ದಾಖಲೆ ಬೆಲೆಗೆ ದರ್ಶನ್ ಚಿಂಗಾರಿ ಟಿವಿ ರೈಟ್ಸ್ ಸೇಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಿಂಗಾರಿ' ಟಿವಿ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗಿದೆ. ಸರಿಸುಮಾರು ರು.8 ಕೋಟಿ ಬಂಡವಾಳದದಲ್ಲಿ ಬಿ ಮಹದೇವ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಚಿತ್ರದ ನಾಯಕಿ ದೀಪಿಕಾ ಕಾಮಯ್ಯ.
'ಚಿಂಗಾರಿ' ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದ್ದು ಕೇವಲ ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಅಶ್ವಿನ್ ಆಡಿಯೋ ಮೂಲಕ ಜನವರಿ 2ರಂದು ಚಿಂಗಾರಿ ಆಡಿಯೋ ಬಿಡುಗಡೆ ಮಾಡುತ್ತಿದ್ದೇವೆ. ಈಗಾಗಲೆ 'ಚಿಂಗಾರಿ' ಟಿವಿ ರೈಟ್ಸ್ ರು.2 ಕೋಟಿಗೆ ಮಾರಾಟವಾಗಿದೆ ಎಂದು ಮಹದೇವ್ ತಿಳಿಸಿದ್ದಾರೆ.
ದರ್ಶನ್ ಅವರ ವೃತ್ತಿಜೀವನದಲ್ಲಿ 'ಚಿಂಗಾರಿ' ಚಿತ್ರ ವಿಶೇಷವಾಗಿ ನಿಲ್ಲಲಿದೆ. ಚಿತ್ರದಲ್ಲಿನ ಏಳು ಸಾಹಸ ಸನ್ನಿವೇಶಗಳು ಮೈನವಿರೇಳಿಸುತ್ತವೆ. ಚಿತ್ರದಲ್ಲಿ ಭಾವನಾ ಅವರ ಐಟಂ ಸಾಂಗ್ ಕಣ್ಮನ ಸೆಳೆಯುತ್ತದೆ. ಒಟ್ಟಿನಲ್ಲಿ 'ಚಿಂಗಾರಿ' ನಿರ್ಮಾಪರು ಖುಷಿಯಲ್ಲಿ ಈಜಾಡುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
The TV rights of Challenging Star Darshan starrer Chingari has been sold for a record price. The film directed by Harsha A. Sources say that the TV rights of Chigari for mammoth Rs. 2 crore.


Click it and Unblock the Notifications











