ಮತ್ತೆ, ಸದಾ ಸುದ್ದಿಯಲ್ಲಿರುವ ಶ್ರುತಿಯ ಡಬ್ಬಲ್ ಗೇಮ್

Shruti
ಈ ವಾರದ ತಾರೆ ಶ್ರುತಿ ಎಂದು ಘಂಟಾಘೋಷವಾಗಿ ಹೇಳಬಹುದು. ಇತ್ತೀಚಿಗೆ ಪತಿ ಮಹೇಂದರ್ ರಿಂದ ವಿಚ್ಛೇದನ ತೆಗೆದುಕೊಂಡ ಶ್ರುತಿ, ಕರ್ನಾಟಕವನ್ನು ಮೀರಿ ಸುದ್ದಿಯಾದರು. ಇದೀಗ ಮತ್ತೊಂದು ಸುದ್ದಿ ಮಾಡಿ ಮತ್ತೆ ಸುದ್ದಿಯ ಕೇಂದ್ರಬಿಂದು ಆಗಿದ್ದಾರೆ. ಹೌದು, ಶ್ರುತಿ ಯಾಕೆ ಸದಾ ಸುದ್ದಿ ಮಾಡುತ್ತಲೇ ಇರುತ್ತಾರೆ?

ಬಹುಶಃ ಅದು ಅವರಿಗೂ ಗೊತ್ತಿರಲಿಕ್ಕಿಲ್ಲ. ಅವರು ಅವರ ಪಾಡಿಗೆ ಅವರಿಗನ್ನಿಸಿದ್ದನ್ನು ಮಾಡುತ್ತಾ ಇರುತ್ತಾರೆ. ಅವರಿಗಿರುವ ಪ್ರಸಿದ್ಧಯಿಂದ ಅದು ಸುದ್ದಿಯಾಗುತ್ತದೆ, ಅಷ್ಟೇ! ಇದೀಗ ಬಂದ ಸುದ್ದಿ, 'ಕಲ್ಪನಾ' ಚಿತ್ರದಲ್ಲಿ ಉಪೇಂದ್ರರ ಅತ್ತಿಗೆಯಾಗಿ ಶ್ರುತಿ ನಟಿಸುತ್ತಿದ್ದಾರೆ. ಅಂದಮೇಲೆ, ಹಾರರ್ ಚಿತ್ರದಲ್ಲಿ ಕಣ್ಣೀರು ಗ್ಯಾರಂಟಿ.

ತಮಿಳು ರೀಮೇಕ್ 'ಕಾಂಚನಾ' ಕನ್ನಡದಲ್ಲಿ 'ಕಲ್ಪನಾ' ಆಗಿ ತೆರೆಗೆ ಬರುತ್ತಿದೆ. ಉಪೇಂದ್ರ ನಾಯಕತ್ವದ ಈ ಚಿತ್ರದಲ್ಲಿ ಸಾಯಿಕುಮಾರ್ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಲಕ್ಷ್ಮೀ ರೈ ನಾಯಕಿ. ಇದೀಗ ಶ್ರುತಿ ಸೇರಿಕೊಂಡಿದ್ದಾರೆ. ಚಿತ್ರಕ್ಕೆ ರಾಮ್ ನಾರಾಯಣ್ ನಿರ್ದೇಶನವಿದೆ. ಒಟ್ಟಿನಲ್ಲಿ ಶ್ರುತಿ ಡಬ್ಬಲ್ ಗೇಮ್ ಆಡಿದ್ದಾರೆ. ಒಂದು ವಿಚ್ಛೇದನ, ಇನ್ನೊಂದು ಕಲ್ಪನಾದಲ್ಲಿ ನಟನೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada Actress Shruti took divorce from Mahender. Now she acts in Upendra's movie Kalpana. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X