»   » ಉಪ್ಪಿನಕಾಯಿ ಅಂಕಲ್‌ಗೆ ಬೇಜಾರಾಗಿದೆ

ಉಪ್ಪಿನಕಾಯಿ ಅಂಕಲ್‌ಗೆ ಬೇಜಾರಾಗಿದೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಅಂಕಲ್‌ ಲೋಕನಾಥ್‌ಗೆ ಬಲು ಬೇಜಾರಾಗಿದೆ. ಅದಕ್ಕೆ ಕಾರಣಗಳು-

  • ಇತ್ತೀಚೆಗೆ ಕನ್ನಡ ಚಿತ್ರಗಳು ಕೆಟ್ಟಾತಿಕೆಟ್ಟದಾಗಿರುತ್ತವೆ. ಉದಾಹರಣೆಗೆ- ಮೊನ್ನೆ ತಾನೆ ಟೀವಿ ಚಾನೆಲ್ಲಲ್ಲಿ ಪ್ರಸಾರವಾದ ‘ಫ್ರೆಂಡ್ಸ್‌’. ಹೆಂಡತಿ- ಮಕ್ಕಳ ಜೊತೆ ಕೂತುಕೊಂಡು ನೋಡುವಂಥಾ ಸಿನಿಮಾನೇ ಅದು ಅನ್ನೋದು ಲೋಕಿ ಅಂಕಲ್‌ ಪ್ರಶ್ನೆ.
  • ನಮ್ಮಲ್ಲಿ ಕಾಪಿ ಮಾಡುವವರು ಅನೇಕರು. ಎರವಲು ಪಡೆದುಕೊಂಡು ಒಳ್ಳೆಯ ಗುಣ ಅಳವಡಿಸಿಕೊಳ್ಳುವವರು ತೀರಾ ಕಮ್ಮಿ ಎಂಬುದು ಅವರ ದೂರು.
  • ಇನ್ನು ಟೈಟಲ್‌ ಕಾರ್ಡ್‌ ವಿಷಯ. ಈಚೀಚೆಗೆ ಬಲವಂತವಾಗಿ ಕರೆದುಕೊಂಡು ಹೋಗಿ ಯಾವುದಾದರೊಂದು ಪಾತ್ರವನ್ನು ಅಂಕಲ್‌ ಕೈಲಿ ಮಾಡಿಸುತ್ತಿರುವ ಮಂದಿ ಟೈಟಲ್‌ ಕಾರ್ಡಿನಲ್ಲಿ ಅವರ ಹೆಸರು ಹಾಕೋದನ್ನು ಮರೆಯುತ್ತಿದ್ದಾರಂತೆ. ಇದು ಯಾರು ಅಂತ ಅಂಕಲ್‌ ನೇರವಾಗಿ ಹೇಳಲಿಲ್ಲ. ಆದರೆ ಅವರಿಗೆ ಇದರಿಂದ ನೋವಾಗಿರುವುದಂತೂ ಖರೆ.
  • ಕನ್ನಡ ಚಿತ್ರರಂಗದವರ ಚೀಪ್‌ ಗಿಮಿಕ್ಕುಗಳ ಕಾರಣ ಇಡೀ ಉದ್ದಿಮೆ ಬೇರೆಯವರಿಂದ ಉಗಿಸಿಕೊಳ್ಳುವಂತಾಗಿದೆ ಅನ್ನುವುದು ಅಂಕಲ್‌ ಅಸಮಾಧಾನ.
‘ಆರ್ಯ’ ಎಂಬ ಚಿತ್ರದ ಸುದ್ದಿಗೋಷ್ಠಿಯಲ್ಲಿ ಲೋಕನಾಥ್‌ ಇತ್ತೀಚೆಗೆ ತೋಡಿಕೊಂಡ ನೋವುಗಳಿವು. ‘ಫ್ರೆಂಡ್ಸ್‌’ ಚಿತ್ರದ ನಟ ಕಂ ನಿರ್ಮಾಪಕ ವಾಸು ಅಂಕಲ್‌ ದೂರನ್ನು ಕೇಳಿ, ‘ಪೂರ್‌ ಓಲ್ಡ್‌ ಮ್ಯಾನ್‌’ ಅಂತ ನಕ್ಕು ಸುಮ್ಮನಾದರಂತೆ.
Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada