ಗುರುದತ್ ಗೆ ಕೈ ಎತ್ತಿ 'ಜೈ' ಎಂದ ಜಗ ಮೆಚ್ಚಿದ ಮಗ

ಹೌದು, ಕನ್ನಡ ಚಿತ್ರರಂಗದ ದಿವಂಗತ ಖ್ಯಾತ ಗೀತಸಾಹಿತಿ ಚಿ. ಉದಯಶಂಕರ್ ಮಗ ಗುರುದತ್, ಶಿವಣ್ಣನಿಗಾಗಿ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಒಂದೇ ಕಾಲದಲ್ಲಿ ಈ ಇಬ್ಬರೂ ಚಿತ್ರರಂಗಕ್ಕೆ ಬಂದವರು. ಸಾಕಷ್ಟು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದವರೂ ಕೂಡ.
ಈ ಮೊದಲು ದತ್ತ, ಕಾಮಣ್ಣನ ಮಕ್ಕಳು, ಕಿಚ್ಚ-ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ್ದ ಗುರುದತ್ ಈಗ ಶಿವಣ್ಣನ ಚಿತ್ರ ನಿರ್ದೇಶಿಸಲು ಹೊರಟಿದ್ದಾರೆ. ಕೇಳಿದ ತಕ್ಷಣ ಶಿವಣ್ಣ ಕಾಲ್ ಶೀಟ್ ಕೊಟ್ಟಿದ್ದರಿಂದ ಸಹಜವಾಗಿಯೇ ಸಖತ್ ಖುಷಿಯಾಗಿದ್ದಾರೆ. ಚಿತ್ರದ ಬಗ್ಗೆ ಸದ್ಯಕ್ಕಿರುವುದು ಇಷ್ಟೇ ಮಾಹಿತಿ. (ಒನ್ ಇಂಡಿಯಾ ಕನ್ನಡ)
English summary
Actor Shivaraj Kumar acts in Gurudutt direction movie.


Click it and Unblock the Notifications