»   » ಅತ್ಯುತ್ತಮ ಮಕ್ಕಳ ಚಿತ್ರವಾಗಿ 'ಗುಬ್ಬಚ್ಚಿಗಳು' ಆಯ್ಕೆ

ಅತ್ಯುತ್ತಮ ಮಕ್ಕಳ ಚಿತ್ರವಾಗಿ 'ಗುಬ್ಬಚ್ಚಿಗಳು' ಆಯ್ಕೆ

Posted By:
Subscribe to Filmibeat Kannada
Gubbachigalu still
ಕೇಂದ್ರ ಸರಕಾರ ಶನಿವಾರ 2008ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡದ ಎರಡು ಹಾಗೂ ತುಳುವಿನ ಒಂದು ಚಿತ್ರ ಸ್ಥಾನ ಪಡೆದಿದೆ. ಅತ್ಯುತ್ತಮ ಮಕ್ಕಳ ಚಿತ್ರವಾಗಿ ಅಭಯಸಿಂಹ ನಿರ್ದೇಶನದ 'ಗುಬ್ಬಚ್ಚಿಗಳು' ಹಾಗೂ ಪಿ ಶೇಷಾದ್ರಿ ನಿರ್ದೇಶನದ 'ವಿಮುಕ್ತಿ' ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿ ಪ್ರಶಸ್ತಿಗೆ ಆಯ್ಕೆಯಾಗಿವೆ. ಶಿವಧ್ವಜ್ ನಿರ್ದೇಶನದ ತುಳುವಿನ 'ಗಗ್ಗರ' ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿ ರಜತ ಪ್ರಶಸ್ತಿ ಪಡೆದಿದೆ.


ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ:

ಅತ್ಯುತ್ತಮ ಸಂಕಲನಕಾರ: ಫಿರಾಕ್
ಅತ್ಯುತ್ತ್ತಮ ಸ್ಪೆಷಲ್ ಎಫೆಕ್ಟ್ಸ್: ಮುಂಬೈ ಮೇರಿ ಜಾನ್
ಅತ್ಯುತ್ತಮ ಪೋಷಕ ನಟ: ಅರ್ಜುನ್ ರಾಮ್ ಪಾಲ್ (ರಾಕ್ ಆನ್)
ಅತ್ಯುತ್ತಮ ಪೋಷಕ ನಟಿ: ಕಂಗನಾ ರನೌತ್ (ಫ್ಯಾಶನ್)
ಅತ್ಯುತ್ತಮ ನಟ: ಉಪೇಂದ್ರ ಲಿಮಯೆ (ಜಾಗ್ವ)
ಸ್ವರ್ಣ ಕಮಲ: ಹಂತಯಿ (ಬಂಗಾಳಿ)
ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ: ಜೋಗ್ವಾ (ಮಾರಾಠಿ):
ಇಂದಿರಾಗಾಂಧಿ ಪ್ರಶಸ್ತಿ: ಎ ವೆಡ್ ನೆಸ್ ಡೇ
ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರೇಯಾ ಘೋಶಾಲ್
ಅತ್ಯುತ್ತಮ ಹಿನ್ನೆಲೆ ಗಾಯಕ: ಹರಿಹರನ್
ಅತ್ಯುತ್ತಮ ನಟಿ: ಪ್ರಿಯಾಂಕ ಚೋಪ್ರಾ (ಫ್ಯಾಶನ್)
ಅತ್ಯುತ್ತಮ ಮನರಂಜನಾತ್ಮಕ ಚಿತ್ರ: ಓಯ್ ಲಕ್ಕಿ ಲಕ್ಕಿ ಓಯ್
ಅತ್ಯುತ್ತಮ ನಿರ್ದೇಶಕ: ಬಾಲ (ತಮಿಳು:ನಾನ್ ಕಡವುಳ್)
ಉತ್ತಮ ಸಂಕಲನಕಾರ: ಮನೋಜ್
ಅತ್ಯುತ್ತಮ ಅನಿಮೇಷನ್ ಚಿತ್ರ: ರೋಡ್ ಸೈಡ್ ರೋಮಿಯೋ

ತಮ್ಮ ಚೊಚ್ಚಲ ನಿರ್ದೇಶನದ 'ಗುಬ್ಬಚ್ಚಿ'ಗಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರುವುದಕ್ಕೆ ಅಭಯ ಸಿಂಹ ಸಂತತ ವ್ಯಕ್ತಪಡಿಸಿದ್ದಾರೆ. ಸ್ವರ್ಣ ಕಮಲ ಪಡೆದ ಚಿತ್ರಕ್ಕೆ ತಲಾ ರು.1.5 ಲಕ್ಷ ನಗದು ಬಹುಮಾನ ಹಾಗೂ ರಜತ ಕಮಲ ಪ್ರಶಸ್ತಿ ಪಡೆದ ಚಿತ್ರಕ್ಕೆ ತಲಾ ರು.1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. 56ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸ್ಪರ್ಧೆಯಲ್ಲಿ ನಾಲ್ಕು ಕನ್ನಡ ಚಿತ್ರಗಳು ಇದ್ದವು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada