»   » ಕೆಟ್ಟು-ಕಂಗೆಟ್ಟು ಕಡೆಗೆ ಶಶಿಕುಮಾರ್‌ ಕಾಂಗ್ರೆಸ್‌ ಸೇರಿದ್ರು!

ಕೆಟ್ಟು-ಕಂಗೆಟ್ಟು ಕಡೆಗೆ ಶಶಿಕುಮಾರ್‌ ಕಾಂಗ್ರೆಸ್‌ ಸೇರಿದ್ರು!

Subscribe to Filmibeat Kannada
  • ಪುಷ್ಪ ಪಾದ
ನಟ ಮತ್ತು ಮಾಜಿ ಸಂಸದ ಶಶಿಕುಮಾರ್‌, ಶುಕ್ರವಾರ ಕಾಂಗ್ರೆಸ್‌ ಸೇರಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಲಾಭವೋ, ನಷ್ಟವೋ ಗೊತ್ತಿಲ್ಲ. ಆದರೆ ಶಶಿಗೊಂದು ಬದಲಾವಣೆ ಸಿಕ್ಕಿದೆ.

ಸ್ಯಾಂಡಲ್‌ವುಡ್‌ ಅಂತೂ ಒಂದು ಲೆಕ್ಕದಲ್ಲಿ ಶಶಿಕುಮಾರ್‌ ಅವರನ್ನು ಮರೆತುಬಿಟ್ಟಿದೆ. ಇನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತದಾರರಿಗೆ, ಶಶಿಕುಮಾರ್‌ ಬಗ್ಗೆ ಮೊದಲಿನ ಆಕರ್ಷಣೆ ಉಳಿದಿಲ್ಲ. ಸಂಸದರಾಗಿದ್ದ ತಮ್ಮಅಧಿಕಾರದವಧಿ ಉದ್ದಕ್ಕೂ ಗುಂಡು-ತುಂಡುಗಳ ಮಧ್ಯೆಯೇ ಕಾಲ ಸವೆಸಿದ ಶಶಿ, ಈಗ ಸದ್ಯಕ್ಕೆ ಒಂಟಿ.

ಅವರು ಮೊದಲಿದ್ದ ಜೆಡಿಯು, ಈಗ ರಾಜ್ಯದಲ್ಲಿ ಲೆಕ್ಕಕ್ಕುಂಟು ಆಟಕ್ಕಿಲ್ಲ. ಜೆಡಿಎಸ್‌ ಸೇರುವ ಹಂಬಲ ಹೊಂದಿದ್ದ ಶಶಿಗೆ, ದೇವೇಗೌಡರು ಯಾಕೋ ಬಾ ಎನ್ನಲಿಲ್ಲ. ಕೊನೆಗೆ ಎಲ್ಲರಿಗೂ ಆಶ್ರಯ ನೀಡುವ ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿದ್ದಾರೆ. ಇಲ್ಲವರು ಏನನ್ನೂ ನಿರೀಕ್ಷಿಸುವಂತಿಲ್ಲ. ಯಾಕೆಂದರೆ ; ಶಶಿಕುಮಾರ್‌ರಂತವರ ದೊಡ್ಡ ಗುಂಪೇ ಅಲ್ಲಿದೆ.

ಹೀಗಾಗಿಯೇ ಯಾವುದೇ ಷರತ್ತುಗಳಿಲ್ಲದೇ ಶಶಿಕುಮಾರ್‌, ಕಾಂಗ್ರೆಸ್‌ ಪಕ್ಷ ಪ್ರವೇಶಿಸಿದ್ದಾರೆ. ಅವರನ್ನು ಶುಕ್ರವಾರ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾರ ಹಾಕಿ ಸ್ವಾಗತಿಸಿದ್ದಾರೆ. ಶಶಿಕುಮಾರ್‌ಗೆ, ಹಾರಕ್ಕಿಂತಲೂ ಕಾಂಗ್ರೆಸ್‌ನಲ್ಲಿ ಹೆಚ್ಚಿಗೆ ಇನ್ನೇನಾದರೂ ಸಿಗುವ ಸಾಧ್ಯತೆಗಳು ಅತಿ ಕಡಿಮೆ.

ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಕಾಂಗ್ರೆಸ್‌ ಪ್ರವೇಶಿಸಿದ ಬೆನ್ನಲ್ಲಿಯೇ, ಅವರ ಹಾದಿಯನ್ನೇ ಶಶಿಕುಮಾರ್‌ ಆರಿಸಿಕೊಂಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada