»   » ಜಂಭದ ಹುಡುಗಿ ಪ್ರಿಯಾ ಹಾಸನ್ ಈಗ 'ರೌಡಿ ರಾಣಿ'

ಜಂಭದ ಹುಡುಗಿ ಪ್ರಿಯಾ ಹಾಸನ್ ಈಗ 'ರೌಡಿ ರಾಣಿ'

Posted By:
Subscribe to Filmibeat Kannada

ಕನ್ನಡ ನಟಿ, ಜಂಭದ ಹುಡುಗಿ ಪ್ರಿಯಾ ಹಾಸನ್ ಸದ್ಯ ತೆಲುಗು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕನ್ನಡದ ನಿರ್ಮಾಪಕಿ, ನಟಿ, ನಿರ್ದೆಶಕಿ, ಪ್ರಿಯಾ ಹಾಸನ್ ಕನ್ನಡ ಚಿತ್ರಗಳಲ್ಲಿ ಮಾಡಿರುವುದೆಲ್ಲಾ ಹೊಡಿಬಡಿ ಎನ್ನುವ ಗಂಡುಬೀರಿ ಪಾತ್ರಗಳೇ. ಆದರೆ ಈಕೆ ತೆಲುಗಿನಲ್ಲಿ ನಟಿಸುತ್ತಿರುವುದು ಚಿತ್ರ 'ಶ್ರೀ ವಾಸವಿ ವೈಭವಂ' ಎಂಬ ಭಕ್ತಿಪ್ರಧಾನ ಚಿತ್ರದ ಪಾತ್ರವೊಂದರಲ್ಲಿ.

ಚಿತ್ರದ ಹೀರೋ ಕನ್ನಡ ಮೂಲದ ತೆಲುಗು ನಟ ಸುಮನ್. ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಖ್ಯಾತ ನಟಿ ಮೀನಾ ಕೂಡ ಇದ್ದಾರೆ. ವಿ ದೊರೆಸ್ವಾಮಿ ನಾಯ್ಡು ನಿರ್ಮಾಣದ ಉದಯಭಾಸ್ಕರ್ ನಿರ್ದೇಶನದ ಈ ಚಿತ್ರದಲ್ಲಿ ಆರ್ಯ ಸಮಾಜದ ಶಕ್ತಿಸ್ವರೂಪಿಣಿ, ದೇವಿ ಕನ್ನಿಕಾಪರಮೇಶ್ವರಿ ಕುರಿತ ಕಥೆ ಇದೆ. ಅದು ಮುಗಿಯುತ್ತಿದ್ದಂತೆ ಪ್ರಿಯಾ ಕನ್ನಡದಲ್ಲಿ 'ರೌಡಿ ರಾಣಿ' ಆಗಲಿದ್ದಾರೆ.

ಪ್ರಿಯಾ ಹಾಸನ್ ಕನ್ನಡದಲ್ಲಿ 'ರೌಡಿ ರಾಣಿ' ಮತ್ತು 'ಗಂಡು ಬೀರಿ' ಹೆಸರಿನ ಎರಡು ಚಿತ್ರಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಮೊದಲು ರೌಡಿ ರಾಣಿ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಡಿದೆ. ಮಾಲಾಶ್ರೀ ದಾರಿಯಲ್ಲಿ ಸಾಗುತ್ತಿರುವ ನಟಿ ಎಂಬ ಬಿರುದನ್ನು ಪಡೆದಿರುವ ಈ ನಟಿ ರೌಡಿ ರಾಣಿ ನಂತರ ಏನಾಗುವರೋ ಎಂಬುದು ಸದ್ಯದ ಸಸ್ಪೆನ್ಸ್. (ಒನ್ ಇಂಡಿಯಾ ಕನ್ನಡ)

English summary
Actress Priya Hassan acts in Kannada movie 'Rowdy Rani'. Now she is acting in devotional role in Telugu movie 'Sri Vasavi Vaibhavam. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada