ದರ್ಶನ್ ಜಾಗ್ವಾರ್ ಕಾರಿನಲ್ಲಿ ಏನುಂಟು, ಏನಿಲ್ಲ

By Super

ಚಾಲೆಂಜಿಂಗ್ ಸ್ಟಾರ್ ಕಳೆದ ವಾರ (ಫೆಬ್ರವರಿ 16, 2012) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಅಂದು ಅವರ ಪತ್ನಿ ವಿಜಯಲಕ್ಷ್ಮೀ, ಜಾಗ್ವಾರ್ XJR ಕಾರನ್ನು ಪತಿ ದರ್ಶನ್ ಅವರಿಗೆ ಉಡುಗೊರೆ ನೀಡಿದ್ದಾರೆ. ಈ ಸಮಾಚಾರ ಕೂಡ ಯಾರಿಗೂ ಹೊಸತಲ್ಲ. ಈ ಕಾರಿನ ಬೆಲೆ ರು. 1.80 ಕೋಟಿ ಎನ್ನಲಾಗಿದೆ. ಆದರೆ ಆ ಕಾರಿನಲ್ಲಿ ಏನೇನು ಸೌಲಭ್ಯಗಳಿವೆ ? ಡೋರ್ ತೆಗೆದು ಒಳಗೆ ಬನ್ನಿ..

ದಟ್ಟ ನೀಲಿ ಬಣ್ಣದ ಈ ಕಾರು ಎಕ್ಸ್ ಜೆ ಆರ್ ಮಾಡೆಲ್ ಆಗಿದ್ದು, ಬಲು ಆಕರ್ಷಣೀಯ ರೂಪ ಹೊಂದಿದೆ. ವಿ 8 ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು, 4,200 ಸಿಸಿ ಸಾಮರ್ಥ್ಯ ಹೊಂದಿದೆ. 400 ಹಾರ್ಸ್ ಹಾಗೂ 560 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಸ್ಪೋರ್ಟ್ ಕಾರುಗಳಲ್ಲಿಯೇ ಅತಿ ಹೆಚ್ಚು ಸಾಮರ್ಥ್ಯ ಹೊಂದಿರುವ ಕಾರು ಎಂಬುದು ಇದರ ಹೆಗ್ಗಳಿಕೆ.

ನಾಲ್ಕು ಬಾಗಿಲಿನ ಈ ಕಾರಿಗೆ ಉತ್ತಮ ಗುಣಮಟ್ಟದ ಸೀಟು ಹಾಗೂ ಇಂಟೀರಿಯರ್ ವಿನ್ಯಾಸವಿದೆ. 12.3 ಇಂಚಿನ ಗ್ಲಾಸ್ ಸ್ಕ್ರೀನ್ ಹೊಂದಿದ್ದು ಉತ್ತಮ ಗ್ಯಾಡ್ಜೆಟ್ ಸಾಧನ ಅಳವಡಿಸಲಾಗಿದೆ. ಆಡಿಯೋ ಸಿಸ್ಟಮ್, ಟಚ್ ಸ್ಕ್ರೀನ್ ಹೊಂದಿರುವ ಹೈ ಡೆಫನಿಷನ್ ಟೆಲಿಫೋನ್ ಇದರಲ್ಲಿದೆ. ಪಾರ್ಕಿಂಗ್ ಸೆನ್ಸರ್, ಏರ್ ಬ್ಯಾಗ್, ಕ್ರೂಷ್ ಕಂಟ್ರೋಲ್ ಹಾಗೂ ಅಡ್ವಾನ್ಸ್ಡ್ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ.

ಈ ಜಾಗ್ವಾರ್ ಹೊಸ ಕಾರು ಬರುವುದಕ್ಕಿಂತ ಮೊದಲು ದರ್ಶನ್ ಅವರಲ್ಲಿ, ದುಬೈನಿಂದ ಆಮದಾಗಿರುವ ಹಮ್ಮರ್ ಎಚ್3, ಆಡಿ ಎ6, ಟೊಯೊಟಾ ಫಾರ್ಚೂನರ್ ಕಾರುಗಳಿದ್ದವು. ಈಗ ಜಾಗ್ವಾರ್ ನಲ್ಲಿ ದರ್ಶನ್ ಜಾಲಿ ರೈಡ್ ಮಾಡುತ್ತಿದ್ದಾರೆ. ಪಕ್ಕದಲ್ಲಿ ಕುಳಿತು ವಿಜಯಲಕ್ಷ್ಮಿ ವಿಜಯದ ನಗೆ ಬೀರುತ್ತಿದ್ದಾರೆ.

More from Filmibeat

English summary
Read about what facilities are there in Darshan Jaguar Car gifted by Vijayalakshmi, on his celebrated 35th Birthday on 16th Feb, 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X