For Quick Alerts
  ALLOW NOTIFICATIONS  
  For Daily Alerts

  ಯಾರಿಗೂ ಹೇಳ್ಬೇಡಿ ಫೇಸ್‌ಬುಕ್‌ಗೆ ದೊಡ್ಡಣ್ಣ ಬಂದವ್ರೆ!

  By Rajendra
  |

  ಸಾಮಾನ್ಯವಾಗಿ ರಾಜಕೀಯ ಪರಿಭಾಷೆಯಲ್ಲಿ ದೊಡ್ಡಣ್ಣ ಎಂದರೆ ಅಮೆರಿಕಾ ಎಂದರ್ಥ. ಆದರೆ ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡಣ್ಣ ಎಂದರೆ ಹಾಸ್ಯ ನಟ ದೊಡ್ಡಣ್ಣ ಹೊರತು ಇನ್ಯಾರು ಇರಲಿಕ್ಕೆ ಸಾಧ್ಯ? ಹೌದು ನಾವು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗ ದೊಡ್ ದೊಡ್ಡಣ್ಣನ ಬಗ್ಗೆ.

  ದೊಡ್ಡಣ್ಣ ಒಂದು ಡೈಲಾಗ್ ಹೊಡೆದರೆ ಸಾಕು ಇಡೀ ಸಭೆಗೆ ಸಭೆಯೇ ಗೊಳ್ಳೆಂದು ನಗುತ್ತದೆ. ಅದೇ ದೊಡ್ಡಣ್ಣ ನಕ್ಕರು ಅನ್ನಿ ಇಡೀ ಊರೇ ಬೆಚ್ಚಿಬೀಳುತ್ತದೆ! ಅದು ದೊಡ್ಡಣ್ಣನ ದೊಡ್ಡತನ! ಅದೆಲ್ಲಾ ಸರಿ ವಿಷಯ ಏನು ಹೇಳಿ ಅಂತೀರಾ. ನೀವು ಕೇಳೋದು ಹೆಚ್ಚಾ ನಾವು ಹೇಳೋದು ಹೆಚ್ಚಾ.

  ವಿಷಯ ಇಷ್ಟೇ. ದೊಡ್ಡಣ್ಣ ಫೇಸ್ ಬುಕ್‌ಗೆ ಲಗ್ಗೆ ಹಾಕಿದ್ದಾರೆ ಎಂದರೆ ನೀವು ನಂಬ್ತೀರಾ? ಹೇಳಿ ಕೇಳಿ ದೊಡ್ಡಣ್ಣನಿಗೆ ಮೊದಲೇ ಅಪಾರ ಅಭಿಮಾನಿ ಬಳಗವಿದೆ. ಇನ್ನು ಫೇಸ್‌ಬುಕ್ ಆ ಬುಕ್ಕು ಈ ಬುಕ್ಕು ಎಂದರೆ ಅಭಿಮಾನಿಗಳು ಸುಮ್ಮನಿರುತ್ತಾರಾ. ನಾ ಮುಂದು ತಾ ಮುಂದು ಎಂದು ದೊಡ್ಡಣ್ಣನ ಹಿಂದೆ ಬೀಳುತ್ತಾರೆ ಅಷ್ಟೇ.

  ಈಗ ಆಗಿರುವುದು ಹಾಗೆ. ಫೇಸ್‌ಬುಕ್‌ನಲ್ಲಿ ದೊಡ್ಡಣ್ಣ ಹಿಂದೆ ಒಂದು ಬಳಗ ಸೃಷ್ಟಿಯಾಗಿದೆ. ದೊಡ್ಡಣ್ಣನನ್ನು ಸದ್ಯಕ್ಕೆ ಅವರ 82 ಮಂದಿ ಅಭಿಮಾನಿಗಳು ಹಿಂಬಾಲಿಸುತ್ತಿದ್ದಾರೆ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ದೊಡ್ಡಣ್ಣ ಮೂಲತಃ ಶಿವಮೊಗ್ಗ ಜಿಲ್ಲೆಯವರು. ದೊಡ್ಡಣ್ಣನ ಫೇಸ್‌ಬುಕ್ ಫ್ಯಾನ್ ಕ್ಲಬ್‌ಗೆ ನೀವು ಇನ್ನೂ ಸೇರ್ಕೊಂಡಿಲ್ವಾ?

  ಕನ್ನಡ ಚಿತ್ರರಂಗದಲ್ಲಿ ಏನೇ ಜಗಳ, ಒಳಜಗಳ, ಪಿತೂರಿಗಳಿದ್ದರೂ ದೊಡ್ಡಣ್ಣ ಮಾತ್ರ ಕ್ಯಾರೆ ಎನ್ನುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಅಷ್ಟೆ. ಆನೆ ನಡೆದದ್ದೇ ದಾರಿ ಎಂಬಂತಿರುತ್ತಾರೆ. ಕನ್ನಡ ಚಿತ್ರರಂಗದ ಅಜಾತಶತ್ರು ಎಂದರೆ ತಪ್ಪಾಗಲಾರದು. ಹಾಗಾಗಿ ಅವರನ್ನು ಕಂಡು ದೊಡ್ಡಣ್ಣ ನೀವು ಹೀಗೇ ಇರಬೇಕಣ್ಣಾ ಎಂದು ಬಯಸುವವರೇ ಹೆಚ್ಚು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X