For Quick Alerts
  ALLOW NOTIFICATIONS  
  For Daily Alerts

  ರಿಮೇಕ್‌ಗೆ ಜೈ ಮತ್ತು ಸೈ -ವಿಷ್ಣು ವರ್ಧನ್‌

  By Staff
  |
 • ದಟ್ಸ್‌ಕನ್ನಡ ನ್ಯೂಸ್‌ಬ್ಯೂರೋ
 • ಬೆಂಗಳೂರು ವಿವಿ ‘ಗೌರವ ಡಾಕ್ಟರೇಟ್‌’ ಪಡೆದ ಸಂಭ್ರಮದ ಮಧ್ಯೆ, ಪ್ರೆಸ್‌ಕ್ಲಬ್‌ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿಷ್ಣು ವರ್ಧನ್‌ ಮಾತನಾಡುತ್ತಿದ್ದರು.

  ಡಾಕ್ಟರೇಟ್‌ಗೆ ನಾನು ಅರ್ಹನೆ ಅಥವಾ ಅರ್ಹನಲ್ಲವೇ? ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಆದರೆ ಆಶೀರ್ವಾದ ರೂಪದಲ್ಲಿ ಬಂದಿರುವ ಡಾಕ್ಟರೇಟ್‌ ಬೇಡ ಎಂದು ಅಹಂಕಾರ ಪ್ರದರ್ಶಿಸಲಾರೆ ಎಂದರು.

  ಈ ಪ್ರಶಸ್ತಿ /ಗೌರವ ನನ್ನ ಗುರುಗಳಾದ ಪುಟ್ಟಣ್ಣ ಅವರಿಗೆ ಅರ್ಪಿತ. ಪುಟ್ಟಣ್ಣ ಚಿತ್ರಮಂದಿರ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಹೋರಾಟ ನಡೆಸುವುದಾಗಿ ವಿಷ್ಣು ಈ ಸಂದರ್ಭದಲ್ಲಿ ಘೋಷಿಸಿದರು.

  ವಿಷ್ಣು ವಿಚಾರಧಾರೆಯ ಸ್ಯಾಂಪಲ್‌ಗಳು :

 • ರಿಮೇಕ್‌ ಚಿತ್ರ ಬೇಡ ಅನ್ನೋರು, ಅನುವಾದಿತ ಕಾದಂಬರಿಯನ್ನು ಯಾಕೆ ಓದ ಬೇಕು? ಎಲ್ಲಿಂದಲೋ ಬಂದ ಪೀಜಾವನ್ನು ಯಾಕೆ ತಿನ್ನಬೇಕು?

 • ರಾಜಕೀಯಕ್ಕೆ ಸದ್ಯಕ್ಕೆ ಬರೋದಿಲ್ಲ. ಅದು ನನಗೆ ಸರಿಹೊಂದುವುದೇ ಅನ್ನೋ ಪ್ರಶ್ನೆ ನನ್ನ ಮನದಲ್ಲಿದೆ.

 • ಚಿತ್ರರಂಗದಲ್ಲಿ ಒಂದು ಗುಂಪು ನನ್ನನ್ನು ಪಾಕಿಸ್ತಾನದವನಂತೆ ಕಾಣುತ್ತಿದೆ. ವ್ಯಕ್ತಿಯಾಗಿ ನಾನಿಲ್ಲಿ ಏನೂ ಮಾಡುವ ಹಾಗಿಲ್ಲ.

 • ಕನ್ನಡ ಪ್ರೀತಿ ಎಲ್ಲರಿಗೂ ಬೇಕು. ಭಾಷೆಯ ಋಣ ತೀರಿಸುವುದು ಎಲ್ಲರ ಕರ್ತವ್ಯ.

 • ನನಗೆ ಪ್ರಶಸ್ತಿಗಳ ಬಗ್ಗೆ ಆಕರ್ಷಣೆ ಇಲ್ಲ. ನನಗ್ಯಾವ ಪ್ರಶಸ್ತಿಗಳು ಬೇಡ.
 • ಮತ್ತೊಂದು ಸುದ್ದಿ : ವಿಷ್ಣುವರ್ಧನ್‌ ಅಭಿನಯದ ಹೊಸ ಚಿತ್ರ ‘ವಿಷ್ಣು ಸೇನಾ’ ಚಿತ್ರ ಶುಕ್ರವಾರ(ಡಿ.23) ರಾಜ್ಯದೆಲ್ಲೆಡೆ ತೆರೆಕಾಣಲಿದೆ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X