ಕೆ ಆರ್ ಮಾರ್ಕೆಟ್ ಮಧ್ಯೆ ನಟನ ಗೋವಿಂದನ ನಾಮ

"ಗೋವಿಂದಾಯನಮಃ ಚಿತ್ರ ಸಾಕಷ್ಟು ವಿಭಿನ್ನ ಕಥೆ ಹೊಂದಿದ್ದು ಕೋಮಲ್ ಅಭಿನಯಕ್ಕೆ ಹೇಳಿ ಮಾಡಿಸಿದಂತಿದೆ. ಚಿತ್ರಕ್ಕಾಗಿ ಕೋಮಲ್ ಕೂಡ ಸಾಕಷ್ಟು ತಯಾರಿ ನಡೆಸಿದ್ದು ಕಂಡುಬಂದಿದೆ. ನಾವು ಅಂದುಕೊಂಡಿದ್ದಕ್ಕಿಂತ ಚಿತ್ರ ಚೆನ್ನಾಗಿ ಬಂದಿದೆ. ಜನರಿಗೆ ಎಲ್ಲೂ ಬೋರಾಗದಂತೆ ಕಾಮಿಡಿಯನ್ನು ನಿರ್ವಹಿಸಿಲಾಗಿದೆ" ಎಂದಿದ್ದಾರೆ ನಿರ್ದೇಶಕರು.
ಕೋಮಲ್ ಕೂಡ ಈ ಚಿತ್ರಕ್ಕೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರಂತೆ. ಕಾರಣ ಸ್ಕ್ರಿಪ್ಟ್ ಹಾಗೂ ನಿರ್ದೇಶನ. ಹಾಡುಗಳೂ ಕೂಡ ಚೆನ್ನಾಗಿದ್ದು ಜನವರಿ 26 ಅಥವಾ 28ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಸಿನಿಮಾವನ್ನು ಕೂಡ ಬರುವ ವರ್ಷ ಪ್ರಾರಂಭದಲ್ಲೇ ಸಾದ್ಯವಾದಷ್ಟು ಬೇಗ ತೆರೆಗೆ ತರುವ ಯೋಚನೆ ಚಿತ್ರತಂಡದ್ದು. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Movie Govindaya Namaha completed the shooting. Komal Kumar acts in this movie and direction by Pawan Odeyar.


Click it and Unblock the Notifications











