ಹಾಸ್ಯ ರತ್ನಾಕರನ ಕಣ್ಣುಗಳು ಮಣ್ಣಾಗದೆ ಬೆಳಕಾದವು

ವರನಟ ಡಾ.ರಾಜ್ ಕುಮಾರ್ ಅವರು ನೇತ್ರದಾನ ಮಾಡಿದ ಬಳಿಕ ರತ್ನಾಕರ್ ಅವರು ನೇತ್ರದಾನ ಪತ್ರಗಳಿಗೆ ಸಹಿಹಾಕಿದ್ದರು. ರತ್ನಾಕರ್ ಅವರ ಪತ್ನಿ ಮೂಕಾಂಬಿಕಾ ಅವರು ಹದಿನೆಂಟು ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರವನ್ನು ಅವರ ಮೂವರು ಪುತ್ರರು ನೆರವೇರಿಸಿದರು.
ಡಾ.ಜಯಮಾಲಾ, ಜಯಂತಿ, ಶಿವರಾಜ್ ಕುಮಾರ್, ದರ್ಶನ್, ದೊಡ್ಡಣ್ಣ ಸೇರಿದಂತೆ ಕನ್ನಡ ಚಿತ್ರರಂಗದಹಲವು ಕಲಾವಿದರು ಮೈಸೂರಿಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ರತ್ನಾಕರ್ ಅವರು ತಮ್ಮ ವಿಶಿಷ್ಟ ಧ್ವನಿಯಿಂದ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದರು. ಕೊನೆಗಾಲದಲ್ಲಿ ಕಷ್ಟದಲ್ಲಿದ್ದ ಹಿರಿಯ ಜೀವ ನೇತ್ರದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ನೇತ್ರದಾನ ಕೆಎಂ ರತ್ನಾಕರ್ ಮೈಸೂರು ಗುರು ಶಿಷ್ಯರು k m rathnakar mysore guru shishyaru eye donation bhakta kanakadasa


Click it and Unblock the Notifications