»   » ಗಣೇಶರ ಬೊಂಬಾಟ್ಗೆ 'ಯು' ಅರ್ಹತಾ ಪತ್ರ

ಗಣೇಶರ ಬೊಂಬಾಟ್ಗೆ 'ಯು' ಅರ್ಹತಾ ಪತ್ರ

Posted By:
Subscribe to Filmibeat Kannada

'ಬೊಂಬಾಟ್ ಶೀರ್ಷಿಕೆಯೇ ಬೊಂಬಾಟ್. ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಹೆಸರಾಂತ ದಿಗ್ದರ್ಶಕ ಡಿ.ರಾಜೇಂದ್ರಬಾಬು ನಿರ್ದೇಶನದ ಬೊಂಬಾಟ್ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ 'ಯು 'ಅರ್ಹತಾಪತ್ರವನ್ನು ನೀಡಿ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ. ಇದಲ್ಲದೆ ನಾಯಕ ಗಣೇಶ್ ಅವರ ಅಭಿನಯವನ್ನು ಮಂಡಲಿ ವಿಶೇಷವಾಗಿ ಪ್ರಶಂಸಿಸಿದೆ.

'ಬೊಂಬಾಟ್ಇದು ಗಣೇಶನ ಆಟ. ಆಗಸ್ಟ್ ಮೊದಲವಾರದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಧ್ವನಿಸುರುಳಿಗಳನ್ನು ಬಿಗ್ ಮ್ಯೂಸಿಕ್ ಸಂಸ್ಥೆ ಮಾರುಕಟ್ಟೆಗೆ ತಂದಿದ್ದು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಮುಂಗಾರು ಮಳೆ ಖ್ಯಾತಿಯ ಮನೋಮೂರ್ತಿ, ಜಯಂತ್ ಕಾಯ್ಕಿಣಿ ಅವರ ಸಂಗೀತ, ಸಾಹಿತ್ಯದಿಂದ ಚಿತ್ರದ ಹಾಡುಗಳು ಜನಪ್ರಿಯತೆ ಗಳಿಸಿವೆ.

ಗೋಲ್ಡನ್‌ಸ್ಟಾರ್ ಗಣೇಶ್ ನಾಯಕನಾಗಿರುವ ಈ ಚಿತ್ರದಲ್ಲಿ ಮೋಹಕತಾರೆ ರಮ್ಯ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಗಣೇಶ್, ರಮ್ಯ ಜೋಡಿಯ ಮೊದಲ ಚಿತ್ರವೂ ಹೌದು. ಮುಖೇಶ್‌ರಿಷಿ, ರಾಹುಲ್‌ದೇವ್, ಶೋಭರಾಜ್, ಗುರುದತ್, ಅವಿನಾಶ್, ಆದಿಲೋಕೇಶ್, ವಿನಯಾಪ್ರಕಾಶ್, ಶಾಂತಲಾ, ಕುರಿಗಳು ಸುನೀಲ್, ಕೆಂಪೇಗೌಡ, ಕೆ.ವಿ.ಮಂಜಯ್ಯ, ಸಂದೀಪ್, ಪತ್ರಕರ್ತ ವಿಜಯಸಾರಥಿ ಮುಂತಾದವರ ತಾರಾಬಳಗ 'ಬೊಂಬಾಟ್ನಲ್ಲಿದೆ.

ಎಂ.ನೀಲಕಂಠನಾಯ್ಡು ಅವರು ಅರ್ಪಿಸುತ್ತಿರುವ ರಾಕ್ ಲೈನ್ ಬ್ಯಾನರ್ ನ ಈ ಚಿತ್ರಕ್ಕೆ ಜನಾರ್ಧನ್ ಮಹರ್ಷಿ ಕಥೆ ಬರೆದಿದ್ದಾರೆ. ಆ ಕಥೆಗೆ ನಿರ್ದೇಶಕ ಡಿ.ರಾಜೇಂದ್ರಬಾಬು ಚಿತ್ರಕಥೆ ಬರೆದಿದ್ದಾರೆ. ಮನೊಮೂರ್ತಿ ಸಂಗೀತ, ಶೇಖರ್‌ಚಂದ್ರು ಛಾಯಾಗ್ರಹಣ, ಎಂ.ಎಸ್.ರಮೇಶ್ ಸಂಭಾಷಣೆ, ರವಿವರ್ಮ, ಡಿಫ಼ರೆಂಟ್‌ಡ್ಯಾನಿ ಸಾಹಸ, ಚಿನ್ನಿಪ್ರಕಾಶ್ ನೃತ್ಯ, ರಮೇಶ್‌ಬಾಬು ಕಲೆ, ರಾಜಾರಾವ್ ಮತ್ತು ಸುರೇಶ್ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

(ದಟ್ಸ್ ಸಿನಿವಾರ್ತೆ)

ಬೊಂಬಾಟ್ ಚಿತ್ರ ಧ್ವನಿ ಸುರಳಿ ವಿಮರ್ಶೆ
ಗೋಲ್ಡನ್ ಸ್ಟಾರ್ ಹಾಗೂ ಲಕ್ಕಿ ಸ್ಟಾರ್ ಬೊಂಬಾಟ್
ಗಣೇಶ್, ರಮ್ಯಾ ಜೋಡಿ ಬೊಂಬಾಟ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada