»   » ‘ಸಂಗೀತ ನಿಧಿ’ ಪಿ.ಬಿ.ಶ್ರೀನಿವಾಸ್‌ ಸಂದರ್ಶನ

‘ಸಂಗೀತ ನಿಧಿ’ ಪಿ.ಬಿ.ಶ್ರೀನಿವಾಸ್‌ ಸಂದರ್ಶನ

By: ಎಸ್‌. ಜಗನ್ನಾಥರಾವ್‌ ಬಹುಳೆ
Subscribe to Filmibeat Kannada

ಪಿ.ಬಿ.ಶ್ರೀನಿವಾಸ್‌ - ಕನ್ನಡಿಗರ ಮನೆಮನಗಳಲ್ಲಿ ಅಲಂಕೃತಗೊಂಡಿರುವ ಸಂಗೀತ ನಿಧಿ. ಇವರು ಗಾಯನ ಗಾರುಡಿಗರು. ಜತೆಗೆ , ಪರಭಾಷಾ ವಿಶಾರದರು. ಇವರಿಗೆ ಯಾವುದೇ ಭಾಷೆಯ, ಗಡಿಯ ಎಲ್ಲೆಯೇ ಇಲ್ಲ , ಒಂದೇ ಮಾತಿನಲ್ಲಿ ಹೇಳುವುದಾದರೆ ಅನಂತರೂಪಿ.

ಅವರು ಮಾತನಾಡಿದರೆ ಸಾಕು, ಕವಿ ಹೃದಯ ಅರಳಿದಂತೆ, ಗಾನಸುಧೆ ಹರಿದಂತೆ , ಪಿಬಿಎಸ್‌ ಹಿಂದೊಮ್ಮೆ ಆಂಗ್ಲಭಾಷೆಯಲ್ಲಿ ಪತ್ರಕರ್ತರಾಗಿಯೂ ದುಡಿದಿದ್ದಾರೆ ಎಂಬುದು ಬಹಳ ಮಂದಿಗೆ ತಿಳಿದಿಲ್ಲ.

ಈ ಬಹುಮುಖ ಸಾಧನಶೀಲರು ವಾಸವಿರುವುದು ಚೆನ್ನೈಯಲ್ಲಿ . ಹಾಡುವಂತೆ ಕರೆ ನೀಡಿದಾಗಲೆಲ್ಲ ಇವರು ಅತ್ಯುತ್ಸಾಹದಿಂದ ಬೆಂಗಳೂರಿಗೆ ಧಾವಿಸುತ್ತಾರೆ. ಹೀಗೆ ಇತ್ತೀಚೆಗೆ ಇವರು ನಗರಕ್ಕೆ ಬಂದಾಗ ಮಾತಿಗೆ ಸಿಕ್ಕಿದ್ದರು. ಇಂದು (ಸೆ.22) ಪಿ.ಬಿ.ಶ್ರೀನಿವಾಸ್‌ರ ಜನುಮದಿನ. ಈ ಸಂದರ್ಭದಲ್ಲಿ , ಅವರೊಡನೆ ನಡೆಸಿದ ಸಂದರ್ಶನದ ಸಾರ ಇಲ್ಲಿದೆ.

ಬೆಂಗಳೂರಿನಲ್ಲಿ ಇಷ್ಟವಾದದ್ದು ಯಾವುದು?
ಇಡೀ ಕರ್ನಾಟಕದ ಕೇಂದ್ರವಾದ ಬೆಂಗಳೂರು ನಗರ ಮತ್ತು ಅದರಲ್ಲಿನ ರಸಿಕ ಜನ.
ಬೆಂಗಳೂರಿನಲ್ಲಿ ಮೆಚ್ಚಿನ ತಾಣ?
ವಿಧಾನಸೌಧ
ಬೆಂಗಳೂರಿನಲ್ಲಿ ಕುಳಿತು ನೋಡಿದ ಚಿತ್ರಗಳು?
ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್‌, ಪ್ರೇಮಲೋಕ , ಪುಪ್ಪಕವಿಮಾನ.... ಇತ್ಯಾದಿ.
ಬೆಂಗಳೂರಿನಲ್ಲಿ ಧ್ವನಿಮುದ್ರಿತವಾದ ಮರೆಯದ ಹಾಡು?
ವಿರಾಮದ ನಂತರ ಹಾಡಿದ 'ಶ್ರೀಗಂಧ' ಚಿತ್ರದ ಅಂಧರಮ್ಮ ಅಂಧರು ....ಗೀತೆ.
ಬೆಂಗಳೂರಿನಲ್ಲಿ ಅಂದು-ಇಂದು ?
ಎಲ್ಲ ವಿಷಯಗಳಲ್ಲಿಯೂ ಪ್ರಗತಿ ಆಗಿದೆ. ಬಾಳಿನ ವೇಗ ಕೂಡ ಬೆಳೆದಿದೆ.
ಬೆಂಗಳೂರು ಬೆಳವಣಿಗೆ ಬಗ್ಗೆ ಹೇಳಿ ?
ಬೆಳವಣಿಗೆ ತಾನಾಗಿ ನಡೆದಿದೆ-ನಡೆಯುತ್ತದೆ. Every thing happens we are not the reasons.
ಬೆಂಗಳೂರು-ಚೆನ್ನೈ ನಡುವೆ ನೀವು ಕಂಡ ಸಾಮ್ಯತೆ?
ಈ ಎರಡೂ ನಗರಗಳು ಅದ್ಭುತವಾದ ರಸಜ್ಞತೆಯ ಕೇಂದ್ರಗಳು.
ಬೆಂಗಳೂರಿನಲ್ಲಿ ಇದುವರೆಗೆ ನೀಡಿರುವ ಗಾಯನ ಕಾರ್ಯಕ್ರಮಗಳು ?
ಲೆಕ್ಕ ಇಲ್ಲದಷ್ಟು , ಲೆಕ್ಕ ಇಡದಷ್ಟು.
ಬೆಂಗಳೂರಿನಲ್ಲಿ ವೃತ್ತಿ ಜೀವನದ ವಿಶೇಷ ಅನುಭವ ?
ಭಕ್ತಕುಂಬಾರ ಚಿತ್ರಕ್ಕೆ ಹಾಡುವ ಮುನ್ನ ರಾಜ್‌ರೊಂದಿಗೆ ನಡೆದ ಹೃದಯ ಸಂವಾದ.
ಈ ನಗರದಲ್ಲಿನ ನಿಮ್ಮ ಮೆಚ್ಚಿನ ತಿಳಿಸು?
ಅಂದು ಕೇಸರಿಬಾತ್‌.ಆ ಮೇಲೆ ಖಾಲಿ ದೋಸೆ, ಬಾಸುಂದಿ.
ಕಪ್ಪು-ಬಿಳುಪು ಚಿತ್ರಗಳಲ್ಲಿ ಮತ್ತು ವರ್ಣದಲ್ಲಿ ಬೆಂಗಳೂರು ಕಂಡಾಗ ?
ಸ್ವಾರಸ್ಯ ಬಣ್ಣದಲ್ಲಿಲ್ಲ. ಚಿತ್ರಗಳ ಪ್ರಾಶಸ್ತ್ಯದಲ್ಲಿದೆ. ಎರಡರಲ್ಲಿಯೂ ಬೆಂಗಳೂರಿನ ಕಾವ್ಯಗಳಿವೆ.
ಬೆಂಗಳೂರಿಗೆ ನಿಮ್ಮ ಆಗಮನದ ಬಗ್ಗೆ ?
ಇಲ್ಲಿಗೆ ಹೃದಯಪೂರ್ವಕವಾಗಿ ಬರುತ್ತೇನೆ. ಮತ್ತೆ ಮತ್ತೆ ಇಲ್ಲಿಗೆ ಬರಲು ದೇವರು ಅನುವು ಮಾಡಿ ಕೊಡಲಿ.
ಇಲ್ಲಿನ ನಿವಾಸಿಗಳಿಗೆ ಕಿವಿ ಮಾತು?
ಬೆಂಗಳೂರು ಕನ್ನಡಿಗರ ಕೈ ಗನ್ನಡಿ. ಸಂಗೀತದ ಅಲೆಗಳ ಮೇಲೆ ಸ್ವಚ್ಥ, ಸೌಂದರ್ಯ, ಸ್ವಾವಲಂಬಿ ಬೆಂಗಳೂರು ಶಾಶ್ವತವಾಗಿ ಉಳಿಯಲಿ.

(ಸ್ನೇಹ ಸೇತು : ವಿಜಯ ಕರ್ನಾಟಕ )

English summary
An exclusive interview with P.B. Srinivas
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada