ಜೊತೆಯಾಗಿ ಹಿತವಾಗಿ ಶಿವಣ್ಣ, ರಾಘಣ್ಣ ರ್‍ಯಾಂಪ್ ಶೋ

By Rajendra

Shivarajkumar ramp show
ತಮ್ಮ ಇಪ್ಪತ್ತೈದು ವರ್ಷಗಳ ವೃತ್ತಿಜೀವನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೇ ಮೊಟ್ಟ ಮೊದಲ ಬಾರಿಗೆ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿ ತಮ್ಮ ಅಭಿಮಾನಿಗಳನ್ನು ಸಂತಸಪಡಿಸಿದ್ದಾರೆ. ಶಿವಣ್ಣನಿಗೆ ರ್‍ಯಾಂಪ್ ಮೇಲೆ ಸಾಥ್ ನೀಡಿದವರು ರಾಘವೇಂದ್ರ ರಾಜ್‌ಕುಮಾರ್.

ಶಿವಣ್ಣನಿಗೆ ಸಿನಿಮಾ ತಾರೆಗಳಾದ ದಿಗಂತ್, ಐಂದ್ರಿತಾ ರೇ, ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್ ಸಾಥ್ ನೀಡಿದರು. ಲಲಿತ್ ಹೋಟೆಲ್ ಅಶೋಕದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದ ಹಿಂದಿನ ಶಕ್ತಿ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ.

9Thots ಎಂಟರ್‌ಟೈನ್‌ಮೆಂಟ್ ಹಾಗೂ ಸೆಲಿಬ್ ಬಿ ರೂಪಿಸಿದ್ದ ತಮನ್ನಾ ಡಿಸೈನರ್ ಕಲೆಕ್ಷನ್ಸ್ ಪ್ರದರ್ಶಿಸಿ ಗಮನಸೆಳೆದರು. ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ನಿಫ್ಟ್) ವಿದ್ಯಾರ್ಥಿಗಳು ರೂಪಿಸಿದ ವಸ್ತ್ರಗಳನ್ನು ಇವರು ಪ್ರದರ್ಶಿಸಿದರು. ರಾಕ್‌ಲೈನ್ ವೆಂಕಟೇಶ್, ಜೇಡರಳ್ಳಿ ಕೃಷ್ಣಪ್ಪ, ಸೂರಪ್ಪ ಬಾಬು, ಶಂಕರೇಗೌಡ, ಗೀತಾ ಶಿವರಾಜ್ ಕುಮಾರ್ ಅವರು ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ವಸ್ತ್ರವೈವಿಧ್ಯಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ಚಿತ್ರರಂಗದ ಕಡೆಗೆ ಇತರರು ನೋಡುವಂತಾಗಿದೆ ಎಂಬ ಅಭಿಪ್ರಾಯ ಈ ವೇದಿಕೆಯಲ್ಲಿ ವ್ಯಕ್ತವಾಯಿತು. ರಾಕೇಶ್, ಚೇತನ್, ರಿಶಿಕಾ ಸಿಂಗ್, ತೇಜಸ್ವಿನಿ, ಹರ್ಷಿಕಾ ಪೂಣಚ್ಚ, ಸಿಂಧು ಮುಂತಾದ ಸಿನಿಮಾ ತಾರೆಗಳು ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿ ಗಮನಸೆಳೆದದ್ದು ವಿಶೇಷವಾಗಿತ್ತು. (ಏಜೆನ್ಸೀಸ್)

More from Filmibeat

English summary
Kannada film stars taking part in the ramp show is for the first time. There are examples of one or two walking on the ramp but a few top stars taking part in the Tamanna Collections, 9Thots Entertainment and Celeb-B event was unusual. Hat Trick Hero Shivarajakumar and Raghavendra Rajakumar, Diganth with Aindrita Ray, Golden star Ganesh with his wife Shilpa came to the ramp in pairs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X