ನಾಯಕ ನಟನಾಗಿ ಆ ದಿನಗಳು ಬಚ್ಚನ್

ಸಿಕ್ಸರ್, ಮೊಗ್ಗಿನಮನಸು ಖ್ಯಾತಿಯ ಶಶಾಂಕ್ ತಮ್ಮ ಮುಂದಿನ ಚಿತ್ರಕ್ಕೆ ದೀಪಕ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2009ರ ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರಲಿದೆ. ಇಕೆ ಪಿಕ್ಚರ್ಸ್ ಬ್ಯಾನರಿನಡಿ ಗಂಗಾಧರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದೀಪಕ್ ನ ಪೂರ್ಣ ಹೆಸರು ಆರ್ಯನ್ ದೀಪಕ್ ಎಂದು. ಈತ ಅಮೆರಿಕಾದಲ್ಲಿ ಅಭಿನಯ, ಮಾರ್ಷಲ್ ಆರ್ಟ್ಸ್, ಡ್ಯಾನ್ಸ್ ತರಬೇತಿಯನ್ನು ಪಡೆದ ಪ್ರತಿಭಾವಂತ.
ನಿರ್ದೇಶಕ ಶಶಾಂಕ್ ತಮ್ಮ ಮೊಗ್ಗಿನ ಮನಸು ಚಿತ್ರದಲ್ಲೇ ದೀಪಕ್ ಅವರಿಗೆ ಅವಕಾಶ ಕೊಡಬೇಕಾಗಿತ್ತು. ಆದರೆ ಆ ಪಾತ್ರ ಅವರಿಗೆ ಅಷ್ಟಾಗಿ ಸರಿಹೊಂದುತ್ತಿರಲಿಲ್ಲ ಎಂಬ ಕಾರಣಕ್ಕೆ ಸುಮ್ಮನಾಗಿದ್ದರು. ಈಗ ಸಂಪೂರ್ಣ ಸಾಹಸ ಪ್ರಧಾನ ಚಿತ್ರದಲ್ಲಿ ದೀಪಕ್ ಗೆ ಅವಕಾಶ ಕೊಡುತ್ತಿದ್ದಾರೆ. ಈ ಚಿತ್ರದಲ್ಲೂ ಬಚ್ಚನ್ ಹೇರ್ ಸ್ಟೈಲ್ ಮುಂದುವರಿಯುತ್ತದೆ. ಆರ್ಯನ್ ದೀಪಕ್ ಎಂಬ ಹೆಸರನ್ನು ಕೊಂಚ ಮೊಟಕು ಮಾಡಿಕೊಂಡು ಬರೀ ಆರ್ಯನ್ ಎಂದು ಬದಲಿಸಿಕೊಳ್ಳಲಿದ್ದಾರೆ.
ಅಂದಹಾಗೆ ಈ ಚಿತ್ರದ ನಾಯಕಿಗಾಗಿ ಹುಡುಕಾಟ ಶುರುವಾಗಿದೆ. ಬಾಲಿವುಡ್ ನ ಕಂಗನಾ ರಾಣಾವತ್ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಚಿತ್ರಕ್ಕೆ ವಿ ಶ್ರೀಧರ್ ಸಂಗೀತ ಇರುತ್ತದೆ. ಉಳಿದ ಪಾತ್ರಧಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications