»   » ತನ್ನ ತುಟಿ ಬಟ್ಟಲಲ್ಲಿ ಮುತ್ತಿನ ಮಧು ಹೀರಿದ ಹುಡುಗಿ ಇವಳೇನಾ?

ತನ್ನ ತುಟಿ ಬಟ್ಟಲಲ್ಲಿ ಮುತ್ತಿನ ಮಧು ಹೀರಿದ ಹುಡುಗಿ ಇವಳೇನಾ?

Subscribe to Filmibeat Kannada


ಗಂಡ ಹೆಂಡತಿಚಿತ್ರದಲ್ಲಿ ತುಟಿಗಳನ್ನೇ ಬಟ್ಟಲು ಮಾಡಿಕೊಂಡು ಮುತ್ತಿನ ಮಧು ಹೀರಿದ ಹುಡುಗಿ ಇವಳೇನಾ? ಚಿತ್ರ ಬಿಡುಗಡೆ ಸಂದರ್ಭದಲ್ಲಿ ಪಾತ್ರವನ್ನು ಸಮರ್ಥಿಸಿಕೊಂಡು, ದಿಟ್ಟತನ ಪ್ರದರ್ಶಿಸಿದ್ದ ಹುಡುಗಿ ಇವಳೇನಾ? ಯಾಕೋ ಅನುಮಾನ, ಬೇಕಿದ್ದರೇ ಅವಳ ಇತ್ತೀಚಿನ ಮಾತುಗಳನ್ನು ಗಮನಿಸಿ.

ಈಗಲೂ ಗಂಡ ಹೆಂಡತಿಚಿತ್ರ ನೆನೆದರೆ ಬೆಚ್ಚಿ ಬೀಳುವ ಸಂಜನಾ, ತಮ್ಮ ಮುಂದಿನ ಚಿತ್ರಗಳಲ್ಲಿ ಎಕ್ಸ್ ಪೋಸ್ ಮಾಡೋಲ್ಲ ಅನ್ನುತ್ತಾರೆ. ಈ ಬಗ್ಗೆ ಉಗ್ರ ಪ್ರತಿಜ್ಞೆಯನ್ನೇ ಅವರು ಮಾಡಿದ್ದಾರಂತೆ.

ನನಗೆ ಸಿನಿಮಾ ನಾಯಕಿಯಾಗುವುದಕ್ಕಿಂತಲೂ, ಹೆತ್ತವರ ಮರ್ಯಾದೆಯೇ ಹೆಚ್ಚು. ಅವರಿಗೆ ನನ್ನ ಪಾತ್ರಗಳಿಂದ ಮುಜುಗರವಾಗಬಾರದು. ಹೆಸರು ಮಾಡುವ ಉದ್ದೇಶದಿಂದ ಈ ರಂಗದಲ್ಲಿದ್ದೇನೆಯೇ ಹೊರತು, ಹಣ ಮಾಡುವುದಕ್ಕಲ್ಲ. ಪಾತ್ರಗಳ ಆಯ್ಕೆಯಲ್ಲಿ ನೂರು ಸಲ ಯೋಚಿಸುತ್ತೇನೆಎಂದು ಕಡ್ಡಿ ಮುರಿದಂತೆ ಸಂಜನಾ ಹೇಳುತ್ತಾರೆ.

ಸಂಜನಾಗೆ ಶುಕ್ರದೆಸೆ ಆರಂಭವಾಗಿದೆ. ಈಯಮ್ಮ ಮೊನ್ನೆಯಷ್ಟೇ ಮಲಯಾಳಂನಲ್ಲಿ ಮೋಹನ್ ಲಾಲ್ ಜೊತೆ ಅಭಿನಯಿಸಿ ಬಂದಿದ್ದಾರೆ. ಈಗ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್, ಒಂದು ಒಳ್ಳೆ ಪಾತ್ರಕ್ಕಾಗಿ ಸಂಜನಾಗೆ ಆಹ್ವಾನ ನೀಡಿದ್ದಾರೆ.

ಈ ಚಿತ್ರದ ನಾಯಕ;ಪ್ರಭಾಸ್. ಚಿತ್ರದ ಇಬ್ಬರು ನಾಯಕಿಯರಲ್ಲಿ ಸಂಜನಾ ಒಬ್ಬರು, ತ್ರಿಶಾ ಇನ್ನೊಬ್ಬರು. ಚಿತ್ರದ ಪೋಟೊ ಸೆಷನ್ ಗಾಗಿ ಸಂಜನಾ ಆಗಸ್ಟ್ 23ರಂದು ಹೈದರಾಬಾದ್ ಗೆ ಹೋಗಲು ಸಜ್ಜಾಗುತ್ತಿದ್ದಾರೆ. ಅವರ ಕಣ್ಣಲ್ಲೀಗ ಬಣ್ಣದ ಕಾಮನಬಿಲ್ಲು. ಯಾಕೆಂದರೆ; ಪೂರಿ ಜಗನ್ನಾಥ್ ರಂತಹ ನಿರ್ದೇಶಕರ ಕಣ್ಣಿಗೆ ಬೀಳುವುದು ಅದೃಷ್ಟವೆಂದೇ, ನಟಿಯರು ಭಾವಿಸುತ್ತಾರೆ.

ಇನ್ನು ಕನ್ನಡದಲ್ಲೂ ಸಂಜನಾಗೆ ನಿಧಾನವಾಗಿ ಅವಕಾಶಗಳು ಸಿಗುತ್ತಿವೆ. ರವಿ ಬೆಳಗೆರೆ ಅಭಿನಯದ ವಾರಸುದಾರದಲ್ಲಿ ಸಂಜನಾ ಅಭಿನಯಿಸುತ್ತಿದ್ದಾರೆ. ತಿಪ್ಪಾರಳ್ಳಿ ತರ್ಲೆಗಳುಚಿತ್ರದಲ್ಲಿ ಎಸ್.ನಾರಾಯಣ್ ಜೋಡಿಯಾಗಿ ಈಕೆ ಕಾಣಿಸಿಕೊಳ್ಳಲಿದ್ದಾರೆ.

ಮಲಯಾಳಂ ಚಿತ್ರದಲ್ಲಿ ಸಂಜನಾ! ಪ್ಲೀಸ್, ಅಪಾರ್ಥ ಬೇಡ...
ಚುಂಬನ ತಾರೆ ಸಂಜನಾ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada