»   » ಅವನ ಹಿಂದೆ ಶಿರಿನ್‌ ಓಡಿಹೋದಳು!

ಅವನ ಹಿಂದೆ ಶಿರಿನ್‌ ಓಡಿಹೋದಳು!

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಸದ್ಯಕ್ಕೆ ಯಾವುದೇ ಬೆನ್ನು ತೋರಿಸುವ ಪಾತ್ರಗಳಿಲ್ಲದ ಕಾರಣ ತಮಿಳು ಚಿತ್ರರಂಗ ಕೂಡ ಬೆಂಗಳೂರಿನ ಬಾಲ್ಡ್‌ವಿನ್‌ ಬಾಲೆ ಶಿರಿನ್‌ಗೆ ಅಲ್ಪವಿರಾಮ ಕೊಟ್ಟಿದೆ. ಇದೇ ಲಾಭವನ್ನು ಪಡೆದು ತಾನು ಇಂಗ್ಲಿಷ್‌ ಪದವಿಯ ಓದಿನ ಕಡೆ ಗಮನ ಹರಿಸುತ್ತೇನೆ ಅಂತ ಅಪ್ಪ- ಅಮ್ಮನ ಮುಂದೆ ಬೊಗಳೆ ಬಿಟ್ಟ ಈಕೆ ರೋಷನ್‌ ಎಂಬಾತನ ಜೊತೆ ಕಂಬೈಂಡ್‌ ಸ್ಟಡಿ ಮಾಡುತ್ತಿರುವ ಸುದ್ದಿ ಬೆಂಗಳೂರಿನಿಂದ ಬೆಂಗಳೂರಿಗೆ ವಯಾ ಚೆನ್ನೈನಿಂದ ಬಂದಿದೆ !

ಸ್ಫುರದ್ರೂಪಿ ಹುಡುಗ ರೋಷನ್‌ ಕೂಡ ಒಬ್ಬ ಮಾಡೆಲ್‌. ನಟಿಯಾಗುವ ಮುನ್ನ ಮಾಡೆಲ್‌ ಆಗಲು ಶಿರಿನ್‌ಗೆ ಬೆನ್ನು ತಟ್ಟಿದ್ದವನೇ ಈತ. ನಟನೆಯಲ್ಲಿ ಅಷ್ಟಕ್ಕಷ್ಟೇ ಎಂಬ ಟೀಕೆಗೆ ಗುರಿಯಾದ ಶಿರಿನ್‌, ತಮಿಳುವಾಲಗಳಿಗೆ ಓದಿಕೊಳ್ಳಬೇಕು ಬಿಡುವಿಲ್ಲ ಅಂತ ಬೊಗಳೆ ಬಿಟ್ಟು ಬೆಂಗಳೂರಿಗೆ ಬಂದು ರೋಷನ್‌ ಜೊತೆ ಖುಲ್ಲಂಖುಲ್ಲ ಲವ್ವಲ್ಲಿ ಬಿದ್ದಿದ್ದಾಳೆ ಅನ್ನೋದು ಕಂಡವರ ಮಾತು. ಇತ್ತೀಚೆಗೆ ಕೊಯಮತ್ತೂರಿನಲ್ಲಿ ನಡೆದ ಸತ್ಯರಾಜ್‌ ರಜತ ಮಹೋತ್ಸವ ಸಮಾರಂಭದಲ್ಲಿ ಶಿರಿನ್‌ ಹಾಗೂ ರೋಷನ್‌ ಜಿಂಗಿಚಕ್ಕ ಮಾಡಿದ್ದನ್ನು ಕಂಡವರು ಬೆಚ್ಚಿ ಬಿದ್ದಿದ್ದರಂತೆ.

ಇಷ್ಟ ಪಟ್ಟ ಹುಡುಗನಿಗೆ ಮದುವೆ ಮಾಡಿಕೊಡಲು ಅಪ್ಪ- ಅಮ್ಮ ಒಲ್ಲದ ಕಾರಣ ರೋಷನ್‌ ಜತೆ ಶಿರಿನ್‌ ಓಡಿಹೋಗಿದ್ದಾಳೆ. ಸದ್ಯದಲ್ಲೇ ಇಬ್ಬರೂ ಮದುವೆ ಕೂಡ ಆಗಲಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada