ದೀಪಿಕಾ ಜೂನಿಯರ್ ಮಲ್ಯ ಸಂಬಂಧದಲ್ಲಿ ಬಿರುಕು
ಇಷ್ಟು ದಿನ ಗಿಳಿ ಗೊರವಂಕದಂತಿದ್ದ ಜೋಡಿ ಇನ್ನೇನು ಹಾವು ಮುಂಗುಸಿಯಂತಾಡುವ ದಿನಗಳು ದೂರದಲ್ಲಿಲ್ಲ. ಹಾಗಂತ ಬಾಲಿವುಡ್ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ಬಗ್ಗೆ ಮಾತನಾಡಿಕೊಳ್ಳುತ್ತಿದೆ. ದೀಪಿಕಾ ಈಗ ಹಳೆಯ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಹೆಗಲಿಗೆ ಕೈಹಾಕಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ.
ಇಬ್ಬರೂ ಈಗ ಒಂದೇ ಚಿತ್ರದಲ್ಲಿ (ಹೇ ಜವಾನಿ ಹೈ ದಿವಾನಿ) ಅಭಿನಯಿಸುತ್ತಿದ್ದು ರಣಬೀರ್ ಮತ್ತು ದೀಪಿಕಾ ನಡುವೆ ಒಣಗಿ ಹೋಗಿದ್ದ ಪ್ರೀತಿ ಈಗ ಮತ್ತೆ ಚಿಗುರಿದೆಯಂತೆ. ಇಬರಿಬ್ಬರು ಮತ್ತೆ ಒಂದಾಗುತ್ತಿರುವುದು ಜೂನಿಯರ್ ಮಲ್ಯಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆಯಂತೆ!
ಆರಂಭದಲ್ಲಿ ಜೂನಿಯರ್ ಮಲ್ಯ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲವಂತೆ. ಈಗ ಇವರಿಬ್ಬರ ವರಸೆ ನೋಡುತ್ತಿದ್ದರೆ ಮತ್ತೆ ಎಲ್ಲಿ ಒಂದಾಗಿ ತಮ್ಮ ಪ್ರೀತಿಗೆ ಮಣ್ಣು ಹಾಕುತ್ತಾರೋ ಎಂಬ ಕಳವಳದಲ್ಲಿ ಮಲ್ಯ ಕಾಲು ಸುಟ್ಟುಕೊಂಡ ಬೆಕ್ಕಿನ ತರಹ ಆಗಿದ್ದಾರಂತೆ. ಬಾಲಿವುಡ್‌ನಲ್ಲಿ ಹೊಗೆಯಾಡುತ್ತಿರುವ ಲೇಟೆಸ್ಟ್ ಸುದ್ದಿಯಿದು. (ಏಜೆನ್ಸೀಸ್)
More from Filmibeat
English summary
Siddhartha Mallya would definitely have apprehensions about his lady love Deepika Padukone reuniting with her ex-lover Ranbir Kapoor. But then this Mallya kid will finally get a dose of his own medicine.
ದೀಪಿಕಾ ಪಡುಕೋಣೆ ಸಿದ್ಧಾರ್ಥ್ ಮಲ್ಯ ಬಾಲಿವುಡ್ ರಣಬೀರ್ ಕಪೂರ್ ಗಾಸಿಪ್ deepika padukone siddhartha mallya bollywood ranbir kapoor gossip


Click it and Unblock the Notifications











