For Quick Alerts
  ALLOW NOTIFICATIONS  
  For Daily Alerts

  ಸುಷ್ಮಾ ಕೆ.ರಾವ್‌ಗೆ ಕರ್ನಾಟಕ ಶ್ರೇಷ್ಠ ಕಿರುತೆರೆ ಪ್ರಶಸ್ತಿ

  By Staff
  |

  ಬೆಂಗಳೂರು, ಡಿ.22 : ಕರ್ನಾಟಕ ಶ್ರೇಷ್ಠ ಕಿರುತೆರೆ ಪ್ರಶಸ್ತಿಯನ್ನು ಖ್ಯಾತ ಕಿರುತೆರೆ ನಟಿ ಸುಷ್ಮಾ ಕೆ.ರಾವ್ ಈ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಗುಪ್ತಗಾಮಿನಿಯಲ್ಲಿಯ ಅಭಿನಯಕ್ಕಾಗಿ ಪಡೆದುಕೊಂಡಿದ್ದಾರೆ. ಕರ್ನಾಟಕದ ಜನತೆ ಎಸ್ಸೆಮ್ಮೆಸ್ ಮತ್ತು ದೂರವಾಣಿ ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಿದ್ದಾರೆ.

  ಈ ಟಿವಿಯಲ್ಲಿ ಪ್ರಸಾರವಾಗುವ 'ಮಂಥನ' ಧಾರಾವಾಹಿಯಲ್ಲಿಯ ನಟನೆಗಾಗಿ ಶ್ರೇಷ್ಠ ನಟ ಪ್ರಶಸ್ತಿಯನ್ನು ಅಚ್ಯುತ್ ಕುಮಾರ್ ಎಚ್.ಕೆ, ಕಸ್ತೂರಿ ವಾಹಿನಿಯ ಸಹಗಮನ' ಧಾರಾವಾಹಿಯ ನಿರ್ದೇಶನಕ್ಕಾಗಿ ಎಂ.ಎನ್.ಜಯಂತ್ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಹಾಗೂ ಶ್ರೇಷ್ಠ ಧಾರಾವಾಹಿಯಾಗಿ ಉದಯ ಟಿವಿಯ ನಾಕುತಂತಿ', ಶ್ರೇಷ್ಠ ರಿಯಾಲಿಟಿ ಶೋ ಪ್ರಶಸ್ತಿಗೆ ಈ ಟಿವಿಯ ರಾಗ ರಂಜಿನಿ' ಆಯ್ಕೆಯಾಗಿದೆ.

  ಕಿರುತೆರೆಗೆ ಸಲ್ಲಿಸಿದ ಉತ್ತಮ ಸೇವೆಗಾಗಿ ನೀಡುವ ವಿಶೇಷ ಪ್ರಶಸ್ತಿಗೆ ಎಸ್.ಎನ್.ಸೇತುರಾಮ್(ಸಂಭಾಷಣೆ), ಅಪರ್ಣ.ಎನ್ (ನಿರೂಪಣೆ) ಮತ್ತು ರಾಧಿಕಾ ರಾಣಿ. ಕೆ (ಸುದ್ದಿ ನಿರೂಪಣೆ, ಟಿ.ವಿ. 9) ಆಯ್ಕೆಯಾಗಿದ್ದಾರೆ.

  ಕರ್ನಾಟಕ ಶ್ರೇಷ್ಠ ಕಿರುತೆರೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟಿ ಸುಶ್ಮಾ ಕೆ. ರಾವ್, ಜೀ ವಾಹಿನಿಯು ತನ್ನ ಪ್ರತಿಸ್ಪರ್ದಿ ಜಾನೆಲ್ ಎಂಬ ಬೇದಭಾವ ತೋರಿಸದೆ ಕಿರುತೆರೆಗೆ ಪ್ರಶಸ್ತಿಯನ್ನು ನೀಡಿದ್ದು ಸಂತಸ ತಂದಿದೆ. ಈ ಪ್ರಶಸ್ತಿಗೆ ಆಯ್ಕೆಮಾಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು'ಎಂದರು.

