»   » ಏನೀ ಅವ‘ತಾರಾ’? ಎಲ್ಲೆಲ್ಲೂ ರವಿ ಬೆಳಗೆರೆಯೇ...!

ಏನೀ ಅವ‘ತಾರಾ’? ಎಲ್ಲೆಲ್ಲೂ ರವಿ ಬೆಳಗೆರೆಯೇ...!

Subscribe to Filmibeat Kannada


ಸ್ಯಾಂಡಲ್‌ವುಡ್‌ನ ಹೊಸ ತುಣುಕುಗಳು, ಮಿಣುಕುಗಳು...

ಉದಯ ಟೀವಿಯ ‘ಬಂಗಾರದ ಬೇಟೆ’ ಕಾರ್ಯಕ್ರಮದಲ್ಲಿ ‘ತಾರಾ ಮೇಡಂ ವಿಚಿತ್ರವಾಗಿ ಮಾತನಾಡುತ್ತಾರೆ... ತುಸು ಹೆಚ್ಚು ಮೇಕಪ್‌ ಮಾಡಿಕೊಂಡು, ತಮ್ಮ ಅವತಾರ ಕೆಡಿಸಿಕೊಂಡಿದ್ದಾರೆ’ ಅನ್ನೋದು ತಾರಾಪ್ರೇಮಿಗಳ ದೂರು.

ಎಲ್ಲಿ ನೋಡಿದರೂ ಪತ್ರಕರ್ತ ರವಿಬೆಳಗೆರೆಯೇ ಕಾಣುತ್ತಿದ್ದಾರೆ. ಪತ್ರಿಕೆಯಲ್ಲೂ ಅವರೇ, ಟೀವಿಯಲ್ಲೂ ಅವರೇ... ಬೆಳಗ್ಗೆ ಎಫ್‌ಎಂ ರೇಡಿಯೋದಲ್ಲಿ ಮಾತಾಡುವ ಪುಣ್ಯಾತ್ಮ, ರಾತ್ರಿ ಹತ್ತು ಗಂಟೆಗೆ ಕ್ರೆೃಮ್‌ ಡೈರಿಯಲ್ಲಿ ಹಾಜರು! ಈ ಮಧ್ಯೆ 9.30ಕ್ಕೆ ಈ ಟೀವಿಯ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ವಕೀಲರಾಗಿ ಹಾಜರಾಗಲಿದ್ದಾರೆ! ಇಷ್ಟು ಸಾಲದು ಅಂತ, ಎರಡು-ಮೂರು ಕನ್ನಡ ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿದ್ದಾರೆ!

‘ಸಿರಿವಂತ’ ಸಿರಿಯನ್ನು ದಯಪಾಲಿಸುತ್ತಿದ್ದಾನೆ. ಅನೇಕ ಸೆಂಟರ್‌ಗಳಲ್ಲಿ ಚಿತ್ರ 50ದಿನ ದಾಟಿದೆ. ವಿಷ್ಣುವರ್ಧನ್‌, ಶ್ರುತಿ ಅಭಿನಯದ ಈ ಚಿತ್ರದ ನಿರ್ದೇಶಕ ಎಸ್‌.ನಾರಾಯಣ್‌. ಪ್ರೇಕ್ಷಕರ ಕಣ್ಣಲ್ಲಿ ನೀರು ಬರ್ತಾಯಿದೆ... ರಾಕ್‌ಲೈನ್‌ ವೆಂಕಟೇಶ್‌ ಜೇಬು ತುಂಬುತ್ತಿದೆ!

‘ಮಠ’ ಚಿತ್ರದ ಟೀಮ್‌, ಹೊಸ ಚಿತ್ರಕ್ಕೆ ಸಜ್ಜಾಗಿದೆ. ಚಿತ್ರದ ಹೆಸರು ‘ಎದ್ದೇಳು ಮಂಜುನಾಥ’. ಜಗ್ಗೇಶ್‌, ಕಾಮಿಡಿ ಅವತಾರಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನಿರ್ಮಾಪಕರಾಗಿ ದರ್ಶನ್‌ ಗೆದ್ದಿದ್ದಾರೆ. ‘ಜೊತೆಜೊತೆಯಲಿ’ ಚಿತ್ರ ಶತದಿನದತ್ತ ಮುನ್ನುಗ್ಗುತ್ತಿದ್ದು, ಚಿತ್ರದ ನಿರ್ದೇಶಕ ದಿನಕರ್‌, ತಮ್ಮ ಅಣ್ಣ ದರ್ಶನ್‌ರನ್ನಿಟ್ಟುಕೊಂಡು ಹೊಸ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರದಲ್ಲಿ ಲಾಂಗು-ಮಚ್ಚು ಇರೋದಿಲ್ಲವಂತೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada