ಗಣೇಶ್, ಶೈಲೂ ಚಿತ್ರವನ್ನು ಹಾಡಿ ಹೊಗಳಿದ ಶಿವಣ್ಣ

ಹೌದು, ಶಿವಣ್ಣ ಶೈಲೂ ಚಿತ್ರವನ್ನು ಸಖತ್ ಇಷ್ಟಪಟ್ಟಿದ್ದಾರೆ. ಚಿತ್ರ ನೋಡಿದ ಶಿವಣ್ಣ ಭಾವೋದ್ವೇಗವನ್ನು ನಿಯಂತ್ರಣಕ್ಕೆ ತಣದುಕೊಂಡು, ಗಣೇಶ್ ಅಭಿನಯ ಚಿತ್ರದ ಹೈಲೈಟ್ ಅಂದಿದ್ದಾರೆ. ಜೊತೆಗೆ ಭಾಮಾ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಸುರೇಶ್ಚಂದ್ರ ಹಾಗೂ ಇಳಾ ವಿಟ್ಲ ಅಭಿನಯವನ್ನು ಕೂಡ ಪ್ರಶಂಸಿಸಿದ್ದಾರೆ.
ಪ್ರೇಕ್ಷಕರಂತೂ ಗಣೇಶ್ ಅಭಿನಯ ನೋಡಿ ಮಂತ್ರಮುಗ್ಧರಾಗಿದ್ದಾರೆ. ಇಷ್ಟೊಂದು 'ರಫ್' ಶೇಡ್ ಇರುವ ಪಾತ್ರವನ್ನು ಗಣೇಶ್ ಇಷ್ಟೊಂದು ಲೀಲಾಜಾಲವಾಗಿ ಮಾಡಿರುವುದನ್ನು ನೋಡಿ ಈ ಮೊದಲು ಗಣೇಶ್ ಅಭಿಮಾನಿಗಳಲ್ಲದವರೂ ಆಗಿಬಿಟ್ಟಿದ್ದಾರೆ. ಚಾಕೊಲೇಟ್ ಇಮೇಜ್ ನ ಗಣೇಶ್, ತಾನು ಎಂತಹ ಪಾತ್ರಕ್ಕಾದರೂ ಸಂಪೂರ್ಣ ನ್ಯಾಯ ಸಲ್ಲಿಸಬಲ್ಲೆ ಎಂಬುದನ್ನು ನಿರೂಪಿಸಿ ಗೆದ್ದಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Hattrick Hero Shivaraj Kumar admires Golden star Ganesh acting in the movie Shiloo. S Narayan directs this movie. Now, its screening all over Karnataka.


Click it and Unblock the Notifications











