»   » ಕೈಮುರಿದು ಕೊಂಡ ‘ಶ್ರೀ’ ರಾಘವೇಂದ್ರ!

ಕೈಮುರಿದು ಕೊಂಡ ‘ಶ್ರೀ’ ರಾಘವೇಂದ್ರ!

Subscribe to Filmibeat Kannada

‘ರಿಷಿ’ ಚಿತ್ರದ ನಂತರ ತೀವ್ರ ಕುತೂಹಲ ಕೆರಳಿಸಿರುವ ವಿಜಯರಾಘವೇಂದ್ರ ಅವರ ‘ಶ್ರೀ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. 45ದಿನಗಳ ಚಿತ್ರೀಕರಣ ಮುಗಿಸಿಕೊಂಡು ಚಿತ್ರತಂಡ ಬ್ಯಾಂಕಾಂಕ್‌ನಿಂದ ಬೆಂಗಳೂರಿಗೆ ಮರಳಿದೆ.

ಬ್ಯಾಂಕಾಕ್‌ನ ಮುಆಯ್‌ ಥಾಯ್‌ ಎಂಬ ಕರಾಟೆ ಮಾದರಿಯ ಕಲೆ ಚಿತ್ರದ ವಿಶೇಷಗಳಲ್ಲಿ ಒಂದು. ಚಿತ್ರದ ಸಾಹಸ ದೃಶ್ಯಗಳಲ್ಲಿ ಡ್ಯೂಪ್‌ ಇಲ್ಲದೇ ನಟಿಸಿರುವ ವಿಜಯರಾಘವೇಂದ್ರರ ಭುಜಕ್ಕೆ ಪೆಟ್ಟಾಗಿದೆ. ಆದರೂ ಹಾಡಿನ ದೃಶ್ಯಗಳಲ್ಲಿ ನಟಿಸಿ ಸಹಕಾರ ನೀಡಿದ್ದಾರೆ ಎಂದು ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಸಾಹಸ ದೃಶ್ಯ ಮತ್ತು ನಾಲ್ಕು ಹಾಡುಗಳ ಚಿತ್ರೀಕರಣದೊಂದಿಗೆ ಮೊದಲ ಹಂತದ ಚಿತ್ರೀಕರಣ ಬ್ಯಾಂಕಾಂಕ್‌ನಲ್ಲಿ ಮುಕ್ತಾಯಗೊಂಡಿದ್ದು, ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭಗೊಂಡಿದೆ.

ನಿರ್ಮಾಪಕ ದುಶ್ಯಂತ್‌ ಮತ್ತು ನಿರ್ದೇಶಕ ಪ್ರಕಾಶ್‌ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಕ್ಯಾಲಿಫೋರ್ನಿಯಾ ನಿವಾಸಿ ಮೀರಾ ವರ್ಮಾ ಅವರ ಬೆಲ್ಲಿ ಡ್ಯಾನ್ಸ್‌ ಚಿತ್ರಕ್ಕೆ ಮೆರಗು ನೀಡಿದೆಯಂತೆ.

Post your views

ಇದನ್ನೂ ಓದಿ :
‘ಚಿನ್ನಾರಿ ಮುತ್ತ’ದಿಂದ ‘ಶ್ರೀ’ವರೆಗೆ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada