆ. ನಂಬಿಕೆಯಿದ್ದರೆ ಬೆಂಕಿಯ ಜ್ವಾಲೆಯಲ್ಲಿ ಶಿರಡಿ ಬಾಬಾ ಕಾಣಿಸುತ್ತಾರೆ. ಗೆದ್ದವರು ಆಕಾಶ ನೋಡುತ್ತಾರೆ ಎಂದರು.

ಫಿಲಂಫೇರ್‌ ಪ್ರಶಸ್ತಿ ವಿತರಣೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಪ್ರೇಕ್ಷಕರೆಲ್ಲಾ ಎದ್ದು ಹೋದ ಮೇಲೆ ಕಾರ್ಯಕ್ರಮದ ಕಡೆಯಲ್ಲಿ ಕನ್ನಡ ನಟರಿಗೆ ಪ್ರಶಸ್ತಿ ವಿತರಿಸಲಾಗುತ್ತದೆ. ಹೀಗಾಗಿ ‘ಆಪ್ತಮಿತ್ರ’ ಚಿತ್ರಕ್ಕೆ ನನಗೆ ಅತ್ಯುನ್ನತ ನಟ ಪ್ರಶಸ್ತಿ ಸಿಕ್ಕಿದ್ದರೂ ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಕನ್ನಡಿಗರಿಗೆ ಯಾವುದೋ ಶಾಪ ತಟ್ಟಿದೆ ಎಂದು ವಿಷ್ಣು ಮುಖ ಸಣ್ಣಗೆ ಮಾಡಿಕೊಂಡರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada