»   » ಶ್ರುತಿ, ಮುರಳಿಗೆ ರಾಜ್ಯ ಪ್ರಶಸ್ತಿಯ ಗರಿ, ಎಂ.ಪಿ.ಶಂಕರ್‌ಗೆ ಡಾ.ರಾಜ್‌ ಪ್ರಶಸ್ತಿ

ಶ್ರುತಿ, ಮುರಳಿಗೆ ರಾಜ್ಯ ಪ್ರಶಸ್ತಿಯ ಗರಿ, ಎಂ.ಪಿ.ಶಂಕರ್‌ಗೆ ಡಾ.ರಾಜ್‌ ಪ್ರಶಸ್ತಿ

Subscribe to Filmibeat Kannada

ಬೆಂಗಳೂರು : ರಾಜ್ಯ ಸರ್ಕಾರದ 2004-05ನೇ ಸಾಲಿನ ಡಾ.ರಾಜ್‌ಕುಮಾರ್‌ ಪ್ರಶಸ್ತಿಗೆ ನಟ ಮತ್ತು ನಿರ್ಮಾಪಕ ಎಂ.ಪಿ.ಶಂಕರ್‌, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ನಿರ್ದೇಶಕ ಎ.ಟಿ.ರಘು ಆಯ್ಕೆಗೊಂಡಿದ್ದಾರೆ. ಈ ಎರಡೂ ಪ್ರಶಸ್ತಿಗಳು ತಲಾ ಒಂದು ಲಕ್ಷರೂ.ಗಳ ನಗದು ಮತ್ತು ಚಿನ್ನದ ಪದಕವನ್ನು ಒಳಗೊಂಡಿವೆ.

ಪ್ರಸಕ್ತ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಗೆ ಮುರಳಿ ಮತ್ತು ಶ್ರುತಿ ಆಯ್ಕೆಗೊಂಡಿದ್ದಾರೆ.

ಪ್ರಶಸ್ತಿ ವಿಜೇತರು ಮತ್ತು ಚಿತ್ರಗಳ ಪೂರ್ಣ ಪಾಠ :

 • ‘ಪ್ರಥಮ ಅತ್ಯುತ್ತಮ’ ಚಿತ್ರ ಪ್ರಶಸ್ತಿ : ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ‘ಮೊನಾಲಿಸಾ’

 • ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ : ಪಿ.ಶೇಷಾದ್ರಿ ನಿರ್ದೇಶನದ ‘ಬೇರು’

 • ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ : ಎಸ್‌.ಮಹೇಂದರ್‌ ನಿರ್ದೇಶನದ ‘ಗೌಡ್ರು’

 • ಅತ್ಯುತ್ತಮ ನಟಿ : ಶ್ರುತಿ(ಚಿತ್ರ -ಗೌಡ್ರು)

 • ಅತ್ಯುತ್ತಮ ನಟ : ಮುರಳಿ (ಚಿತ್ರ -ಕಂಠಿ)

 • ಅತ್ಯುತ್ತಮ ಪೋಷಕ ನಟ : ಕಿಶೋರ್‌(ಕಂಠಿ)

 • ಅತ್ಯುತ್ತಮ ಪೋಷಕ ನಟಿ : ಬಿ.ಜಯ (ಗೌಡ್ರು)

 • ಅತ್ಯುತ್ತಮ ಕಂಠ ದಾನ ಕಲಾವಿದ : ಶಿವಮೂರ್ತಿ (ಕಥೆಯಾದ ಕಾಳ)

 • ಅತ್ಯುತ್ತಮ ಕಂಠದಾನ ಕಲಾವಿದೆ : ಶಶಿಕಲಾ (ರಂಗ ಎಸ್ಸೆಸೆಲ್ಸಿ)

 • ಅತ್ಯುತ್ತಮ ಕಥಾ ಲೇಖಕ : ಎಂ.ಆರ್‌.ರಮೇಶ್‌ (ಸಂತೋಷ್‌)

 • ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ : ಹಸೀನಾ

 • ಅತ್ಯುತ್ತಮ ಮಕ್ಕಳ ಚಿತ್ರ : ಮಿಠಾಯಿ ಮನೆ

 • ಅತ್ಯುತ್ತಮ ಚಿತ್ರಕಥೆ : ಪ್ರಕಾಶ್‌ ಮತ್ತು ಅಭಿಷೇಕ್‌ (ಚಿತ್ರ: ರಿಷಿ)

 • ಅತ್ಯುತ್ತಮ ಸಂಭಾಷಣಾ ಕಾರ : ಬಿ.ಎ.ಮಧು (ಚಿತ್ರ: ಸಂತೋಷ್‌)
 • ಅತ್ಯುತ್ತಮ ಛಾಯಾ ಗ್ರಾಹಕ : ವೇಣು (ಚಿತ್ರ: ಎನ್‌ಕೌಂಟರ್‌ ದಯಾನಾಯಕ್‌)

 • ಅತ್ಯುತ್ತಮ ಚಿತ್ರ ನಿರ್ದೇಶಕ : ಸಾಧು ಕೋಕಿಲ (ಚಿತ್ರ:ರಾಕ್ಷಸ)

 • ಅತ್ಯುತ್ತಮ ಧ್ವನಿ ಗ್ರಾಹಕ : ಮುರಳಿ (ಚಿತ್ರ: ರಿಷಿ)

 • ಅತ್ಯುತ್ತಮ ಕಲಾ ನಿರ್ದೇಶಕ : ದಿನೇಶ್‌ಮಂಗ್ಳೂರ್‌ (ಚಿತ್ರ:ರಾಕ್ಷಸ)

 • ಅತ್ಯುತ್ತಮ ಸಂಕಲನಕಾರ : ಶಶಿ ಕುಮಾರ್‌ (ಚಿತ್ರ:ಕಂಠಿ)

 • ಅತ್ಯುತ್ತಮ ಬಾಲನಟ : ಅನಿರುದ್ಧ (ಚಿತ್ರ: ರಾಕ್ಷಸ)

 • ಅತ್ಯುತ್ತಮ ಬಾಲನಟಿ : ಭೋದಿನಿ (ಚಿತ್ರ: ಹಸೀನಾ)

 • ಅತ್ಯುತ್ತಮ ಗೀತ ರಚನೆಕಾರ : ಲಕ್ಷ್ಮೀಪತಿ ಕೋಲಾರ, ಕೃಷ್ಣಮೂರ್ತಿ ಹನೂರು (ಚಿತ್ರ:ಬೇರು)

 • ಅತ್ಯುತ್ತಮ ಹಿನ್ನೆಲೆ ಗಾಯಕ : ಎಸ್‌.ಪಿ.ಬಾಲ ಸುಬ್ರಹ್ಮಣ್ಯಂ (ಚಿತ್ರ:ಸೃಷ್ಟಿ)

 • ಅತ್ಯುತ್ತಮ ಹಿನ್ನೆಲೆ ಗಾಯಕಿ : ಚಿತ್ರ (ಚಿತ್ರ:ಮಹಾರಾಜ)

 • ಚಿತ್ರದ ವಸ್ತ್ರ ವಿನ್ಯಾಸ : ಮುತ್ತುರಾಜ್‌(ಕಾಂಚನ ಗಂಗಾ)

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada