ಪುನೀತ್ ಪರಮಾತ್ಮನ ಬಗ್ಗೆ ಐಂದ್ರಿತಾ ಕೊಟ್ಟ ಸುಳಿವು

By Rajendra

ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ಪರಮಾತ್ಮ' ಚಿತ್ರದ ಬಗ್ಗೆ ಐಂದ್ರಿತಾ ರೇ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಐಂದ್ರಿತಾ ಮುಖ್ಯಪಾತ್ರವನ್ನು ಪೋಷಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ತ್ರಿಕೋಣ ಪ್ರೇಮ ಕಥಾಹಂದರವನ್ನು ಒಳಗೊಂಡಿದೆ.

ಚಿತ್ರದಲ್ಲಿ ಇಬ್ಬರು ನಾಯಕಿಯರು ಐಂದ್ರಿತಾ ಹಾಗೂ ದೀಪಾ ಸನ್ನಿದ್ಧಿ. ಇವರಲ್ಲಿ 'ಪರಮಾತ್ಮ'ನ ಪ್ರೇಯಸಿಯಾರು? ನಾನಂತೂ ಅಲ್ಲ ಎಂದಿದ್ದಾರೆ ಐಂದ್ರಿತಾ. ಚಿತ್ರದಲ್ಲಿ ಪುನೀತ್‌ಗೆ ನಾಯಕಿ ಅಲ್ಲ ಎಂಬ ಗುಟ್ಟ್ಟನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ತಮ್ಮ ಪಾತ್ರದ ಬಗ್ಗೆ ಸಂಪೂರ್ಣ ತೃಪ್ತಿ ಇದೆ ಎಂದಿದ್ದಾರೆ.

ನನಗೆ ಯಾವ ರೀತಿಯ ಪಾತ್ರ ಕೊಡಬೇಕು. ಅದನ್ನು ಹೇಗೆ ಬಳಸಬೇಕು ಎಂಬುದು ಯೋಗರಾಜ್ ಭಟ್ ಅವರಿಗೆ ಗೊತ್ತು. "ನನ್ನ ಪಾತ್ರದ ಬಗ್ಗೆ ನಾನು ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ. ನನಗೆ ಸೂಕ್ತವಾದ ಪಾತ್ರವನ್ನೇ ಅವರು ಕೊಟ್ಟಿದ್ದಾರೆ" ಎಂದು ಸಮಾಧಾನದ ಮಾತನ್ನು ಆಡಿದ್ದಾರೆ. (ಏಜೆನ್ಸೀಸ್)

More from Filmibeat

English summary
Actress Aindrita Ray has revealed that director Yogaraj Bhat upcoming movie Paramathma has a love triangle, but she is not Powerstar Puneet Rajkumar love interest in the film. Actress Deepa Sannidhi is Puneet romantic angle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X