»   » ಭರ್ಜರಿ ಮಿಲನ : ಟಾಪ್ 1 ಸ್ಥಾನದಿಂದ ಜಾರಿದ ಕೃಷ್ಣ!

ಭರ್ಜರಿ ಮಿಲನ : ಟಾಪ್ 1 ಸ್ಥಾನದಿಂದ ಜಾರಿದ ಕೃಷ್ಣ!

Posted By: Staff
Subscribe to Filmibeat Kannada

ಟಾಪ್5 ಕನ್ನಡ ಚಿತ್ರಗಳು :

1. ಮಿಲನ : ಜಯಂತ ಕಾಯ್ಕಿಣಿ ಅವರ ಇಂಪಾದ ಹಾಡುಗಳು, ಪೂಜಾ ಮತ್ತು ಪಾರ್ವತಿ ಮೋಹಕ ಅಭಿನಯ, ಪುನೀತ್ ತಾಕತ್ತು ಚಿತ್ರವನ್ನು ಗೆಲ್ಲಿಸಿವೆ. ಎಲ್ಲೆಲ್ಲೂ 'ನಿನ್ನಿಂದಲೇ ನಿನ್ನಿಂದಲೇ' ಹಾಡು ಕೇಳಿ ಬರುತ್ತಿದೆ. ಕೌಟುಂಬಿಕ ಚಿತ್ರವೆಂದು ಮನ್ನಣೆ ಪಡೆದಿರುವ ಚಿತ್ರಕ್ಕೆ, ಮಹಿಳಾ ಪ್ರೇಕ್ಷಕರು ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಚಿತ್ರ ಶತದಿನೋತ್ಸವ ಆಚರಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

2. ಕೃಷ್ಣ : ಚಿತ್ರಕ್ಕೆ ಗಣೇಶ್ ಜೀವಾಳ. ಚಿತ್ರದ ಆರಂಭ ಚೆನ್ನಾಗಿತ್ತು. ಒಳ್ಳೇ ಪ್ರತಿಕ್ರಿಯೆ ಕಂಡು ಬಂದಿತ್ತು. ಆದರೆ ನಾಲ್ಕನೇ ವಾರ ತಲುಪುವ ವೇಳೆಗೆ ಆ ವೇಗ ತಗ್ಗಿದೆ. ಹೀಗಾಗಿ ಬಾಕ್ಸಾಫೀಸ್ ಟಾಪ್ 5ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಶರ್ಮಿಳಾ, ಪೂಜಾ ಗಾಂಧಿ ಚಿತ್ರದಲ್ಲಿದ್ದಾರೆ.

3. ಆ ದಿನಗಳು : ಅಗ್ನಿ ಶ್ರೀಧರ್ ಅವರ ಕತೆಯನ್ನು ಒಳಗೊಂಡಿರುವ, ಬೆಂಗಳೂರು ಭೂಗತ ಜಗತ್ತಿನ ನೈಜ ಪ್ರಪಂಚ ಬಿಚ್ಚಿಡುವ ಚಿತ್ರ ಪ್ರೇಕ್ಷಕರ ಸೆಳೆದಿದೆ. ನಿರ್ದೇಶಕ ಚೈತನ್ಯ ಖುಷಿಯಲ್ಲಿದ್ದಾರೆ. ಮೊದಲ ವಾರ ಅಂತಹ ಪ್ರತಿಕ್ರಿಯೆ ಈ ಚಿತ್ರಕ್ಕೆ ವ್ಯಕ್ತವಾಗಲಿಲ್ಲ. ಎರಡನೇ ವಾರದಿಂದ ಚಿತ್ರ ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

4. ಯುಗ : ಅದ್ಧೂರಿ ಪ್ರಚಾರದೊಂದಿಗೆ ಚಿತ್ರ ತೆರೆಕಂಡಿದೆ. ಮೊದಲ ದಿನವಿದ್ದ ಅಬ್ಬರ, ನಾಲ್ಕನೇ ದಿನಕ್ಕೆ ಕಡಿಮೆಯಾಗಿದೆ. ದೀಪಾವಳಿ ರಜಾ ದಿನಗಳಿದ್ದರೂ ಚಿತ್ರದ ಗಳಿಕೆ ಸುಧಾರಿಸಿಲ್ಲ. ದುನಿಯಾ ವಿಜಯ್ ಚಿತ್ರದ ನಾಯಕ. ಈಗ ವಿಜಯ್ ಅವರ 'ಚಂಡ'ಬಿಡುಗಡೆಯಾಗಿದೆ. ಹೀಗಾಗಿ 'ಯುಗ'ಚಿತ್ರ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಲಿದೆ.

5. ಗೆಳೆಯ: ಸೂಪರ್ ಸ್ಟಾರ್ ಗಳು ಚಿತ್ರದಲ್ಲಿಲ್ಲ. ಬಜೆಟ್ ಸಹಾ ಹೇಳಿಕೊಳ್ಳುವಷ್ಟು ದೊಡ್ಡದೇನಲ್ಲ. ಆದರೂ ಪ್ರೇಕ್ಷಕರೂ ಇಷ್ಟಪಡುತ್ತಿದ್ದಾರೆ. ಪ್ರಜ್ವಲ್, ತರುಣ್ ಅಭಿನಯಕ್ಕೆ ಭಲೇ ಎನ್ನುತ್ತಿದ್ದಾರೆ. ರಾಖಿ ಸಾವಂತ್ ಈ ಚಿತ್ರದಲ್ಲಿ ಐಟಂ ಸಾಂಗಿಗೆ ಹೆಜ್ಜೆ ಹಾಕಿದರೂ, ಆ ಪರಿ ಉಪಯೋಗವೇನಾಗಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada