ಮಂಗಳೂರಿನಲ್ಲಿ ರಾಧಿಕಾ, ಅನುಷ್ಕಾ ಶೆಟ್ಟಿ ಭೇಟಿ ಯಾಕೆ?

ಅನುಷ್ಕಾ ಹಾಗೂ ರಾಧಿಕಾ ಈ ಇಬ್ಬರ ಹುಟ್ಟೂರೂ ಮಂಗಳೂರು. ಅಲ್ಲಿ ಹುಟ್ಟಿ ಬೆಳೆದ ಇಬ್ಬರಿಗೂ ಮಂಗಳೂರಿನ ಕಡೆ ಆಗಾಗ ಹೋಗುವ ಅಭ್ಯಾಸವಿದೆ. ರಾಧಿಕಾರಂತೂ ರೆಗ್ಯಲರ್ ಆಗಿ ಪುತ್ತೂರಿಗೆ ಭೇಟಿ ನೀಡುತ್ತಾರೆ. ಅದರಂತೆ ಇಂದೂ ಕೂಡ ಇವರುಗಳು ದೇವರ ದರ್ಶನಕ್ಕಾಗಿ ಹೋಗಿದ್ದಾರೆ. ಅಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ ಅಷ್ಟೇ.
ಅನುಷ್ಕಾ ಶೆಟ್ಟಿ ತೆಲುಗಿನಲ್ಲಿ ಅರುಂಧತಿ ಚಿತ್ರದ ಮೂಲಕ ಫೇಮಸ್ ಆಗಿ ಈಗ 'ಆಲ್ ಇಂಡಿಯಾ' ಖ್ಯಾತಿ ಗಳಿಸಿದವರು. ಸದ್ಯದಲ್ಲೇ ಕನ್ನಡ ಚಿತ್ರದಲ್ಲೂ ನಟಿಸಲಿದ್ದಾರೆಂಬ ಸುದ್ದಿ ಇದೆ. ಬ್ರೇಕಿಂಗ್ ನ್ಯೂಸ್ ಅಂದರೆ ಅನುಷ್ಕಾ ಮನೆಯನ್ನು ಹೈದ್ರಾಬಾದ್ ನಿಂದ ಚೆನ್ನೈಗೆ ಶಿಪ್ಟ್ ಮಾಡುತ್ತಿದ್ದಾರೆ. ತಮಿಳು ಸಿನಿಮಾದತ್ತ ಆಕರ್ಷಿತರಾಗಿದ್ದಾರೆ ಅನಷ್ಕಾ. (ಒನ್ ಇಂಡಿಯಾ ಕನ್ನಡ)
English summary
Actress Radhika and Anushka Shetty went to Puttur Temple today.


Click it and Unblock the Notifications