ಕನ್ನಡಕ್ಕೆ ಅಡಿಯಿಡಲಿದ್ದಾರೆ ನಾಗವಲ್ಲಿ ಅನುಷ್ಕಾ ಶೆಟ್ಟಿ

By Rajendra

ಬೆಂಗಳೂರು ಸ್ವೀಟಿ ಬ್ಯೂಟಿ ಅನುಷ್ಕಾ ಶೆಟ್ಟಿ ಕನ್ನಡಕ್ಕೆ ಅಡಿಯಿಡಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 'ಬುಲ್ ಬುಲ್' ಚಿತ್ರಕ್ಕೆ ಅನುಷ್ಕಾ ಶೀಘ್ರದಲ್ಲೆ ಸಹಿಹಾಕಲಿದ್ದಾರೆ. ದಿನಕರ್ ತೂಗುದೀಪ ನಿರ್ಮಿಸುತ್ತಿರುವ ಈ ಚಿತ್ರದ ನಿರ್ದೇಶಕರು ಎಂ ಡಿ ಶ್ರೀಧರ್.

ಈಗಾಗಲೆ ಅನುಷ್ಕಾ ಶೆಟ್ಟಿ ಜೊತೆ ಮಾತುಕತೆ ನಡೆದಿದ್ದು ಆಕೆ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದ್ದಾರೆ ಎನ್ನಲಾಗಿದೆ. ಆದರೆ ಡೇಟ್ಸ್ ಹೊಂದಾಣಿಕೆಯೇ ದೊಡ್ಡ ಸಮಸ್ಯೆಯಾಗಿದೆ. ಸದ್ಯಕ್ಕೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಹಾಗೂ 'ವಿರಾಟ್' ಚಿತ್ರಗಳಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ.

'ಬುಲ್ ಬುಲ್' ಚಿತ್ರ ನವೆಂಬರ್‌ನಲ್ಲಿ ಸೆಟ್ಟೇರಲಿದ್ದು, ಶೀಘ್ರದಲ್ಲೆ ಅನುಷ್ಕಾ ಶೆಟ್ಟಿ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ದಿನಕರ್ ಹೇಳಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸಲು ಶ್ರೀಯಾ ಹಾಗೂ ತ್ರಿಷಾ ಕೂಡ ಒಪ್ಪ್ಪಿದ್ದರಂತೆ. ಆದರೆ ಕನ್ನಡದ ಹುಡುಗಿಯನ್ನೇ ಕರೆತರಬೇಕು ಎಂಬುದು ದಿನಕರ್ ಅವರ ಪಟ್ಟು.

ಈ ಹಿಂದೊಮ್ಮೆ 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ನೋಡಲು ಅನುಷ್ಕಾ ಬೆಂಗಳೂರಿಗೆ ಆಗಮಿಸಿದ್ದರು.ಆಗ ಮಾತನಾಡುತ್ತಾ, ತಮಗೆ ಒಳ್ಳೆಯ ಸಬ್ಜೆಕ್ಟ್ ಸಿಕ್ಕಿದರೆ ಕನ್ನಡದಲ್ಲೂ ಅಭಿನಯಿಸುವುದಾಗಿ ತಿಳಿಸಿದ್ದರು. ಈಗ ಅನುಷ್ಕಾ ಮಾತುಗಳು ಮುತ್ತಾಗುವ ಹಂತದಲ್ಲಿವೆ. (ಏಜೆನ್ಸೀಸ್)

More from Filmibeat

English summary
Banalore sweety beauty Anushka Shetty to act with Darshan in the movie Bul Bul. The movie Bul Bul is remake of Telugu movie Darling . The movie will be launched in the month of November directing by M.D.Sridhar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X