ತಾಯಿ ಪಾತ್ರ ಬೇಡವೆಂದ ಮಂದಾರ ಹೂ ಪ್ರೇಮ

ಬರೋಬ್ಬರಿ 15 ವರ್ಷಗಳ ಕಾಲ ನಾಯಕಿಯಾಗಿ ಚಿತ್ರರಂಗದಲ್ಲದ್ದ ಪ್ರೇಮಾ, ದಶಕಗಳ ಕಾಲ ಯಶಸ್ವಿ ಹೀರೋಯಿನ್ ಆಗಿ ಮೆರೆದವರು. 2006ರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಜೀವನ್ ಅಪ್ಪಚ್ಚು ಜತೆ ಮದುವೆಯಾದ ಮೇಲೆ ಚಿತ್ರರಂಗದಿಂದ ನಾಪತ್ತೆಯಾದ ಪ್ರೇಮಾ, ನಂತರ ನಟಿಸಿದ ಚಿತ್ರವಂದರೆ 'ಶಿಶರ'.

ನಂತರ ಪ್ರೇಮಾಗೆ ಅವಕಾಶ ಸಿಗಲಿಲ್ಲವೇ? ಹಾಗೇನೂ ಇಲ್ಲ, ಪ್ರೇಮಾಗೆ ತಾಯಿಯ ಪಾತ್ರಕ್ಕೆ ಆಹ್ವಾನ ಬಂದಿತ್ತು. ಅದು ರಮ್ಯಾ ನಾಯಕಿಯಾಗಿರುವ ಚಿತ್ರ. ಅದರಲ್ಲಿ ತಾಯಿಯಾಗಿ ನಟಿಸಲು ಪ್ರೇಮಾಗೆ ಆಹ್ವಾನವಿತ್ತಿದ್ದರು ನಿರ್ಮಾಪಕರು. ಆದರೆ ಪ್ರೇಮಾ ಅದನ್ನು ಒಪ್ಪಲಿಲ್ಲ. ಅದಕ್ಕೆ ಪ್ರೇಮಾ ಕೊಟ್ಟ ಕಾರಣ ಸಖತ್ತಾಗಿದೆ, ನೋಡಿ.

"ಮದುವೆಯಾಗಿ ನಾಲ್ಕೈದು ವರ್ಷಗಳಾದರೂ ನಾನು ತಾಯಿಯಾಗಿಲ್ಲ. ಹಾಗಾಗಿ ಸದ್ಯಕ್ಕೆ ಇಂತಹ ಪಾತ್ರಗಳಲ್ಲಿ ನಟಿಸುವುದಿಲ್ಲ. ನಿವೃತ್ತಿ ಅಂತೇನೂ ಇಲ್ಲ, ಸೂಕ್ತ ಪಾತ್ರಕ್ಕೆ ಹುಡುಕುತ್ತಿದ್ದೇನೆ." ಅಂದಿದ್ದಾರೆ ಪ್ರೇಮಾ. ಎಲ್ಲಾ ಪಾತ್ರಕ್ಕೂ ಅನುಭವವೇ ಬೇಕಾ ಎಂದು ಪ್ರೇಮಾರನ್ನು ಕೇಳಲು ಹೋಗಬೇಡಿ. ನಿಮಗೆ ಇನ್ನೇನಾದರೂ ಅನುಭವವಾದರೆ ಕಷ್ಟ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actress Prema, rejected mother role offer. After her marriage, she acted only in shishira movie.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X