  ನಾಕುತಂತಿ ಧಾರವಾಹಿಯ ನಿರ್ಮಾಪಕಿ ಶೈಲಜಾ ನಾಗ್ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ, ಕರ್ನಾಟಕ ಸರ್ಕಾರ ಇದುವರೆಗೂ ಮಾಡದಂತಹ ಕೆಲಸವನ್ನು ಜೀ ಕನ್ನಡ ವಾಹಿನಿ ಮಾಡಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಇದು ಕಿರುತೆರೆಗೆ ಸ್ಪೂರ್ತಿದಾಯಕವಾಗಿದೆ ಎಂದರು.

  ನಟ ಅಚ್ಯುತ್ ಕುಮಾರ್ ಮಾತನಾಡಿ, ಒಂದು ವಾಹಿನಿ ಕಿರುತೆರೆಗೆ ಪ್ರಶಸ್ತಿ ನೀಡುವುದು ಸಂತಸ ತಂದಿದೆ. ಈ ಪ್ರಶಸ್ತಿ ಕಲಾವಿದರಿಗೆ ಇನ್ನಷ್ಟು ಜೈತನ್ಯ, ಶ್ರಮ ವಹಿಸುವಂತೆ ಮಾಡಿದೆ ಎಂದರು.

  ಸುದ್ದಿ ನಿರೂಪಣೆಗಾಗಿ ಪ್ರಶಸ್ತಿ ಪಡೆದ ರಾಧಿಕಾ ರಾಣಿ ತನ್ನ ಸಾಧನೆ ಹಿಂದೆ ಪತಿಯ ಪ್ರೋತ್ಸಾಹ ಇದೆ ಎಂಬ ಸುದ್ದಿಯನ್ನು ತಿಳಿಸಿದರು.

  ವಿಶೇಷ ಅತಿಥಿಯಾಗಿ ಆಗಮಿಸಿದ ಗೋಲ್ಡಾನ್ ಸ್ಟಾರ್ ಗಣೇಶ್ ಕಿರುತೆರೆಗೆ ಪ್ರೋತ್ಸಾಹನೀಡುವಂತಹ ಕಾರ್ಯವನ್ನು ಜೀ ವಾಹಿನಿ ಮತ್ತು ಎಸ್ಸೆಲ್ ಗ್ರೂಪ್ ಮಾಡಿದ್ದು ಶ್ಲಾಘನೀಯ. ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಮಿಂಚಬಹುದು ಎಂಬುದಕ್ಕೆ ನಾನೇ ಸಾಕ್ಷಿ. ಅವಕಾಶ ಸಿಕ್ಕರೆ ಮಗದೊಮ್ಮೆ ಕಿರುತೆರೆಯಲ್ಲಿ ಮಿಂಚುತ್ತೇನೆ' ಎಂದರು.

  ನಟಿ ತಾರಾ ಮಾತನಾಡುತ್ತಾ ಜೀ ವಾಹಿನಿಯು ಒಂದು ತಪ್ಪು ಮಾಡಿದೆ. ಕಿರುತೆರೆ ಪ್ರಶಸ್ತಿ ನೀಡುವಾಗ ಜೀ ಕನ್ನಡವನ್ನು ಪರಿಗಣೆಗೆ ತೆಗೆದುಕೊಳ್ಳಬೇಕಿತ್ತು.ಜೀಕನ್ನಡದಲ್ಲೂ ಉತ್ತಮರು ಕೆಲಸ ಮಾಡುತ್ತಿದ್ದಾರೆ. ಬೆಳ್ಳಿತೆರೆಯಿಂದ ಕಿರುತೆರೆಗೆ ಬಂದು ಮಿಂಚಬಹುದು ಎಂಬುದಕ್ಕೆ ನಾನೇ ಸಾಕ್ಷಿ' ಎಂದರು.

  ಪ್ರವೀಣ್ ಗೋಡ್ಕಿಂಡಿ ಯವರು ವಾರಾಣಾಸಿ ಪ್ರವಾಸದಲ್ಲಿರುವುದರಿಂದ ಅವರ ಪತ್ನಿ ಸಾರಿಕಾ ಗೋಡ್ಕಿಂಡಿಯವರು ಶ್ರೇಷ್ಠ ರಿಯಾಲಿಟಿ ಶೋಗಾಗಿ ನೀಡಲಾಗುವ ಪ್ರಶಸ್ತಿಯನ್ನು ಸ್ವೀಕರಿಸಿದರು.

  ಅಪರ್ಣಾರವರು ಪ್ರಶಸ್ತಿಗಾಗಿ ಆಯ್ಕೆ ಆದದ್ದು ಆಶ್ಚರ್ಯವಾಗಿದೆ ಎನ್ನುತ್ತಾ ಎಲ್ಲರಿಗೂ ಶುಭಹಾರೈಸಿದರು. ಸಹಗಮನ ಧಾರವಾಹಿ ನಿರ್ದೇಶಕ ಎಂ.ಎನ್.ಜಯಂತ್ ಕಿರುತೆರೆಯಲ್ಲಿ ತೆರೆಯ ಹಿಂದೆ ನಿಂತು ಕೆಲಸ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದು ಸಂತಸ ತಂದಿದೆ' ಎಂದರು.

  ಜೀಕನ್ನಡ ಕಿರುತೆರೆಯ ಹಿರಿಮೆ:

  ಎಸ್ಸೆಲ್ ಮತ್ತು ಜೀ ಕನ್ನಡ ಜಂಟಿಯಾಗಿ ಕೊಡಮಾಡುತ್ತಿರುವ ಕರ್ನಾಟಕ ಶ್ರೇಷ್ಠ' ಪ್ರಶಸ್ತಿ ಸರಣಿಯಲ್ಲಿ ಹನ್ನೆರಡನೇ ಪ್ರಶಸ್ತಿಯಾಗಿ ಶ್ರೇಷ್ಠ ಕಿರುತೆರೆ ಪ್ರಶಸ್ತಿ'ಯನ್ನು ಕೊಡಲಾಗುತ್ತಿದೆ. ಜನವರಿ ೨೦೦೭ರಿಂದ ಪ್ರಾರಂಭವಾದ ಈ ಪ್ರಶಸ್ತಿ ಸರಣಿಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ ಎಂದು ಜೀ ನೆಟ್‌ವರ್ಕ್ ಮತ್ತು ಎಸ್ಸೆಲ್ ಗ್ರೂಪ್ ಸಾರ್ವಜನಿಕ ವ್ಯವಹಾರ ಉಪಾಧ್ಯಕ್ಷ ಗೌತಮ್ ಮಾಚಯ್ಯ ತಿಳಿಸಿದರು.

  ನಿವೃತ್ತ ನ್ಯಾಯಮೂರ್ತಿ ಆರ್.ರಾಮಕೃಷ್ಣ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಎಂ.ಬಿ.ಜಯಶ್ರೀ (ರಂಗ ಕಲಾವಿದೆ, ಗಾಯಕಿ), ಜಿ.ಎಸ್.ಕುಮಾರ್ (ಸುದ್ದಿ ಸಂಪಾದಕ, ಟೈಮ್ಸ್ ಆಪ್ ಇಂಡಿಯಾ), ಲಕ್ಶ್ಮಣ ಕೊಡಸೆ (ಸಹ ಸಂಪಾದಕ, ಪ್ರಜಾವಾಣಿ), ಡಾ.ಸಾ.ಶಿ ಮರುಳಯ್ಯ (ಖ್ಯಾತ ಸಾಹಿತಿ), ಡಾ. ಪೂರ್ಣಿಮಾ (ಸಂಪಾದಕರು, ಉದಯವಾಣಿ), ವಿ.ಎನ್.ಸುಬ್ಬರಾವ್ ( ಅಧ್ಯಕ್ಷರು, ಕರ್ನಾಟಕ ಮಾಧ್ಯಮ ಅಕಾಡೆಮಿ), ಬಿ.ಸುರೇಶ್ (ಅಧ್ಯಕ್ಷರು, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್) ಮತ್ತು ವಿನಯ ಪ್ರಕಾಶ್ ( ನಟಿ) ಸದಸ್ಯರಾಗಿದ್ದರು. ಜೀ ಕನ್ನಡದ ಮುಖ್ಯಸ್ಥ ಅನುಪ್ ಚಂದ್ರಶೇಖರ್, ಕಿರುತೆರೆಯ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  (ಏಜನ್ಸೀಸ್)
  ಟೀವಿ ಪರದೆ : ಈ ಐವರಲ್ಲಿ ಯಾರಿಗೆ ಎಸ್ಸೆಲ್ ಪ್ರಶಸ್ತಿ?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X