»   » ಅವ್‌...ಜಗ್ಗೇಶ್‌ ಮಡಗಿದೂರ ಮಠ !

ಅವ್‌...ಜಗ್ಗೇಶ್‌ ಮಡಗಿದೂರ ಮಠ !

Posted By:
Subscribe to Filmibeat Kannada
  • ಶಂಕರಿ
ನಮ್ಮನೆ ಹತ್ತಿರ ಒಂದು ಹಣ್ಣು ಹಣ್ಣು ಮುದುಕಿ. ಆಕೆಗೆ 94 ವರ್ಷ. 90 ವರ್ಷ ಬೆಂಗಳೂರಲ್ಲೇ ಇರಲಿಲ್ಲ. ಆಮೇಲೆ ಬೆಂಗಳೂರಿಗೆ ಬಂದಳು. ಮೊನ್ನೆ ಇದ್ದಕ್ಕಿದ್ದಂತೆ ಆಕೆ ಸತ್ತು ಹೋದಳು ಅಂತ ಯಾರೋ ಹೇಳಿದರು. ಹೋಗಿ ನೋಡಿಕೊಂಡು ಬರೋಣ ಅಂತ ಆ ಅಜ್ಜಿ ಮನೆಗೆ ಹೋದೆ. ಅಂತಿಮ ದರ್ಶನಕ್ಕೆ ಅಂತ ಈಕೆಯ ದೇಹವನ್ನು ಇಟ್ಟಿದ್ದರು. ನಾನು ಅಲ್ಲಿಗೆ ಹೋಗಿದ್ದೇ ತಡ, ಮುದುಕಿ ದಿಗ್ಗನೆ ಎದ್ದು ಕೂತಳು. ಒಂದಷ್ಟು ಉಡುಗೊರೆ ಕೊಟ್ಟಳು. ನಿಮ್ಮ ಎಲ್ಲಾ ಸಿನಿಮಾ ನೋಡಿದೀನಿ. ದೇವರು ಒಳ್ಳೇದು ಮಾಡಲಿ ಅಂತ ಹೇಳಿ, ಸತ್ತುಹೋದಳು !

*

‘ಮೇಕಪ್‌’ ಫ್ಲಾಪಾಯಿತು. ಹೇಳಿಕೇಳಿ ನಾನು ರಾಘವೇಂದ್ರ ಸ್ವಾಮಿಗಳ ಭಕ್ತ. ಸೀದಾ ಮಂತ್ರಾಲಯಕ್ಕೆ ಹೋಗಿ ಕೈಮುಗಿದೆ. ರಾಘವೇಂದ್ರ ಸ್ವಾಮಿಗಳ ಮೂರ್ತಿಯಿಂದ ಬಲಗಡೆ ಹೂ ಬಿತ್ತು. ಪ್ರಸಾದ ಸಿಕ್ಕಿತು. ಆಮೇಲೆ ‘ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ’ ಸಿನಿಮಾದಲ್ಲಿ ನಟಿಸಿದೆ. ಸಿನಿಮಾ ಸೂಪರ್‌ ಹಿಟ್‌. 11 ಸಿನಿಮಾ ಸಿಕ್ಕಿಬಿಟ್ಟವು. ನಮ್ಮ ರಾಘವೇಂದ್ರ ಸ್ವಾಮಿಗಳ ಮಹಾತ್ಮೆ ಅಂಥದ್ದು.

- ಮೇಲಿನ ಎರಡೂ ಕಥೆಗಳನ್ನು ನವರಸನಾಯಕ ಜಗ್ಗೇಶ್‌ ರಸಭರಿತವಾಗಿ ಹೇಳಿದರು. ಇನ್ನಷ್ಟು ಕಥೆಗಳನ್ನು ಹೇಳುವ ಉತ್ಸಾಹ ಅವರಲ್ಲಿದೆ. ಆದರೆ ಟೈಮಿಲ್ಲ. ಈಗವರು ಮೋಡದ ಮೇಲೆ ತೇಲುತ್ತಿದ್ದಾರೆ. 98 ಚಿತ್ರಗಳನ್ನು ಪೂರೈಸಿರುವ ಅವರು ನೂರನೇ ಚಿತ್ರ ಹೇಗಿರಬೇಕು ಎಂಬುದನ್ನು ತಲೆ ಕೆಡಿಸಿಕೊಳ್ಳುವುದರಲ್ಲಿ ನಿರತರು.

ನೂರನೇ ಚಿತ್ರಕ್ಕೆ ‘ಮಠ’ ಎಂದು ಹೆಸರಿಡಲು ತೀರ್ಮಾನಿಸಿರುವ ಜಗ್ಗೇಶ್‌, ಅದರಲ್ಲಿ ಮಠಾಧೀಶನಿಗೆ ಶೂದ್ರನೊಬ್ಬ ಸವಾಲೆಸೆಯುವ ಕಥೆ ಇದೆಯಂತೆ. ಕರ್ನಾಟಕದಲ್ಲಿ ಆಶೀರ್ವಾದ ಮಾಡುತ್ತಾ ಕೂತಿರುವ ಅನೇಕ ಶ್ರೀ ಶ್ರೀ .... ಸ್ವಾಮಿಗಳು ‘ಜಗ್ಗೇಶ್‌ ಮಡಗಿದೂರ ಮಠ’ದ ವರಸೆ ಕಂಡು ಈಗಾಗಲೇ ಕಣ್ಣು ಕೆಂಪಗೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಕುಹಕ ಗಾಂಧಿನಗರದಲ್ಲಿ ಧೂಳೆಬ್ಬಿಸಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada