ಎಂಥಾ ಯೋಗ, ಮಣಿರತ್ನಂ ಟೆಸ್ಟ್ ನಲ್ಲಿ ಪಾಸಾದ ಲಕ್ಷ್ಮೀ

ತಮಿಳು, ತೆಲುಗು ಚಿತ್ರಗಳಲ್ಲಿ ಗ್ಲಾಮರಸ್ ರೋಲ್‌ಗಳಲ್ಲಿ ಮಿಂಚಿದ್ದ 'ದೂಕುಡು' ಬೆಡಗಿ ಸಮಂತಾರನ್ನು ತಮ್ಮ ಚಿತ್ರಕ್ಕೆ ಮಣಿರತ್ನಂ ಕರೆತರಲು ನಿರ್ಧರಿಸಿದ್ದರು. ಆದರೆ ಮಣಿ ಅವರ ಸ್ಕ್ರೀನ್ ಟೆಸ್ಟ್‌ನಲ್ಲಿ ಸಮಂತಾ ಫೇಲ್ ಆಗಿದ್ದರು. ನಂತರ ಮಣಿರತ್ನಂ, ಹೊಸ ನಟಿಗಾಗಿ ಶೋಧ ಮುಂದುವರಿಸಿದ್ದರು. ಇದೀಗ ಫಲಿತಾಂಶ ಪ್ರಕಟವಾಗಿದೆ, ಅದು ಮೋಹನ್ ಬಾಬು ಮಗಳು ಲಕ್ಷ್ಮೀ ಮಂಚು ಎಂಬ ತೆಲುಗು ಹುಡುಗಿ.
ಸಂವೇದನಾಶೀಲ ಮನಸುಗಳ ಲವ್ ಸ್ಟೋರಿಯೊಂದನ್ನು ಮಣಿ ಈ ಬಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಶ್ರೀಲಂಕಾದ ನೌಕಾದಳದ ಕೈಗೆ ಸಿಕ್ಕ ರಾಮೇಶ್ವರಂ ಮೀನುಗಾರ ಬದುಕು ಬವಣೆಯ ಹಿನ್ನೆಲೆಯಲ್ಲಿ ಕತೆ ಸಾಗುತ್ತದೆ. ಇದೀಗ ಹೀರೋಯಿನ್ ಆಯ್ಕೆಯೂ ಮುಗಿದಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಲಕ್ಷ್ಮೀ ಮಂಚು ಸಖತ್ ಲಕ್ಕೀ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. (ಏಜೆನ್ಸೀಸ್)
More from Filmibeat
English summary
In Screening test of director Mani Rathnam, actress Lakshmi Manchu has been passed and Selected for the movie Poovadai. Gowtham is the Hero.


Click it and Unblock the Notifications











