»   » ದಸರಾ ಚಿತ್ರೋತ್ಸವ : ಉದ್ಘಾಟನಾ ಸಮಾರಂಭಕ್ಕೆ ಅಂಬಿ, ಉಪೇಂದ್ರ

ದಸರಾ ಚಿತ್ರೋತ್ಸವ : ಉದ್ಘಾಟನಾ ಸಮಾರಂಭಕ್ಕೆ ಅಂಬಿ, ಉಪೇಂದ್ರ

Subscribe to Filmibeat Kannada

ಮೈಸೂರು : ಅನೇಕ ವರ್ಷಗಳ ನಂತರ ವಿಜೃಂಭಣೆಯನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿರುವ ವಿಶ್ವಖ್ಯಾತಿಯ ಮೈಸೂರು ದಸರಾ ದಿನಗಣನೆ ಆರಂಭವಾಗಿದ್ದು- ದಸರಾ ವಿಶೇಷ ಆಕರ್ಷಣೆಯಾಗಿ ಸೆ.26ರಿಂದ ಚಿತ್ರೋತ್ಸವ ಪ್ರಾರಂಭವಾಗಲಿದೆ.

ಸೆಪ್ಟಂಬರ್‌ 26ರಿಂದ ಅಕ್ಟೋಬರ್‌ 2ರವರೆಗೆ ದಸರಾ ಚಲನ ಚಿತ್ರೋತ್ಸವ ನಡೆಯಲಿದೆ. ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ಸೆ.26ರಂದು ಚಿತ್ರೋತ್ಸವವನ್ನು ಉದ್ಘಾಟಿಸುವರು. ಮೈಸೂರಿನ ಸಂಗಂ ಚಿತ್ರಮಂದಿರದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ - ಚಿತ್ರತಾರೆಗಳಾದ ಅಂಬರೀಷ್‌, ಉಪೇಂದ್ರ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ವಿಶ್ವನಾಥ್‌ ಭಾಗವಹಿಸುವರು.

ಚಿತ್ರ ನಿರ್ಮಾಪಕರು, ಪ್ರದರ್ಶಕರು, ವಿತರಕರು, ಕಲಾವಿದರು ಹಾಗೂ ಥಿಯೇಟರ್‌ ಮಾಲಿಕರನ್ನು ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಗೌರವಿಸಲಾಗುವುದು.

ಕನ್ನಡ ಚಿತ್ರಗಳು ಮಾತ್ರ ಈ ಬಾರಿಯ ದಸರಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿವೆ. ಒಟ್ಟು 26 ಚಿತ್ರಗಳು ಪ್ರೇಕ್ಷಕರ ಮನರಂಜನೆಗೆ ದಸರಾ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು - ಟಿಕೇಟಿನ ಬೆಲೆ 10 ರುಪಾಯಿ.

(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada